ಮುಳಬಾಗಿಲು ನಗರಕ್ಕೆ ಉಪ ಲೋಕಾಯುಕ್ತ ತಂಡ ಏಕಾಏಕಿ ದಾಳಿ
ಸರ್ಕಾರ ವೈದ್ಯರ ವಿರುದ್ಧ ಸ್ವಯಂ ಪ್ರಕರಣ ದಾಖಲು
ಅಧಿಕಾರಿಗಳಾರಾದ ಬಿ ವೀರಪ್ಪ ಹಾಗೂ ತಂಡದಿಂದ ದಾಳಿ
ಮುಳಬಾಗಿಲು ತಾಲ್ಲೂಕು ಹಲವು ಕಚೇರಿಗಳ ಮೇಲೆ ದಾಳಿ
ಮುಳಬಾಗಿಲು ನಗರಸಭೆ ಕಚೇರಿ ಹಾಗೂ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆ ಮೇಲೆ ಉಪ ಲೋಕಾಯುಕ್ತ ಅಧಿಕಾರಿಗಳಾದ ಬಿ.ವೀರಪ್ಪ ರವರ ತಂಡ ಧಿಡೀರನೆ ದಾಳಿ ನಡೆಸಿದ್ದಾರೆ.. ಇನ್ನು ದಾಳಿ ವೇಳೆ ನಗರಸಭೆಯ ಸುಮಾರು 36 ವಾಹನಗಳಿಗೆ ಫಿಟ್ನೆಸ್ ಪ್ರಮಾಣ ಪತ್ರ ಇಲ್ಲದೆ ಇರುವುದು ಬೆಳಕಿಗೆ ಬಂದಿರುವುದಲ್ಲದೆ ಪೌರಕಾರ್ಮಿಕರೇ ಗುಮಾಸ್ತರಾಗಿ ಕಾರ್ಯನಿರ್ವತ್ತಿರುವಂತಹ ಪ್ರಕರಣ ಬೆಳಕಿಗೆ ಬಂದಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಕಡತಗಳ ಪರಿಶೀಲನೆ ಹಾಗೂ ಔಷಧಿಗಳ ಪರಿಶೀಲನೆ ನಡೆಸಿದಾಗ ಅವಧಿ ಮುಗಿದಿರುವ ಔಷಧಿಗಳನ್ನು ಪೂರೈಕೆ ಮಾಡುವುದು ಬೆಳಕಿಗೆ ಬಂದಿದೆ. ಇದರೊಂದಿಗೆ ಸಮವಸ್ತ್ರ ಇಲ್ಲದೆ ಕರ್ತವ್ಯ ನಿರ್ವಹಿಸುತ್ತಿರುವುದು ಮತ್ತು ಸರ್ಕಾರಿ ವೈದ್ಯರು ಖಾಸಗಿ ಕ್ಲಿನಿಕ್ ನಡೆಸುವ ಪ್ರಕರಣ ಕೂಡ ಬೆಳಕಿಗೆ ಬಂದಿದೆ.
ವರದಿ : ಅರುಣ್ ಕುಮಾರ್

