ನೆಲಮಂಗಲ : ಹೆಸರಘಟ್ಟ ಜಾನುವಾರು ಸಂವರ್ಧನ ಕೇಂದ್ರದ ಬಳಿ ಹಸುವಿನ ಮೇಲೆ ಚಿರತೆ ದಾಳಿ ಮಾಡಿ ಹಸುವನ್ನ ಕೊಂದು ಮುಕ್ಕಾಲು ಭಾಗ ಮಾಂಸ ಭಕ್ಷ್ಯ ಮಾಡಿ ಹೋದ ಘಟನೆ ನಡೆದಿದೆ.
ಹೆಸರಘಟ್ಟದ ಗೋವಿಂದರಾಜು ಅವರಿಗೆ ಸೇರಿದ ಹಸುವನ್ನು ಚಿರತೆ ಕೊಂದ ತಿಂದಿದೆ. ಚಿರತೆ ಉಪಟಳ ತಾಳಲಾರದೆ ಗ್ರಾಮಸ್ಥರ ಅಕ್ರೋಶ ವ್ಯಕ್ತಪಡಿಸಿದ್ದು ಬೀರಯ್ಯನಪಾಳ್ಯ, ಕೋಡಿಹಳ್ಳಿ,ಬ್ಯಾತ,ಕಾಕೋಳು ಗ್ರಾಮದ ಜನರಿಗೆ ಚಿರತೆ ಆತಂಕ ಹುಟ್ಟಿಸಿದೆ.
ಅರಣ್ಯ ಇಲಾಖೆ ಸಿಬ್ಬಂಧಿಗಳು ಚಿರತೆ ಸೆರೆಗೆ ಬೋನ್ ಇಟ್ಟು ಕಾರ್ಯಚರಣೆ ನಡೆಸಿದ್ದಾರೆ. ಹಾಗೂ ಸತ್ತ ಹಸುವಿನ ಮಾಲಿಕರಿಗೆ ಪರಿಹಾರ ಕೊಡಿಸುವ ಭರವಸೆ ನೀಡಿದ RFO ಶಿವಪ್ಪ ಹೊಸಮನಿ ನೀಡಿದ್ದಾರೆ.