ಮಲಯಾಳನಲ್ಲಿ (Malyalam) ಹಲವು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ವೇಣುಗೋಪನ್ (Venugopan) ಇಂದು (ಜೂನ್ 21) ಬೆಳಗ್ಗೆ ನಿಧನರಾಗಿದ್ದಾರೆ. ಅವರು ಸಾವನ್ನಪ್ಪಿದ ಸುದ್ದಿ ಕೇಳಿ ಅವರ ಅಭಿಮಾನಿಗಳಿಗೆ ಆಘಾತವಾಗಿದೆ.
ಅವರು ಸಾವನ್ನಪ್ಪಿದ ಸುದ್ದಿ ಕೇಳಿ ಫ್ಯಾನ್ಸ್‌ಗೆ ಆಘಾತವಾಗಿದೆ.
ಸದ್ಯ ಸಾವಿನ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕೇರಳದ ಚೇರ್ತಲದಲ್ಲಿರುವ ತಮ್ಮ ನಿವಾಸದಲ್ಲಿ ವೇಣುಗೋಪನ್ ವಿಧಿವಶರಾಗಿದ್ದಾರೆ. ಅವರ ಸುದ್ದಿಯನ್ನ ನಟ ಅನೂಪ್ ಮೆನನ್ ಸೋಷಿಯಲ್ ಮೀಡಿಯಾದಲ್ಲಿ ಖಚಿತಪಡಿಸಿದ್ದಾರೆ. 67ನೇ ವಯಸ್ಸಿನ ವೇಣುಗೋಪನ್ ನಿಧನಕ್ಕೆ ಮಾಲಿವುಡ್ ನಟ, ನಟಿಯರು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ಕೈದಿಯಾಗಿ ದಿನ ಕಳೆದ ಪವಿತ್ರಾಗೌಡ!
ಮಲಯಾಳಂ ನಟ ಜಯರಾಮ್ ನಟನೆಯ ‘ಶಾರ್ಜಾ ಟು ಶಾರ್ಜಾ’ ಸಿನಿಮಾಗೆ ವೇಣು ನಿರ್ದೇಶನ ಮಾಡಿದ್ದರು. ಸಾಕಷ್ಟು ಸಿನಿಮಾಗಳಿಗೆ ಡೈರೆಕ್ಷನ್ ಮಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: ದರ್ಶನ್ ಕೊಲೆ ಮಾಡೋ ವ್ಯಕ್ತಿ ಅಲ್ಲ : ಮದ್ದೂರು ಎಂಎಲ್‌ಎ

