ಬೆಂಗಳೂರು: ಇತ್ತೀಚೆಗಷ್ಟೇ ಅನುಮಾನಾಸ್ಪದ ಸಾವಿಗೀಡಾಗಿದ್ದ ಕೆಎಎಸ್ ಅಧಿಕಾರಿ ಪತ್ನಿಯೂ ಆಗಿರುವ ಹೈಕೋರ್ಟ್ ವಕೀಲರಾದ (High Court Lawyer) ಚೈತ್ರಾ ಗೌಡ ಅವರದ್ದು ಕೊಲೆಯಲ್ಲ, ಆತ್ಮಹತ್ಯೆ (Suicide) ಎಂದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಚೈತ್ರಾ ಅವರ ಪ್ರಕರಣಕ್ಕೆ ಪುಷ್ಠಿಕೊಡುವಂತೆ ಡೆತ್ ನೋಟ್ ಸಹ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳ ಮೂಲಗಳು ತಿಳಿಸಿವೆ.
ಇದೇ ತಿಂಗಳ ಮೇ 11ರಂದು ವಕೀಲೆ ಚೈತ್ರಾ ಗೌಡ ಸಂಜಯನಗರದ ಅಣ್ಣಯ್ಯಪ್ಪ ಲೇಔಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ ಚೈತ್ರ ಅವರ ಮನೆಯವರು ಮಾತ್ರ ಕೊಲೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ದೂರಿನ ಅನ್ವಯ ಕೆಎಎಸ್ ಅಧಿಕಾರಿ (KAS, Officer) ಶಿವಕುಮಾರ್‌ನನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಇದನ್ನೂ ಓದಿ: ಬೆಳಗಾವಿಯಲ್ಲಿ ಕ್ರಿಕೆಟ್ ಜಗಳ ತಾರಕಕ್ಕೇರಿ ಗಲಾಟೆ -ಓರ್ವ ಪೊಲೀಸ್ ಪೇದೆಗೆ ಗಾಯ
ವಿಚಾರಣೆ ವೇಳೆ ಶಿವಕುಮಾರ್, ಪತ್ನಿಯೊಂದಿಗೆ ಯಾವುದೇ ವೈಷಮ್ಯ ಇರಲಿಲ್ಲ. ಹಣಕಾಸಿನ ತೊಂದರೆಯೂ ಇರಲಿಲ್ಲ. ಆದ್ರೆ ಇತ್ತೀಚೆಗೆ ಖಿನ್ನತೆಗೆ ಒಳಗಾಗಿದ್ದರು ಅಂತ ಹೇಳಿದ್ದರು. ಈ ನಡುವೆ ಕುಟುಂಬಸ್ಥರೊಂದಿಗೆ ಚೈತ್ರಾ ಮಾತನಾಡುವಾಗ ಮೂರು ತಿಂಗಳ ಹಿಂದೆಯೇ ಸಾಯೋ ಮಾತುಗಳನ್ನಾಡಿದ್ದರು, ಆಗ ಕುಟುಂಬಸ್ಥರೇ ಧೈರ್ಯತುಂಬಿದ್ದರು. ಆನಂತರವೇ ಚೈತ್ರಾ ಹಿಂದೆಯೇ ಡೆತ್ ನೋಟ್ ಬರೆದಿಟ್ಟಿದ್ದರು ಅನ್ನೋ ಮಾಹಿತಿಯೂ ತಿಳಿದುಬಂದಿದೆ. ಇದನ್ನೂ ಓದಿ: ನನ್ನ ತಾಳ್ಮೆ ಪರೀಕ್ಷಿಸಬೇಡ, ಎಲ್ಲೇ ಇದ್ದರೂ ಕೂಡಲೇ ಸ್ವದೇಶಕ್ಕೆ ಬಾ – ಪ್ರಜ್ವಲ್‌ಗೆ ಹೆಚ್‌ಡಿಡಿ ಸೂಚನೆ

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಸಂಜಯ್ ನಗರದ ಪೊಲೀಸರಿಗೆ, ಮನೆಯಲ್ಲಿ ಸಿಕ್ಕ ಡೆತ್ ನೋಟ್ ಚೈತ್ರಾ ಅವರೇ ಬರೆದಿದ್ದಾರೆ ಅನ್ನೋದು ಕನ್ಫರ್ಮ್ ಆಗಿದೆ. ಮರಣೋತ್ತರ ಪರೀಕ್ಷೆಯಲ್ಲೂ ಆಕೆ ಆತ್ಮಹತ್ಯೆ ಮಾಡಿಕೊಂಡಿರೋದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸಂಜಯ್‌ನಗರ ಪೊಲೀಸರು ತನಿಖೆ ನಡೆಸಿ ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ್ದಾರೆ. ಇದನ್ನೂ ಓದಿ: ಸಂಕಷ್ಟ ನಿವಾರಣೆಗಾಗಿ ದೇವರ ಮೊರೆ ಹೋದ ರೇವಣ್ಣ– ದತ್ತನ ನಿರ್ಗುಣ ಪಾದುಕೆಗಳಿಗೆ ವಿಶೇಷ ಪೂಜೆ ಸಲ್ಲಿಸಿದ ರೇವಣ್ಣ

