ಬೆಳಗಾವಿ : ಬೆಳಗಾವಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಲೋಕಸಭಾ ಸದಸ್ಯರಾದ್ ಜಗದೀಶ್ ಶೆಟ್ಟರ್ ಅವರು ಮಾತನಾಡಿದರು. ನರೇಂದ್ರ ಮೋದೀಜಿ ಅವರು ಮೂರನೇ ಬಾರಿ ಪ್ರಧಾನ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ ದಿನ ಇಂದು, ಕಳೆದ ಒಂದು ವರ್ಷದಿಂದ ಯಶಸ್ವಿಯಾಗಿ ಸರ್ಕಾರವನ್ನು ನಡೆಸಿರುವ ಅವರು 11 ವರ್ಷಗಳಿಂದ ದೇಶಕ್ಕೆ ಉತ್ತಮ ಆಡಳಿತವನ್ನು ನೀಡಿ ಮಾದರಿ ಪ್ರಧಾನಮಂತ್ರಿಗಳಾಗಿ ಯಶಸ್ವಿಯಾಗಿದ್ದಾರೆ. ನಾನು ಎಲ್ಲರ ಪರವಾಗಿ ಅವರನ್ನು ಅಭಿನಂದಿಸುತ್ತೇನೆ ಎಂದರು
ಜೂ.11,12 ಮತ್ತು13 ಮೂರು ದಿನಗಳ ಕಾಲ ಬೆಳಗಾವಿಯಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮತ್ತು ವಿವಿಧ ಇಲಾಖೆಗಳಿಗೆ ನೀಡಲಾದ ಯೋಜನೆಗಳು ಮತ್ತು ಅನುದಾನಗಳನ್ನು ಕುರಿತು ಮಾಹಿತಿ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಬೃಯಾಸ್ ಸಂಸ್ಥೆ ಆಯೋಜನೆಯ ಜವಾಬ್ದಾರಿ ತೆಗೆದುಕೊಂಡಿದ್ದು ಅದರ ಅಧ್ಯಕ್ಷ ವನೀಶ್ ಗುಪ್ತಾ ಮತ್ತು ಉಪಾಧ್ಯಕ್ಷೆ ನೀತು ಅವರು ಮಾರ್ಗದರ್ಶನ ನೀಡುತ್ತಾರೆ. ಕರ್ನಾಟಕದಲ್ಲಿಯೇ ಪ್ರಪ್ರಥಮ ಬಾರಿಗೆ ಕೇಂದ್ರ ಸರ್ಕಾರದ ಮತ್ತು ಸಂಸದರ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸುವ ಇಂಥ ಕಾರ್ಯಕ್ರಮವನ್ನು ಬೆಳಗಾವಿಯಲ್ಲಿ ಆಯೋಜಿಸಿರುವುದು ನಮಗೆ ಹೆಮ್ಮೆಯ ವಿಷಯ ಎಂದರು.
ವರದಿ. ದಯಾನಂದ. ಎಂ.

