ಬೆಳಗಾವಿ : ಇಲ್ಲಿನ ನ್ಯಾಯಾಲಯದಲ್ಲಿ ಪ್ರಾಕ್ಟಿಸ್ ಮಾಡುತ್ತಿರುವ ಕೋಟ್ಟಿ ವಕೀಲರ ವಿರುದ್ದ ಕ್ರಮ ಕೈಗೊಂಡು ವಕೀಲರಿಗೆ ನ್ಯಾಯ ಒದಗಿಸುವಂತೆ ಅಗ್ರಹಿಸಿ ಕೋರ್ಟ್ ಕಲಾಪ ಭಹಿಷ್ಕರಿಸಿ ವಕೀಲರಿಂದ ಪ್ರತಿಭಟನೆ ನಡೆಸಲಾಯಿತು.
ಇಂದು ಬೆಳಗಾವಿ ನಗರದ ವಕೀಲರ ಸಂಘದಿಂದ ನ್ಯಾಯಾಲಯದಲ್ಲಿ ಪ್ರಾಕ್ಟಿಸ್ ಮಾಡುತ್ತಿರುವ ಕೆಲ ಡುಬ್ಲಿಕೇಟ್ ವಕೀಲರ ವಿರುದ್ಧ ಕ್ರಮ ಕೈಗೊಂಡು ನ್ಯಾಯವಾದಿಗಳಿಗೆ ನ್ಯಾಯ ಒದಗಿಸುವಂತೆ ಅಗ್ರಹಿಸಿ ಕೋರ್ಟ್ ಕಲಾಪ ಭಹಿಷ್ಕರಿಸಿ ಘೋಷಣೆ ಕೂಗಿ ಕೋರ್ಟ್ ಸರ್ಕಲನಲ್ಲಿ ರಸ್ತೆ ತಡೆದು ಪ್ರತಭಟಿಸಿದರು.
ಬೆಳಗಾವಿ ನ್ಯಾಯಾಲಯದಲ್ಲಿ ಮೂರು ಜನ ಡುಬ್ಲಿಕೇಟ್ ವಕೀಲರು ಯಾವುದೇ ಪರೀಕ್ಷೆಯನ್ನು ಉತ್ತಿರ್ಣರಾಗದೇ ಪ್ರಾಕ್ಟಿಸ್ ಮಾಡುತ್ತಿದ್ದಾರೆ. ಇದರ ವಿರುದ್ಧ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲ. ಆದರೇ ಡುಬ್ಲಿಕೇಟ್ ಮಹಿಳಾ ವಕೀಲರು ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದಾರೆಂದು ದೂರುದಾರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ದೂರು ನೀಡುತ್ತಲೇ ತಮ್ಮ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಅಟ್ರಾಸಿಟಿ ಕೇಸ್ ದಾಖಲಿಸಲಾಗಿದೆ. ಇದರ ಹಿಂದೆ ಯಾರ ಕೈವಾಡ ಇದೆ ಎಂಬುದನ್ನು ಪೊಲೀಸರು ಯೋಗ್ಯ ತನಿಖೆ ನಡೆಸಿಬೇಕು ಎಂದು ನ್ಯಾಯವಾದಿಗಳ ಮೇಲೆ ಅನ್ಯಾಯ ಮಾಡಲಾಗುತ್ತಿದೆ ಎಂದು ಪ್ರತಿಭಟಿಸಲಾಯಿತು.
ವರದಿ : ದಯಾನಂದ. ಎಂ.ಬೆಳಗಾವಿ.