ಕುಣಿಗಲ್ : ದೊಂಬರಟ್ಟಿ ಶ್ರೀ ಸತ್ಯ ಶನೇಶ್ಚರ ಪುಣ್ಯಕ್ಷೇತ್ರದಲ್ಲಿ ಲೋಕ ಕಲ್ಯಾಣಕ್ಕಾಗಿ ಶ್ರೀ ಶನೇಶ್ಚರ ಮಹಾಯಾಗ ಹಮ್ಮಿಕೊಳ್ಳಲಾಗಿತ್ತು ಎಂದು ಕ್ಷೇತ್ರದ ಧರ್ಮಾಧಿಕಾರಿ ಶ್ರೀ ಆನಂದ ಗುರೂಜಿ ತಿಳಿಸಿದರು.
ಕುಣಿಗಲ್ ತಾಲೂಕು ಯಡಿಯೂರು ಹೋಬಳಿಯ ದೊಂಬರಹಟ್ಟಿ ಶ್ರೀ ಸತ್ಯ ಶನೇಶ್ಚರ ಸ್ವಾಮಿಯ ಪುಣ್ಯ ಕ್ಷೇತ್ರದಲ್ಲಿ ನಾಡಿನ ಜನತೆಯ ಒಳಿತಿಗಾಗಿ ಭಕ್ತರು ಶ್ರೀ ಶನೇಶ್ವರನ ಮಹಾತ್ಮನ ದೃಷ್ಟಿ ಪರಿಹಾರಕ್ಕಾಗಿ ಲೋಕಕಲ್ಯಾಣದ ಅಭಿವೃದ್ಧಿಗಾಗಿ ಸಕಲ ಮಾನವ ಜೀವಿಗಳು ಈ ನಾಡಿನಲ್ಲಿ ಸಮೃದ್ಧವಾಗಿ ಆರೋಗ್ಯ ಬೆಳೆ ವೃದ್ಧಿಸುವಂತೆ ಪ್ರಾರ್ಥಿಸಿ ದೊಂಬರಹಟ್ಟಿಯ ಶ್ರೀ ಶನೇಶ್ವರ ಸ್ವಾಮಿ ಪುಣ್ಯಕ್ಷೇತ್ರದ ಧರ್ಮಾಧಿಕಾರಿಗಳು ಆದಂತಹ ಶ್ರೀ ಆನಂದ ಗುರೂಜಿಯವರ ನೇತೃತ್ವದಲ್ಲಿ ಶನೇಶ್ಚರ ಮಹಾಯಾಗ ಹಮ್ಮಿಕೊಳ್ಳಲಾಗಿತ್ತು,,
ಈ ಸಂದರ್ಭದಲ್ಲಿ ನಾಡಿನ ವಿವಿಧ ಭಾಗಗಳಿಂದ ಸುಮಾರು 3500 ಕ್ಕೂ ಹೆಚ್ಚು ಭಕ್ತಾದಿಗಳು ಶನೈಶ್ಚರನ ಯಾಗದಲ್ಲಿ ಭಾಗವಹಿಸುವ ಮೂಲಕ ತಮ್ಮ ಭಕ್ತಿ ಸಮರ್ಪಣೆಯನ್ನು ಅರ್ಪಿಸಿದರು ಈ ಒಂದು ಕಾರ್ಯವನ್ನು ಕಲರ್ಸ್ ಕನ್ನಡ ವಾಹಿನಿಯ ಚಾನೆಲ್ ಗುರುಗಳಾದ ವಿದ್ಯಾ ಶಂಕರಾನಂದ ಸರಸ್ವತಿ ಸ್ವಾಮೀಜಿಗಳು ನಡೆಸಿಕೊಟ್ಟರು, ಕ್ಷೇತ್ರದ ವತಿಯಿಂದ ಎಲ್ಲಾ ಭಕ್ತಾದಿಗಳಿಗೆ ನಿರಂತರವಾಗಿ ಅನ್ನದಾಸೋಹವನ್ನು ಕೈಗೊಳ್ಳಲಾಯಿತು, ಈ ಒಂದು ಶನೇಶ್ಚರನ ಮಹಾಯಾಗದಲ್ಲಿ ಸುಮಾರು 25ಕ್ಕೂ ಹೆಚ್ಚು ಆಗಮಿಕರು ಪುರೋಹಿತರು ಭಾಗವಹಿಸುವ ಮೂಲಕ ಈ ಮಹಾ ಯಾಗವನ್ನು ಲೋಕ ಕಲ್ಯಾಣಕ್ಕಾಗಿ ಸಮರ್ಪಿಸಿದರು,,
ಇದೇ ಸಂದರ್ಭದಲ್ಲಿ ಸಾವಿರಾರು ಭಕ್ತರು ಭಾಗವಹಿಸುವ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾಗುವೊಂದಿಗೆ ಶನೇಶ್ಚರ ಸ್ವಾಮಿಗೆ ವಿಶೇಷವಾಗಿ ಅಲಂಕಾರ ಅಭಿಷೇಕ ಕೈಗೊಳ್ಳಲಾಗಿತ್ತು, ಮಂಗಳವಾದ್ಯದೊಂದಿಗೆ ಮಹಾಮಂಗಳಾರತಿ ಕಾರ್ಯಕ್ರಮಗಳು ಜರುಗಿದವು ನಾಡಿನ ಸಮಸ್ತ ಭಕ್ತರಿಗೆ ಕುಲ ಕೋಟಿಗೆ ಒಳ್ಳೆಯದು ಆಗಲೆಂದು ಈ ಶನೇಶ್ಚರ ಯಾಗವನ್ನು ಕೈಗೊಳ್ಳಲಾಗಿದೆ ಎಂದು ಶ್ರೀ ಆನಂದ ಗುರೂಜಿ ರವರು ತಿಳಿಸಿದರು.,,
ವರದಿ : ನರಸಿಂಹರಾಜು ಹೆಚ್