ಕೊಣಾಜೆ ಜುಲೈ 10: ನವವಿವಾಹಿತ ಯುವಕನೊಬ್ಬ ಏಕಾಏಕಿ ಕುಸಿದು ಬಿದ್ದು ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ ಘಟನೆ ಉಳ್ಳಾಲದಲ್ಲಿ ನಡೆದಿದೆ.
ಮೃತ ಯುವಕನನ್ನು ಉಳ್ಳಾಲ ತಾಲೂಕಿನ ಮಂಜನಾಡಿ ಪೆರಡೆ ದಿ. ವೆಂಕಪ್ಪ ಹಾಗೂ ಪಾರ್ವತಿ ದಂಪತಿಯ ಪುತ್ರ ಭರತ್ (32) ಎಂದು ಗುರುತಿಸಲಾಗಿದೆ. ನಗರದಲ್ಲಿ ಟೈಲರ್ ಕೆಲಸ ಮಾಡುತ್ತಿದ್ದ ಭರತ್ ನಾಲ್ಕು ದಿನದ ಹಿಂದೆ ರಕ್ತದೊತ್ತಡದಿಂದ ಕುಸಿದು ಬಿದ್ದಿದ್ದರು.
ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ. ಎಪ್ರಿಲ್ 22ರಂದು ಭರತ್ ವಿವಾಹ ಸಮಾರಂಭ ನಡೆದಿದ್ದು, ಪತ್ನಿ ನಗರದ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಭರತ್ ಅವರಿಗೆ ತಾಯಿ ಹಾಗೂ ಮೂವರು ಸೋದರಿಯರು ಇದ್ದಾರೆ.
- ಅಮೆರಿಕಾ-ಇರಾನ್ ಮಾತುಕತೆ : ಇರಾನ್ ಇಂಧನ ತಾಣಗಳ ಮೇಲಿನ ದಾಳಿ ಮುಂದೂಡಿದ ಟ್ರಂಪ್
- ದಾವಣಗೆರೆ ದಕ್ಷಿಣ ಕ್ಷೇತ್ರ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸಮರ್ಥ ಶಾಮನೂರು
- ಬಾಗಲಕೋಟೆ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ನಾಮಪತ್ರ ಸಲ್ಲಿಕೆ
- ಪಶ್ಚಿಮ ಏಷ್ಯಾ ಉದ್ವಿಗ್ನತೆ ನಡುವೆಯೂ ಇಂಧನದ ದೃಷ್ಟಿಯಿಂದ ಭಾರತ ಸುರಕ್ಷಿತವಾಗಿದೆ : ಪ್ರಧಾನಿ ಮೋದಿ
- ವಾಣಿಜ್ಯ ಸಿಲಿಂಡರ್ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಹೋಟೆಲ್ ಉದ್ಯಮಕ್ಕೆ ಕೊನೆಗೂ ರಿಲೀಫ್

