ಕುಣಿಗಲ್ : ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಇಂದು ಕಲ್ಪತರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಹಿತರಕ್ಷಣ ಸಮಿತಿಯ ವತಿಯಿಂದ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು,,
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ “ಕೀರ್ತಿ ಕುಮಾರ್ “ನಮ್ಮ ಎಲ್ಲಾ ಕಾರ್ಮಿಕರು ಸರ್ಕಾರದಿಂದ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು,,
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ” ವಿ ಶಿವಶಂಕರ್” ರವರು ಮಾತನಾಡಿ ಸರ್ಕಾರ ಕಾರ್ಮಿಕರ ದಿನಾಚರಣೆಗೆ ರಜೆ ಘೋಷಣೆ ಮಾಡಲಾಗಿದೆ, ಜಿಲ್ಲಾ ಆಡಳಿತ ಹಾಗೂ ತಾಲೂಕು ಆಡಳಿತ ಎಲ್ಲಾ ಇಲಾಖೆಗಳಲ್ಲಿ ಕಾರ್ಮಿಕರ ಜಯಂತಿಯನ್ನು ಆಚರಣೆ ಮಾಡಬೇಕು,
60 ವರ್ಷದ ನಂತರ 3000 ಪೆನ್ಷನ್ ನೀಡಬೇಕು, ಕಾರ್ಮಿಕರ ಕಾರ್ಡ್ ಮಾಡಿಸುವುದಕ್ಕೆ ಹಲವಾರು ದಾಖಲಾತಿಗಳನ್ನು ಕೇಳುತ್ತಾರೆ, ಸರ್ಕಾರದಿಂದ ಸಿಗುವಂತಹ ಸೌಲತ್ತುಗಳನ್ನು ಮೂರು ತಿಂಗಳಿಗೊಮ್ಮೆ, ಕಾರ್ಮಿಕರ ಸಭೆಯನ್ನು ಏರ್ಪಡಿಸಿ, ಕಾರ್ಮಿಕರಿಗೆ ಸಿಗುವಂತಹ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಬೇಕು ಎಂದು ಮಾತನಾಡಿದರು,,
ಸಂತೋಷ್ ಲಾಡ್ ರವರು ಕಾರ್ಮಿಕ ಸಚಿವರಾದ ಮೇಲೆ ಬೇರೆ ಬೇರೆ ಕಾನೂನುಗಳನ್ನು ತಂದು ಕಾರ್ಮಿಕರನ್ನು ದಿಕ್ಕು ತಪ್ಪಿಸುತ್ತಿದ್ದಾರೆ, ಸಂಘದ ಖಜಾಂಚಿ,ಆರ್, ಎನ್, ಹಟ್ಟಿರಂಗಯ್ಯ ನವರು ಬೇಸರ ವ್ಯಕ್ತಪಡಿಸಿದರು, ಮೊದಲು ಮೂರು ವರ್ಷಕ್ಕೊಮ್ಮೆ ರಿನಿವಲ್ ಇತ್ತು, ನಂತರ ವರ್ಷಕ್ಕೊಮ್ಮೆ ಮಾಡಿರುವುದು ತೀವ್ರ ಬೇಸರದ ಸಂಗತಿ ಎಂದರು, ಮೂರು ವರ್ಷಕ್ಕೊಮ್ಮೆ ಲೇಬರ್ ಕಾರ್ಡ್ ಅನ್ನು ರಿನಿವಲ್ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ,,
ಅಖಿಲ ಕರ್ನಾಟಕ ಡಾ. ಜಿ ಪರಮೇಶ್ವರ್ ಯುವ ಸೈನ್ಯ ರಾಜ್ಯಾಧ್ಯಕ್ಷರಾದ ರಂಗನಾಥ್ ಮಾತನಾಡಿ ಈ ಕಾರ್ಮಿಕರ ದಿನಾಚರಣೆ ನಮಗೆ ತುಂಬಾ ಸಂತಸ ತರುವಂತಹ ದಿನ, ಸರ್ಕಾರದಿಂದ ಸಿಗುವಂತಹ ಸವಲತ್ತುಗಳನ್ನು ಕಾರ್ಮಿಕರಿಗೆ ಮನವರಿಕೆ ಮಾಡಿ ತಿಳಿಸುತ್ತಿದ್ದಾರೆ, ಪ್ರತಿ ಹಳ್ಳಿಗೂ ಭೇಟಿ ಕೊಟ್ಟು ಕಾರ್ಮಿಕರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ,ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ ಎಂದು ಮಾತನಾಡಿದರು,,,
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಕೀರ್ತಿ ಕುಮಾರ್, ಉಪಾಧ್ಯಕ್ಷರಾದ ಶ್ರೀನಿವಾಸಯ್ಯ ಆರ್, ಪ್ರಧಾನ ಕಾರ್ಯದರ್ಶಿ ಎನ್ ದೇವರಾಜು, ಕಾರ್ಯದರ್ಶಿ ಜ್ಯೋತಿ ಜಿ, ಸಹ ಕಾರ್ಯದರ್ಶಿ ಸಿಕ್ಕರಾಮಯ್ಯ, ಕಜಂಚಿ ಆರ್ ಎನ್ ಹಟ್ಟಿ ರಂಗಯ್ಯ, ರಂಗಸ್ವಾಮಿ ಕಾರ್ಯ ಸಮಿತಿ ಸದಸ್ಯರು, ಶ್ರೀನಿವಾಸ್ ಜಿಸಿ, ಗಂಗಾಧರ್, ಈಶ್ವರ್, ವಿ ಶಿವಶಂಕರ್, ಡಿಸಿ ವರದರಾಜು, ದಲಿತ್ ನಾರಾಯಣ್, ರಂಗಸ್ವಾಮಿ ಆರ್,ನಗುತಾ ರಂಗನಾಥ್, ಬುಲೆಟ್ ಮೋಹನ್, ಎಂ ಶ್ರೀ ಕೃಷ್ಣರಾಜು, ಗಿರಿಯಪ್ಪ, ಜಿ ಕೆ ಗಂಗಾಧರಯ್ಯ, ಕೆ ಆರ್ ಎಸ್ ಪಕ್ಷ ಶ್ರೀನಿವಾಸ್, ನವೀನ್ ಕುಮಾರ್, ಹಾಗೂ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು,,,
ವರದಿ : ನರಸಿಂಹರಾಜು

