Salman Khurshid : 2019ರ ಆಗಸ್ಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ಮೋದಿ ಸರ್ಕಾರ ರದ್ದುಗೊಳಿಸಿದ ನಂತರ ಕಾಶ್ಮೀರ ಸಮೃದ್ಧಿಯನ್ನು ಕಂಡಿದೆ ಅಂತ ಹೇಳಿದ್ದಾರೆ. ಅಲ್ಲದೇ 370ನೇ ವಿಧಿ ರದ್ದತಿಯಿಂದ ಜಮ್ಮು ಮತ್ತು ಕಾಶ್ಮೀರ ಭಾರತದ ಉಳಿದ ಭಾಗಗಳಿಂದ ಪ್ರತ್ಯೇಕವಾದ ಪ್ರದೇಶ ಎಂಬ ಗ್ರಹಿಕೆಯನ್ನೂ ಕೊನೆಗೊಳಿಸಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಮೋದಿ ಸರ್ಕಾರದ ಸಾಧನೆಯನ್ನ ಗುಣಗಾನ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿ ರದ್ದತಿಯನ್ನು ಕಾಂಗ್ರೆಸ್‌ನ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಸ್ವಾಗತಿಸಿದ್ದಾರೆ.
ಪಾಕಿಸ್ತಾನ ಚೋದಿತ ಭಯೋತ್ಪಾದನೆ ಬಗ್ಗೆ ವಾಸ್ತವಾಂಶ ತಿಳಿಸಲು ಭಾರತವು ಜೆಡಿ (U) ಸಂಸದ ಸಂಜಯ್ ಝಾ ನೇತೃತ್ವದ ಸರ್ವಪಕ್ಷ ನಿಯೋಗವನ್ನು ಇಂಡೋನೇಷ್ಯಾಗೆ ಕಳುಹಿಸಿದೆ. ಇದರ ಭಾಗವಾಗಿರುವ ಖುರ್ಷಿದ್ ಮಾತನಾಡುವಾಗ ಆರ್ಟಿಕಲ್ 370 ರದ್ದತಿಯನ್ನ ಶ್ಲಾಘಿಸಿದ್ದಾರೆ.
ಕಾಶ್ಮೀರವು ದೀರ್ಘಕಾಲದ ವರೆಗೆ ಒಂದು ಪ್ರಮುಖ ಸಮಸ್ಯೆ ಎದುರಿಸುತ್ತಿತ್ತು. ಸಂವಿಧಾನದ 370ನೇ ವಿಧಿಯಿಂದಾಗಿ ಅದು ದೇಶದ ಉಳಿದ ಭಾಗಗಳಿಂದ ಪ್ರತ್ಯೇಕವಾಗಿದೆ ಎಂಬ ಭಾವನೆ ಸೃಷ್ಟಿಸಿತ್ತು. ಆದ್ರೆ 2019ರಲ್ಲಿ ಈ ವಿಧಿಯನ್ನ ರದ್ದುಪಡಿಸಲಾಯಿತು. ಈ ಮೂಲಕ ಪ್ರತ್ಯೇಕ ಎನ್ನುವ ಗ್ರಹಿಕೆಯನ್ನು ದೂರಮಾಡಲಾಗಿದೆ ಎಂದು ಹೇಳಿದ್ದಾರೆ.

