ಲಖನೌ: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಐತಿಹಾಸಿಕ ಮತ್ತು ಜಗತ್ತಿನ ಅತಿದೊಡ್ಡ ಧಾರ್ಮಿಕ ಉತ್ಸವವಾದ ಮಹಾ ಕುಂಭಮೇಳದಲ್ಲಿ ಫೆಬ್ರವರಿ 5ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳಲ್ಲಿದ್ದು,ಅಂದು ಅವರು ಗಂಗಾ ನದಿಯಲ್ಲಿ ಪುಣ್ಯ ಸ್ನಾನ ಮಾಡಲಿದ್ದಾರೆ.
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ವೈಭವದ ಕುಂಭಮೇಳದಲ್ಲಿ ಈಗಾಗಲೇ ಅನೇಕ ಗಣ್ಯಾತಿಗಣ್ಯರು, ಸಾಮಾನ್ಯರು, ಸಾಧು ಸಂತರು ಪುಣ್ಯಸ್ನಾನ ಮಾಡಿದ್ದಾರೆ. ಪ್ರಧಾನಿ ಮೋದಿ ಅವರು ಕುಂಭಮೇಳಕ್ಕೆ ಯಾವಾಗ ಹೋಗುತ್ತಾರೆ ಎಂಬ ಸಹಜ ಕುತೂಹಲ ಹಲವರಲ್ಲಿತ್ತು.ಇದೀಗ ಮೋದಿ ಅವರ ಕುಂಭಮೇಳದ ಭೇಟಿಯ ಕುರಿತು ಅಧಿಕೃತ ಮಾಹಿತಿ ದೊರೆತಿದೆ. ಅವರು ಫೆಬ್ರವರಿ 5ರಂದು ಕುಂಭಮೇಳದಲ್ಲಿ ಭಾಗಿಯಾಗಲ್ಲಿದ್ದು ಪುಣ್ಯ ಸ್ನಾನ ಮಾಡಿ ಪೂಜೆ ಸಲ್ಲಿಸಲಿದ್ದಾರೆ.
ಮೂಲಗಳ ಪ್ರಕಾರ ಫೆಬ್ರವರಿ 5 ಕ್ಕೆ ಪ್ರಧಾನಿ ಮೋದಿ ಪ್ರಯಾಗ್ ರಾಜ್ ಕುಂಭಮೇಳಕ್ಕೆ ಆಗಮಿಸಲಿದ್ದಾರೆ. ಅಂದು ಅವರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲಿದ್ದಾರೆ ಎಂಬ ಮಾಹಿತಿಯಿದೆ. ಜನವರಿ 27 ರಂದು ರಾಷ್ಟ್ರಪತಿ ದೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನ್ಕರ್, ಗೃಹ ಸಚಿವ ಅಮಿತ್ ಶಾ ಕೂಡ ಪುಣ್ಯ ಸ್ನಾನ ಮಾಡಲಿದ್ದಾರೆ. ಅಂದು ದೆಹಲಿ ವಿಧಾನಸಭಾ ಚುನಾವಣೆ ಕೂಡ ಇದೆ. ಬಿಜೆಪಿಯ ಗೆಲುವಿಗೆ ಮೋದಿ ಆ ದಿನದಂದೇ ಪುಣ್ಯ ಸ್ನಾನ ಮಾಡುತ್ತಿರಬಹುದಾ ಎಂಬ ಕುತೂಹಲ ಹಲವರಿಗಿದೆ.

