-ಭಾರತವಿಲ್ಲದೆ ನಮ್ಮ ಆರ್ಧಿಕತೆ ನಡೆಯಲು ಸಾಧ್ಯವಿಲ್ಲ- ಮಾಲ್ಡೀವ್ಸ್ ವಿದೇಶಾಂಗ ಸಚಿವ
ನವದೆಹಲಿ: ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ, ಮಾಲ್ಡೀವ್ಸ್ (Maldives) ವಿದೇಶಾಂಗ ಸಚಿವ ಮೂಸಾ ಜಮೀರ್ (Moosa Jameer) ಅವರು ಗುರುವಾರ ಭಾರತಕ್ಕೆ (India) ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಜಮೀರ್ ಅವರು ಅಧಿಕಾರ ವಹಿಸಿಕೊಂಡ ನಂತರ ಮೊದಲನೇ ಬಾರಿ ಅವರು ಭಾರತಕ್ಕೆ ಭೇಟಿ ನೀಡುತ್ತೀದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ (Jaishankar) ಅವರೊಂದಿಗೆ ಪರಸ್ಪರ ಹಿತಾಸಕ್ತಿಯ ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚಿಸಲು ಸಭೆ ನಡೆಸಲಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆ 2024: ಮತದಾನದ ಬಳಿಕ ಇವಿಎಂ, ಮತಗಟ್ಟೆ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್‌ಗೆ ಬೆಂಕಿ

ಮಾಲ್ಡೀವ್ಸ್ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತದ ಪ್ರಮುಖ ಕಡಲ ನೆರೆಯ ರಾಷ್ಟ್ರವಾಗಿದೆ. ವಿದೇಶಾಂಗ ಸಚಿವ ಜಮೀರ್ ಅವರ ಭೇಟಿಯು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಹಕಾರಕ್ಕೆ ಮತ್ತಷ್ಟು ವೇಗವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದನ್ನೂ ಓದಿ: ಬೇಸಿಗೆಗೆ ಹೆಚ್ಚಿದ ವಿಷ ಸರ್ಪಗಳು – ಸರ್ಕಾರಿ ಆಸ್ಪತ್ರೆಗಳಲ್ಲಿಲ್ಲ ಸಾಕಾಗುವಷ್ಟು ಔಷಧಿ
ವಿದೇಶಾಂಗ ಸಚಿವ ಮನ್ಸೂರ್ ಮೇ 8-10 ರವರೆಗೆ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಮಾಲ್ಡೀವ್ಸ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇದಕ್ಕೂ ಮುನ್ನ ತಿಳಿಸಿತ್ತು. ಈಗ ಅಧಿಕೃತ ಭೇಟಿ ಗುರುವಾರ ಎಂದು ತಿಳಿಸಿದೆ. ಮೇ 10 ರ ಮೊದಲು ಮಾಲ್ಡೀವ್ಸ್ ನಿಂದ ಮಿಲಿಟರಿ ಸಿಬ್ಬಂದಿಯನ್ನು ಬದಲಾಯಿಸುವುದಾಗಿ ಭಾರತ ಹೇಳಿದ್ದರಿಂದ ಈ ಭೇಟಿ ನಿಗದಿಯಾಗಿದೆ.ಇದನ್ನೂ ಓದಿ: ಬೆಂಗಳೂರಲ್ಲಿ ಸುರಿದ ಮಳೆಗೆ ಬೆನ್ನು ಮೂಳೆ ಮುರಿದುಕೊಂಡ ಟೆಕ್ಕಿ