ಬೆಂಗಳೂರು: ನಗರದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ(Janabharathi campus) ಪಿಹೆಚ್‌ಡಿ (PHD) ವಿದ್ಯಾರ್ಥಿ(Student) ಅನುಮಾನಸ್ಪದವಾಗಿ ಸಾವ್ನಪ್ಪಿರುವ ಘಟನೆ ನಡೆದಿದೆ.
ವಿದ್ಯಾರ್ಥಿಯನ್ನು ರಂಗನಾಥ್ ನಾಯಕ್ (27) ಎಂದು ಗುರುತಿಸಲಾಗಿದೆ. ರಂಗನಾಥ್ ಮುಲತಃ ಚಿಕ್ಕಬಳ್ಳಾಪುರದವನು. ಕಳೆದ ಕೆಲ ತಿಂಗಳುಗಳ ಹಿಂದೆ ಬಸ್‌ಕ್ಸಿಡೆಂಟ್ ನಲ್ಲಿ ರಂಗನಾಥ್ ಗಾಯಗೊಂಡಿದ್ದ. ನಂತರ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ. ಹೀಗಾಗಿ ಆಯುರ್ವೇದಿಕ್ ಔಷಧಿ ಪಡೆಯುತ್ತಿದ್ದನು. ಇದನ್ನೂ ಓದಿ: ಪ್ರಜ್ವಲ್ ಪೇನ್‌ಡ್ರೈವ್ ಕೇಸ್: ಪಿಎಂಗೆ ಪತ್ರ ಬರೆದ ಸಿಎಂ
ಬುಧವಾರ ಬೆಳಗ್ಗೆ ಕ್ಯಾಂಟೀನ್‌ಗೆ ಹೋಗಿ ತಿಂಡಿ ತಿಂದು ರೂಮಿಗೆ ಹೋಗಿದ್ದ. ನಂತರ ರೂಮ್ ಲಾಕ್ ಹಾಕಿಕೊಂಡಿದ್ದ. ಮಧ್ಯಾಹ್ನ ರೂಮೇಟ್ ಹೋಗಿ ಬಾಗಿಲು ಬಡಿದಾಗ ತೆಗೆದಿಲ್ಲ. ಹೀಗಾಗಿ ಡೋರ್ ಒಡೆದು ನೋಡಿದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಎನ್‌ಅರ್‌ಬಿಸಿ ಕಜಾಲುವೆಗೆ ಬಿದ್ದು ಇಬ್ಬರು ಯುವಕರು ಸಾವು
ರಂಗನಾಥ್ ಹೇಗೆ ಸಾವನ್ನಪ್ಪಿದ್ದಾನೆ ಅನ್ನೋದು ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವಿಚಾರಣೆಗೆ ಹಾಜರಾಗಲು 7 ದಿನ ಅವಕಾಶ ನೀಡುವಂತೆ ಪ್ರಜ್ವಲ್ ರೇವಣ್ಣ ಮನವಿ

