ಬೆಳಗಾವಿ : ಸುವರ್ಣ ವಿಧಾನ ಸೌಧದ ಪರಿಷತ್ತಿನ ಸಭಾಂಗಣದ ಸದನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಸಿ.ಟಿ.ರವಿ ಪ್ರತಿಕೃತಿಗೆ ಶನಿವಾರ ಲಕ್ಷ್ಮೀ ಅಭಿಮಾನಿಗಳು ಚಪ್ಪಲಿ ಸೇವೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಸಿಪಿಎಡ್ ಮೈದಾನದಿಂದ ಸಿ.ಟಿ.ರವಿ ಪ್ರತಿಕೃತಿಯನ್ನು ಚನ್ನಮ್ಮ ವೃತ್ತದವರೆಯೂ ಶವಯಾತ್ರೆ ಮಾಡಿ ರವಿ ವಿರುದ್ಧ ಧಿಕ್ಕಾರ ಕೂಗಿದರು.
ವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಸಿ.ಟಿ.ರವಿ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಕೊನೆಯ ದಿನದ ಅಧಿವೇಶನದಲ್ಲಿ ಸಿ.ಟಿ.ರವಿ ಆಡಿರುವ ಮಾತು ಲಕ್ಷ್ಮಿಹೆಬ್ಬಾಳ್ಕರ್ ಮನಸ್ಸಿಗೆ ಘಾಸಿಯುಂಟು ಮಾಡಿದೆ. ಆದ್ದರಿಂದ ಸಿ.ಟಿ.ರವಿಯನ್ನು ವಿಧಾನಪರಿಷತ್ ಸದಸ್ಯತ್ವ ಸ್ಥಾನದಿಂದ ವಜಾಗೊಳಿಸಿ ಜೈಲಿಗಟ್ಟಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ವರದಿ : ದಯಾನಂದ