ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಮತ್ತು ಗ್ಯಾಂಗ್ ಬರ್ಬರವಾಗಿ ಕೊಲೆ ಮಾಡಿದೆ. ರೇಣುಕಾಸ್ವಾಮಿಯ (Renukaswamy) ಮರ್ಮಾಂಗಕ್ಕೆ ಹೊಡೆದು, ಚಿತ್ರಹಿಂಸೆ ನೀಡಿ ಕೊಲೆಗೈದಿರುವ ‘ಡಿ ಬಾಸ್’ ಗ್ಯಾಂಗ್ ಸದ್ಯ ಪೊಲಿಸ್ ಕಸ್ಟಡಿಯಲ್ಲಿದೆ.
ಸದ್ಯ ರೇಣುಕಾಸ್ವಾಮಿಯ ಮೃತದೇಃವನ್ನು ಮರಣೊತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದು, ಹುಟ್ಟುರಿನತ್ತ ಸಾಗಿಸಲಾಗಿದೆ. ಅಂತೆಯೇ ಮಂಗಳವಾರ ರಾತ್ರಿ ಚಿತ್ರದುರ್ಗದಲ್ಲಿ ವೀರಶೈವ ಸಂಪ್ರದಾಯದಂತೆ ಅಂತ್ಯಸಂಸ್ಕಾರವೂ ನಡೆದಿದೆ. ಆದರೆ ಈ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಶಾಕಿಂಗ್ ವಿಚಾರಗಳು ಬಯಲಾಗಿದೆ.

ವಿಕ್ಟೋರಿಯಾ ಫಾರೆನ್ಸಿಕ್ ತಜ್ಞರ ಮರಣೋತ್ತರ ಪರೀಕ್ಷೆಯಲ್ಲಿ ರೇಣುಕಾಸ್ವಾಮಿ ಮಮಾರ್ಂಗದ ಮೇಲೆ ಹಲ್ಲೆ ಮಾಡಿರೋದು ದೃಢವಾಗಿದೆ. ಹಾಗಿದ್ರೆ ದೇಹದ ಯಾವ ಭಾಗದಲ್ಲಿ ರಕ್ತ ಬಂದಿತ್ತು? ಎಲ್ಲೆಲ್ಲಿ ಗಾಯ ಆಗಿತ್ತು?, ಸಾವಿಗೆ ಕಾರಣ ಏನು? ಎಂಬುದರ ಕಂಪ್ಲೀಟ್ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಶವ ವಿಲೇವಾರಿ ಮಾಡಲು 30 ಲಕ್ಷಕ್ಕೆ ಡೀಲ್ – ದರ್ಶನ್ ಟೀಂ ಸಿಕ್ಕಿಬಿದ್ದಿದ್ದು ಹೇಗೆ?
ದೇಹದ ಯಾವ ಭಾಗದಲ್ಲಿ ರಕ್ತ ಸೋರಿಕೆಯಾಗಿದೆ?
- ಮಮಾರ್ಂಗದ ಭಾಗದಲ್ಲಿ ರಕ್ತ ಸೋರಿಕೆ: ಮಮಾರ್ಂಗಕ್ಕೆ ಹೊಡೆದಿರೋದು ಮರಣೋತ್ತರ ಪರೀಕ್ಷೆಯಲ್ಲಿ ದೃಢವಾಗಿದೆ. ಮಮಾರ್ಂಗದ ಭಾಗದಲ್ಲಿ ರಕ್ತ ಚೆಲ್ಲಿದೆ.
- ಹೊಟ್ಟೆ ಭಾಗದಲ್ಲಿ ರಕ್ತ ಸೋರಿಕೆ: ಮರದ ಪೀಸ್ ನಿಂದ ಹಲ್ಲೆ ಮಾಡಲಾಗಿದೆ. ಹೊಟ್ಟೆಯ ಭಾಗದಲ್ಲಿ ರಕ್ತ ಚಿಮ್ಮಿದೆ
- ತಲೆಗೆ ಹೊಡೆದಿದ್ದಾರೆ ಆದರೆ ರಕ್ತ ಸೋರಿಕೆಯಾಗಿಲ್ಲ
- ಕೈ ಮತ್ತು ಕಾಲುಗಳಲ್ಲಿ ರಕ್ತ ಬಂದಿದೆ
- ಬೆನ್ನಿನಲ್ಲಿ ರಕ್ತ ಬಂದಿದೆ
- ಎದೆ ಭಾಗದಲ್ಲೂ ರಕ್ತ ಬಂದಿದೆ
ರೇಣುಕಾಸ್ವಾಮಿ ಸಾವಿಗೆ ಕಾರಣ ಏನು ಎಂದುಯ ನೋಡುವುದಾದರೇ, ದೇಹಕ್ಕೆ ಆಘಾತ ಆಗಿ ಸಾವಾಗಿದ್ದು ಇಂದು ಕಾರಣವಾದರೇ, ಮತ್ತೊಂದೆಡೇ ರಕ್ತ ಹೆಪ್ಪುಗಟ್ಟಿ ಸಹ ಸಾವಾಗಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳದು ಬಂದಿದೆ.
ಹಲ್ಲೆಗೆ ಯಾವೆಲ್ಲ ಅಸ್ತ್ರಗಳನ್ನು ಬಳಸಿದ್ದಾರೆ? ಮರದ ಪೀಸ್, ಬೆಲ್ಟ್ ಅನ್ನು ಕೊಲೆಗೆ ಬಳಕೆ ಮಾಡಿದ್ದಾರೆ. ದೇಹದಲ್ಲಿ ಓಟ್ಟಾರೆಯಾಗಿ 15 ಕಡೆ ಗಾಯಗಳಾಗಿವೆ. ಇದನ್ನೂ ಓದಿ: 6 ದಿನಗಳ ಕಾಲ ದರ್ಶನ್ ಸೇರಿ 13 ಜನರಿಗೆ ಗ್ರಿಲ್
ಇನ್ನು ಮುಖ ಮತ್ತು ದವಡೆಯನ್ನ ನಾಯಿಗಳು ಕಿತ್ತು ತಿಂದಿರೋದು ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿದೆ. ಇನ್ನು ವಿಷ ತೆಗೆದುಕೊಂಡಿದ್ದಾರಾ ಅಂತಾ ಪತ್ತೆ ಹಚ್ಚಲು ದ್ರಾವಣಾಂಶಗಳನ್ನ ಪರೀಕ್ಷೆಗೆ ರವಾನೆ ಮಾಡಲಾಗಿದೆ.
ಒಟ್ಟಿನಲ್ಲಿ ಒಂದು ಮೆಸೇಜ್‍ಗೆ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಬೆಂಗಳೂರಿಗೆ ಕರೆತಂದು ಕೊಡಬಾರದ ಚಿಂತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಲ್ಲದೇ ಡಿ ಬಾಸ್ ಗ್ಯಾಂಗ್ ಮೃತದೇಹವನ್ನು ಮೋರಿಗೆ ಎಸೆದಿದೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ಎಲ್ಲಾ ಆರೋಪಿಗಳನ್ನು ಇಂದು ಬೆಳಗ್ಗೆ 9 ಗಂಟೆಯ ಬಳಿಕ ಸ್ಥಳ ಮಹಜರಿನ ಜೊತೆಗೆ ವಿಚಾರಣೆಯನ್ನು ಕೂಡ ಪೊಲೀಸರು ನಡೆಸಲಿದ್ದಾರೆ. ಇದನ್ನೂ ಓದಿ: ಮಿಲಿಟರಿ ವಿಮಾನ ಅಪಘಾತ; ಮಲಾವಿಯ ಉಪಾಧ್ಯಕ್ಷ ಚಿಲಿಮ್ ಸೇರಿ 9 ಮಂದಿ ಸಾವು

