ರಾಮನಗರ: ಜಮೀನು (Property) ಮಾರಿದ ಹಣದ (Money) ವಿಚಾರಕ್ಕೆ ತಂದೆಯೇ (Father) ಮಗನನ್ನು (Son) ಮಚ್ಚಿನಿಂದ ಹಲ್ಲೆ ನಡೆಸಿ ಹತ್ಯೆಗೈದ ಘಟನೆ ತಾಲೂಕಿನ ಲಕ್ಕೋಜನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಭಾಸ್ಕರ್ (31) ಕೊಲೆಯಾದ ವ್ಯಕ್ತಿ. ಕೊಲೆಯಾದವನ ತಂದೆ ಕೃಷ್ಣಪ್ಪ (60) ಹತ್ಯೆಗೈದ ಆರೋಪಿಯಾಗಿದ್ದಾನೆ. ಆರೋಪಿ ಹಾಗೂ ಆತನ ಮಗನ ನಡುವೆ ಜಮೀನು ಮಾರಿದ ವಿಷಯಕ್ಕೆ ಆಗಾಗ ಗಲಾಟೆ ಮಾಡಿಕೊಳ್ಳೂತ್ತಿದ್ದರು. ಅದರಂತೆ ಶುಕ್ರವಾರ ರಾತ್ರಿ ಸಹ ಇಬ್ಬರು ಗಲಾಟೆ ಮಾಡಿಕೊಂಡಿದ್ದಾರೆ. ಇದರಿಂದ ಇನಷ್ಟು ಕೋಪಗೊಂಡ ತಂದೆ ಮಗ ಮಲಗಿದ್ದಾಗ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಇದರಿಂದ ಮಗ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದನ್ನೂ ಓದಿ: 10.76 ಲಕ್ಷ ಪ್ರಯಾಣಿಕರಿಗೆ ದಂಡ ಹಾಕಿದ BMRCL – ಬರೋಬ್ಬರಿ 5.38 ಕೋಟಿ ಸಂಗ್ರಹ
ಸ್ಥಳಕ್ಕೆ ಭೇಟಿ ನೀಡಿದ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪ್ರಜ್ವಲ್‍ಗೆ ಅರ್ಧಿಕ ಸಂಕಷ್ಟ ತಂದೊಡ್ಡಲು SIT ನಿರ್ಧಾರ- 7 ಬ್ಯಾಂಕ್ ಅಕೌಂಟ್‍ಗಳ ಫ್ರೀಝ್ ಗೆ ಸಿದ್ದತೆ
ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಾರವಾರದಲ್ಲಿ ಅಡಿಗೆ ಮಾಡುವ ವೇಳೆ ಗ್ಯಾಸ್ ಸಿಲಿಂಡರ್ ಸ್ಫೋಟ
.

