ಬೆಂಗಳೂರು : ಕಾಮಿಡಿ ಕಿಲಾಡಿಗಳು ಸೀಸನ್ ಖ್ಯಾತಿಯ ಮಡೆನೂರು ಮನು ವಿರುದ್ದ ಕನ್ನಡ ಚಲನ ಚಿತ್ರ ವಾಣಿಜ್ಯ ಮಂಡಳಿ ಕ್ರಮ ತೆಗೆದುಕೊಂಡಿದ್ದು, ನಟನನ್ನು ಚಿತ್ರರಂಗದಿಂದ ಬ್ಯಾನ್ ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ಮಡೆನೂರು ಮನು ಅಭಿನಯದ ಮೊದಲ ಸಿನಿಮಾನೇ, ಕೊನೆಯ ಸಿನಿಮಾ ಆಗಿದೆ.
ಮಡೆನೂರು ಮನು ಅಭಿನಯದ ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾ ರಿಲೀಸ್ ಮುನ್ನ ದಿನವೇ ಮನು ಅತ್ಯಾಚಾರ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದರು. ಹೀಗಿರುವಾಗಲೇ ಮಡೆನೂರು ಮನುಗೆ ಮತ್ತೊಂದು ದೊಡ್ಡ ಶಾಕ್ ಎದುರಾಗಿದೆ, ಕನ್ನಡದ ಹಿರಿಯ ನಟರ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದ ಮಡೆನೂರು ಮನು ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಲಾಗಿದೆ.
ನಟಿಗೆ ಕಿರುಕುಳ, ಲೈಂಗಿಕ ದೌರ್ಜನ್ಯ, ವಂಚನೆ ಪ್ರಕರಣದಲ್ಲಿ ನಟ ಮಡೆನೂರು ಮನು ಜೈಲಿನಲ್ಲಿದ್ದಾರೆ. ಸಾಲು ಸಾಲು ಗಂಭೀರ ಆರೋಪ ಮಧ್ಯೆ ಮಡೆನೂರು ಮನುರನ್ನ ಕನ್ನಡ ಕಿರುತರೆ ಹಾಗೂ ಸ್ಯಾಂಡಲ್‌ವುಡ್‌ನಿಂದಲೇ ಬ್ಯಾನ್ ಮಾಡಲಾಗಿದೆ.
ಆಡಿಯೋ ವೈರಲ್ ಬೆನ್ನಲ್ಲೇ ಮಡೆನೂರು ಮನು ಅವರನ್ನು ಕಿರಿತೆರೆ ಹಾಗೂ ಹಿರಿತೆರೆಯಿಂದ ಬ್ಯಾನ್ ಮಾಡಲಾಗಿದೆ. ನಟನ ಬಂಧನದ ಬಳಿಕ ನಟ ಶಿವರಾಜ್‌ಕುಮಾರ್, ದರ್ಶನ್, ಧ್ರುವ ಸರ್ಜಾ ಅವರ ಬಗ್ಗೆ ಕೆಟ್ಟದಾಗಿ ಮಾತಾಡಿರೋ ಆಡಿಯೋ ವೈರಲ್ ಆಗಿತ್ತು. ಆ ಆಡಿಯೋದಲ್ಲಿ ಶಿವಣ್ಣ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದಕ್ಕೆ ರಾಜ್ ಕುಮಾರ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಶಿವಣ್ಣನ ಅಭಿಮಾನಿಗಳು ದೂರು ಕೊಟ್ಟ ಬೆನ್ನಲ್ಲೇ ಫಿಲ್ಮ್ ಚೇಂಬರ್ ಮಹತ್ವದ ತಿರ್ಮಾನ ಕೈಗೊಂಡಿದೆ.
ಆಡಿಯೋ ವೈರಲ್ ಬೆನ್ನಲ್ಲೇ ಮಡೆನೂರು ಮನು ಅವರನ್ನು ಕಿರಿತೆರೆ ಹಾಗೂ ಹಿರಿತೆರೆಯಿಂದ ಬ್ಯಾನ್ ಮಾಡಲಾಗಿದೆ. ಅಲ್ಲದೇ ಮಡೆನೂರು ಮನು ವಿರುದ್ಧ ವಾಣಿಜ್ಯ ಮಂಡಳಿಯೂ ದೂರು ಕೊಡ್ತೀವಿ ಅಂತ ಹೇಳಿದೆ. ವೈರಲ್ ಆಗಿರುವ ಆಡಿಯೋ ಕುರಿತಾಗಿ ಮಾತಾಡಿದ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು, ಎಲ್ಲಾ ಸಂಸ್ಥೆಗಳನ್ನೂ ಕರೆದು ಸಭೆ ಮಾಡಿದ್ದೇವೆ. ದುರಹಂಕಾರಿ ಮಾತನ್ನ ಆಡಿದ್ದಾರೆ. ನಾವು ಅಸಹಕಾರ ತೋರಿಸಬೇಕು ಎಂದು ತೀರ್ಮಾನಿಸಲಾಗಿದೆ. ಈಗಾಗಲೇ ಜೈಲಲ್ಲಿದ್ದಾರೆ. ಎಲ್ಲಾ ಅಂಗ ಸಂಸ್ಥೆಗಳಿಂದಲೂ ಸಹಾಯ ಮಾಡುವುದಿಲ್ಲ. ಅವರು ಯಾವುದೇ ರೀತಿಯಲ್ಲೂ ಚಟುವಟಿಕೆ ಮಾಡುವಂತಿಲ್ಲ ಎಂದು ಹೇಳಿದ್ದಾರೆ.

