ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಮಾರು ಐದು ತಿಂಗಳಿಂದ ಜೈಲಲ್ಲಿರುವ ನಟ ದರ್ಶನ್ಗೆ ಇಂದು ಹೈಕೋರ್ಟ್ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದೆ.
ದರ್ಶನ್ ಜಾಮೀನು ಪ್ರಕ್ರಿಯೆಯನ್ನು ಮಧ್ಯಾಹ್ನದೊಳಗೆ ಪೂರ್ಣಗೊಳಿಸಿದ ನಂತರ ಕೋರ್ಟ್ ಜಾಮೀನು ಆದೇಶವನ್ನು ಬಳ್ಳಾರಿ ಸೆಂಟ್ರಲ್ ಜೈಲಿಗೆ ಮಧ್ಯಾಹ್ನ 4 ಗಂಟೆ ಸುಮಾರಿಗೆ ಕಳುಹಿಸಲಾಗಿತ್ತು. ಇದರ ಬೆನ್ನಲ್ಲಿಯೇ ಸಂಜೆ 5.30ರ ವೇಳೆ ನಟ ದರ್ಶನ್‌ನನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ದರ್ಶನ್ ಜೈಲಿನಿಂದ ಹೊರಗೆ ಬರುವಾಗ ಎಲ್ಲ ಜಾಮೀನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಹೊರಗೆ ಬಂದಿದ್ದಾರೆ. ಆದರೆ, ಜೈಲಿನಿಂದ ಹೊರಗೆ ಬರುವಾಗ ಕುಂಟುತ್ತಾ ಬಂದಿದ್ದು, ಬೆನ್ನು ನೋವು ತೀವ್ರವಾಗಿ ಉಲ್ಬಣಗೊಂಡಿದೆ ಎಂಬ ಲಕ್ಷಣಗಳು ಕಂಡುಬರುತ್ತಿವೆ.
ಬಳ್ಳಾರಿ ಸೆಂಟ್ರಲ್ ಜೈಲಿನಿಂದ ಹೊರಗೆ ಬಂದಿದ್ದಾರೆ. ಜೈಲಿನಿಂದ ಹೊರಗೆ ಬರುವಾಗ ನಟ ದರ್ಶನ್ ಕುಂಟುತ್ತಾ ಹೊರಗೆ ಬಂದಿದ್ದಾರೆ. ಇನ್ನು ನಟ ದರ್ಶನ್ ಕರೆದೊಯ್ಯಲು ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ಬಳ್ಳಾರಿ ಜೈಲಿನ ಬಳಿ ಕಾಯುತ್ತಿದ್ದರೆ.
ಬೇಲ್ ಸಿಕ್ಕಿದ್ದು ಅವರಿಗೆ ನೀಡಿರುವಷ್ಟೇ ಸಂತೋಷವನ್ನು ಅವರ ಅಭಿಮಾನಿಗಳಿಗೂ ನೀಡಿದೆ. ನಗರದ ಸೆಂಟ್ರಲ್ ಜೈಲು ಮುಂದೆ ನೆರೆದಿರುವ ಇವರೆಲ್ಲ ನಟನ ಅಭಿಮಾನಿಗಳು. ದರ್ಶನ್ ಹೊರಬರುವುದನ್ನೇ ಕಾಯುತ್ತಾ ನಿಂತಿದ್ದರೆ.
ದರ್ಶನ್ ಕರೆದುಕೊಂಡು ಹೋಗಲು ಸೆಂಟ್ರಲ್ ಜೈಲಿನ ಬಳಿ ಇರುವ ಕನಕದುರ್ಗಮ್ಮ ದೇವಸ್ಥಾನದ ಬಳಿ ಕಾರುಗಳನ್ನು ನಿಲ್ಲಿಸಲಾಗಿದೆ. ಇನ್ನು ದರ್ಶನ್ ಬಿಡುಗಡೆಯಾಗಿ ಹೊರಗೆ ಬರುತ್ತಿದ್ದಂತೆ ಅವರನ್ನು ನೋಡಲು ನೂರಾರು ಅಭಿಮಾನಿಗಳು ಜಮಾವಣೆಗೊಂಡಿದ್ದಾರೆ. ಮುಂಜಾಗ್ರತೆಯ ಕ್ರಮವಾಗಿ ಪೊಲೀಸರು ಜೈಲು ಮುಂದಿನ ರಸ್ತೆಯನ್ನು ಬ್ಯಾರಿಕೇಡ್ ಗಳಿಂದ ಬ್ಲಾಕ್ ಮಾಡಿದ್ದಾರೆ.
ಎಮೋಷನಲ್ ಪೋಸ್ಟ್ ಹಂಚಿಕೊಂಡ ಪುತ್ರ ವಿನೀಶ್ :
ಕೊಲೆ ಪ್ರಕರಣದಲ್ಲಿ ಆರೋಪಿ ದರ್ಶನ್ ಬಳ್ಳಾರಿ ಜೈಲಿನಿಂದ ಬಿಡುಗಡೆಯಾದ ಹಿನ್ನೆಲೆ ಪುತ್ರ ವಿನೀಶ್ ರಿಯಾಕ್ಷನ್ ಕೊಟ್ಟಿದ್ದಾರೆ. ಕಿಂಗ್ ಇಮೋಜಿ ಹಾಕಿ ಅಪ್ಪನ ಆಗಮನದ ಸಂತಸವನ್ನು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದಾರೆ.
ದರ್ಶನ್ 6 ವಾರಗಳ ಕಾಲ ಮಧ್ಯಂತರ ಜಾಮೀನು (Bail) ಸಿಕ್ಕ ಹಿನ್ನೆಲೆ ಜೈಲಿನಿಂದ ರಿಲೀಸ್ ಆಗಿದ್ದಾರೆ. ಇದೇ ಖುಷಿಯಲ್ಲಿ ಕಿಂಗ್ ಇಮೋಜಿ ಹಾಕಿ ತಂದೆ ಮತ್ತು ಮಗನ ಬಾಂಧವ್ಯದ ಸಾಂಗ್ ಅನ್ನು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ದರ್ಶನ್ ಪುತ್ರ ವಿನೀಶ್ ಹಂಚಿಕೊಂಡಿದ್ದಾರೆ. ತಂದೆಯ ಆಗಮನದ ಸಂಭ್ರಮದಲ್ಲಿದ್ದಾರೆ.
ಇನ್ನೂ ನಾಳೆ (ಅ.31) ವಿನೀಶ್ ಹುಟ್ಟುಹಬ್ಬದ ಸಂಭ್ರಮ. ದೀಪಾವಳಿ ಹಬ್ಬ ಮತ್ತು ಹುಟ್ಟುಹಬ್ಬವನ್ನು ಎರಡನ್ನು ತಂದೆಯ ಜೊತೆ ವಿನೀಶ್ ಆಚರಿಸಿಕೊಳ್ಳಲಿದ್ದಾರೆ.

