ಮಂಡ್ಯ ಜಿಲ್ಲೆಯ ಮೇಲುಕೋಟೆಯ ವಿವಾಹಿತ ಶಿಕ್ಷಕಿ ದೀಪಿಕಾ
ಶಿಕ್ಷಕಿ ದೀಪಿಕಾ ಅವರ ಕೊಲೆ ಪ್ರಕರಣದ ಆರೋಪಿಯಾಗಿರುವ ನಿತೀಶ್
ನಿತೀಶ್ ಅವರ ತಂದೆಯ ಬರ್ಬರವಾಗಿ ಹತ್ಯೆ
ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಕಳೆದ ವರ್ಷ ಭಾರೀ ಕುತೂಹಲ ಕೆರಳಿಸಿದ್ದ ಮಂಡ್ಯ ಜಿಲ್ಲೆಯ ಮೇಲುಕೋಟೆಯ ವಿವಾಹಿತ ಶಿಕ್ಷಕಿ ದೀಪಿಕಾ ಅವರ ಕೊಲೆ ಪ್ರಕರಣದ ಆರೋಪಿಯಾಗಿರುವ ನಿತೀಶ್ ಅವರ ತಂದೆಯನ್ನು ಇದೀಗ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಕಳೆದ ವರ್ಷ ಕೊಲೆಯಾಗಿದ್ದ ದೀಪಿಕಾ ಕೇಸ್ ಬಗ್ಗೆ ನೋಡೋದಾದರೆ
ದೀಪಿಕಾ ಕೊಲೆಯಾಗಿ ಎರಡು ದಿನಗಳ ನಂತರ ಅವರ ಶವ ಪೊಲೀಸರಿಗೆ ಸಿಕ್ಕಿತ್ತು. ಇತ್ತ, ಅದೇ ದಿನ ಆರೋಪಿ ನಿತೀಶ್ ಗ್ರಾಮದಿಂದ ನಾಪತ್ತೆಯಾಗಿದ್ದ. ನಾಪತ್ತೆಯಾಗುವ ಮೊದಲು ನಾಟಕವಾಡಿದ್ದ ಆತ, ದೀಪಿಕಾ ನಾಪತ್ತೆಯಾಗಿ ಆಕೆಯ ಶವ ಪತ್ತೆಯಾದ ನಡುವಿನ 2 ದಿನದಲ್ಲಿ ಒಮ್ಮೆ ದೀಪಿಕಾರ ತಂದೆಗೆ ಫೋನ್ ಮಾಡಿದ್ದ, ‘ಅಕ್ಕ ಪತ್ತೆಯಾದರಾ’ ಎಂದು ಕೇಳಿ, ಸಂತಾಪ ಸೂಚಿಸುವ ನಾಟಕವಾಡಿದ್ದ ಮತ್ತು
ದೀಪಿಕಾರವರ ಶವ ಪತ್ತೆಯಾದ ದಿನ ರಾತ್ರಿ, ನಿತೀಶ್ ತನ್ನ ತಂದೆಯ ಮೊಬೈಲಿಗೆ ವಾಟ್ಸ್ ಆ್ಯಪ್ ಸಂದೇಶ ಕಳಿಸಿ, ನಾನು ಮನೆಗೆ ಬರುವುದಿಲ್ಲ. ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ.
ಅಕ್ಕನ ಮದುವೆಯನ್ನು ಮಾಡಿ ಎಂದು ಹೇಳಿ ನಾಪತ್ತೆಯಾಗಿದ್ದ. ಇತ್ತ, ದೀಪಿಕಾಳ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ, ದೀಪಿಕಾರವರು ಕೊಲೆಯಾಗುವ ಮುನ್ನ ಅವರ ಮೊಬೈಲಿಗೆ ನಿತೀಶ್ ಕರೆ ಮಾಡಿದ್ದು ತಿಳಿದುಬಂದಿತ್ತು. ಕಾಲ್ ಡಿಟೇಲ್ಸ್ ತೆಗೆದು ಆತನನ್ನು ವಿಚಾರಿಸಲು ಮುಂದಾದಾಗ ಆತ ನಾಪತ್ತೆಯಾಗಿರುವುದು ತಿಳಿದಿತ್ತು. ಹಾಗಾಗಿ, ಆತನ ಮೇಲೆಯೇ ಪೊಲೀಸರಿಗೆ ಅನುಮಾನ ಬಂದಿತ್ತು
.
ಇಹ ಇಲ್ಲಿ ವಿಷಯ್ ಏನಪ್ಪಾ ಅಂದ್ರೆ ಭಾರೀ ಕುತೂಹಲ ಕೆರಳಿದ್ದ ಮಂಡ್ಯ ಜಿಲ್ಲೆಯ ಮೇಲುಕೋಟೆಯ ವಿವಾಹಿತ ಶಿಕ್ಷಕಿ ದೀಪಿಕಾ ಕೊಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಈಗ ಮಗಳ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಹತ್ಯೆ ಮಾಡಿದ್ದ ಆರೋಪಿಯ ತಂದೆಯನ್ನು ಆಕೆಯ ತಂದೆ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರತಾಲೂಕಿನ ಮಾಣಿಕ್ಯನಹಳ್ಳಿಯಲ್ಲಿ ನಡೆದಿದೆ.ನರಸಿಂಹೇಗೌಡ ಅವರ ಪುತ್ರ ನಿತೀಶ್, ವೆಂಕಟೇಶ್ ಅವರ ಪುತ್ರಿ ದೀಪಿಕಾಳನ್ನು ಕೊಲೆ ಮಾಡಿದ್ದ. ಮಗಳ ಸಾವಿಗೆ ಪ್ರತೀಕಾರವಾಗಿ ಆಕೆಯ ತಂದೆ ವೆಂಕಟೇಶ್ ಆರೋಪಿ ನಿತೀಶ್‌ನ ತಂದೆಯನ್ನು ಇದೀಗ ಹತ್ಯೆ ಮಾಡಿದ್ದಾನೆ.
ಹಾಗಾದ್ರೆ ಏನಿದು ಪ್ರಕರಣ? ಅಂತ ನೋಡೋದಾದ್ರೆ
ಟೀಚರ್ ದೀಪಿಕಾ ಮತ್ತು ನಿತೀಶ್ ಇಬ್ಬರು ಸ್ನೇಹ ಹಾಗೂ ಸಲುಗೆಯಿಂದಿದ್ದರು. ಇದನ್ನು ಗಮನಿಸಿದ ದೀಪಿಕಾ ಗಂಡ ಹಾಗೂ ಕುಟುಂಬಸ್ಥರು ನಿತೀಶ್‌ಗೆ ಎಚ್ಚರಿಕೆ ನೀಡಿದ್ದರು. ಈ ಬಗ್ಗೆ ದೀಪಿಕಾ ಬಳಿ ಪ್ರಶ್ನಿಸಿದಾಗ ಆತ ನನಗೆ ತಮ್ಮ ಇದ್ದಂತೆ ಎಂದು ಹೇಳಿದ್ದಳು. ಕುಟುಂಬಸ್ಥರ ಎಚ್ಚರಿಕೆಯ ಬಳಿಕ ಇಬ್ಬರು ಅಂತರ ಕಾಯ್ದುಕೊಂಡಿದ್ದರು. ದೀಪಿಕಾ ಜೊತೆ ಒಡನಾಟವಿಲ್ಲದೇ ನಿತೀಶ್ ಕೋಪಗೊಂಡಿದ್ದ. ಬಳಿಕ 2024 ಜ. 22ರಂದು ನಿತೀಶ್ ಬರ್ತ್ಡೇ ನೆಪದಲ್ಲಿ ದೀಪಿಕಾಳನ್ನು ಬೆಟ್ಟದ ತಪ್ಪಲಿಗೆ ಕರೆಸಿಕೊಂಡಿದ್ದ. ದೀಪಿಕಾ ಆತನಿಗೆ ಶರ್ಟ್ ಗಿಫ್ಟ್ ಕೊಡಲು ಹೋಗಿದ್ದಳು. ಈ ವೇಳೆ ಇಬ್ಬರ ನಡುವೆ ಜಗಳ ಆರಂಭವಾಗಿ, ಕೊಲೆಯಲ್ಲಿ ಅಂತ್ಯವಾಗಿತ್ತು. ಮಂಡ್ಯ ಪೊಲೀಸರು ಕೊಲೆ ಆರೋಪಿ ನಿತೀಶ್‌ನನ್ನು ಬಂಧಿಸಿದ್ದರು.
ಜೈಲು ಸೇರಿದ್ದ ನಿತೀಶ್ ಜಾಮೀನಿನ ಮೇಲೆ ಹೊರ ಬಂದಿದ್ದ. ತನ್ನ ಮಗಳನ್ನು ಕೊಲೆ ಮಾಡಿದ್ದ ನಿತೀಶ್‌ನನ್ನು ಹೇಗಾದರೂ ಮಾಡಿ ಕೊಲೆ ಮಾಡಬೇಕೆಂದು ದೀಪಿಕಾ ತಂದೆ ವೆಂಕಟೇಶ್ ಹೊಂಚು ಹಾಕುತ್ತಿದ್ದ. ಇದೇ ಭಾನುವಾರ ಧರ್ಮಸ್ಥಳದಲ್ಲಿ ನಿತೀಶ್ ತಂಗಿ ಮದುವೆ ನಿಶ್ಚಯವಾಗಿತ್ತು. ಇದರಿಂದ ಅಸಮಾಧಾನಗೊಂಡಿದ್ದ ವೆಂಕಟೇಶ್ ನಿತೀಶ್ ತಂದೆ ನರಸಿಂಹೇಗೌಡರನ್ನ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.ಕೊಲೆ ಮಾಡುವ ವೇಳೆ ನನ್ನ ಮಗಳನ್ನು ಕೊಲೆ ಮಾಡಿ ನಿನ್ನ ಮಗಳ ಮದುವೆ ಮಾಡ್ತಾ ಇದ್ದೀರಾ ಎಂದು ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಮೇಲುಕೋಟೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕೊಲೆ ಆರೋಪಿ ವೆಂಕಟೇಶ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

