ಕನ್ನಡ ಚಿತ್ರರಂಗದಲ್ಲಿ ಸಾಹಿತ್ಯ ಒಂದು ರೀತಿಯ ಮುದ ಕೊಡುವುದಾದ್ರೆ ಮತ್ತೊಂದು ಕಡೆ ಸಂಗೀತ ನಿರ್ದೇಶನ ಎಂಥವರನ್ನೂ ಖುಷಿ ಪಡಿಸುತ್ತದೆ.. ಸಂಗೀತ ನಿರ್ದೇಶಕರು ಅಂತಾ ಬಂದ್ರೆ ಅದೊಂದು ದೊಡ್ಡ ಸಾಮ್ರಾಜ್ಯ.. ಆ ಸಾಮ್ರಾಜ್ಯದಲ್ಲಿ ಆಳುವವರು ಯಅರು ಎಂದು ಹುಡುಕುತ್ತಾ ಹೊರಟರೆ ಹಣ ಇರುವವರರ, ರಾಜಕೀಯ ಸಂಪರ್ಕ ಹೊಂದಿರುವವರು, ಅಥವಾ ನಮ್ಮವರು ಎಂದು ಬಿಟ್ಟುಕೊಡದ ಸಮೂಹದವರು.
ಇಂಥಹ ಏಳು ಬೀಳುಗಳ ನಡುವೆ ಬೆಳೆದುಬಂದವರಲ್ಲಿ ಸಂಗೀತ ನಿರ್ದೇಶಕ ಅಭಿಮಾನ್ ರಾಯ್ ಒಬ್ಬರು. ಹಲವು ಹಾಡುಗಳ ಸಂಗೀತ ನಿರ್ದೇಶನ ಅವರನ್ನ ಸೋಲಿಸಿದ್ರೆ.. ಮತ್ತೆ ಹಲವು ಹಾಡುಗಳು ಅವರನ್ನ ಎತ್ತಿ ಕೂರಿಸಿದೆ. ಇವರೊಂದಿಗೆ ವೃತ್ತಿಯಲ್ಲಿ ಬೆಳೆದವರು ಹಲವರು ಇರಬಹುದು.. ಆದರೆ ಒಂದಷ್ಟು ಅವರು ಎತ್ತರ ಮಟ್ಟಕ್ಕೆ ಹೋಗಿದ್ದರೂ.. ಅಭಿಮಾನ್ ರಾಯ್ ಅವರ ಸ್ಮರಣಯೇ ಮಾಡುತ್ತಿಲ್ಲ ಎಂಬುದು ಬೇಸರದ ಸಂಗತಿ ಎನ್ನುವುದು ಅವರ ಒಡನಾಡಿಗಳ ಮಾತು.
ಇದೀಗ ಅಭಿಮಾನ್ ರಾಯ್ ಧೈರ್ಯ ಮಾಡಿ 4 ಹೆಜ್ಜೆಗಳನ್ನ ಮುಂದೆ ಇಟ್ಟಿದ್ದಾರೆ. ಅವರ ಸಹೋದರ ಅಶೋಕ್ ರಾಯ್ ಜೊತೆಗೂಡಿ 2+ ಎಂಬ ಕನ್ನಡ ಚಲನಚಿತ್ರವನ್ನ ಹೊರತರುತ್ತಿದ್ದಾರೆ. ಶೇ. 60ರಷ್ಟು ಚಿತ್ರೀಕರಣ ಮುಗಿದಿದ್ದು, ಹೆಚ್ಚು ಕಡಿಮೆ ಏಪ್ರಿಲ್ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ. 2+ ಚಿತ್ರ ಆರಂಭ ಮತ್ತು ಮಧ್ಯಂತರದ ನಡುವೆ ಒಂದು ಕಥೆ ಹೇಳಿದ್ರೆ.. ನಂತರದಲ್ಲಿ ಮತ್ತೊಂದು ಕಥೆಯನ್ನ ಹೇಳುತ್ತದೆ ಎಂಬುದು ರಾಯ್ ಅವರು ಹೇಳಿದ ಮಾತು.
ಅಭಿಮಾನ್ ರಾಯ್ ಈ ಚಿತ್ರಕ್ಕೆ ಡೈಲಾಗ್, ಸ್ಟೋರಿ, ಸ್ಕ್ರೀನ್ ಪ್ಲೇ ಎಲ್ಲದರ ಜವಾಬ್ದಾರಿ ಹೊತ್ತಿದ್ದಾರೆ. ಇದು ಅವರಿಗೆ ಹೊಸದು ಎನಿಸಿದರೂ.. ಸಾಂದರ್ಭಿಕವಾಗಿ ಎಲ್ಲಿ ಹೇಗೆ ಸನ್ನಿವೇಶ ಬಳಸಿಕೊಳ್ಳಬೇಕು ಎಂಬುದನ್ನ ಅವರು ಅರಿತವರೇ ಆಗಿದ್ದಾರೆ. 2+ ಸಿನಿಮಾದಲ್ಲಿ ಕನ್ನಡದ ಒಂದು ಡ್ಯುಯೆಟ್ ಸಾಂಗ್ ಮಾಡಿದ ಅವರು, ಅದು ಹೇಗಿದೆ ಎಂದು ಮೊದಲು ತಿಳಿಸಿದ್ದು ಲಹರಿ ಆಡಿಯೋ ಸಂಸ್ಥೆಯ ವೇಲು ಅವರ ಬಳಿ. ಅದಕ್ಕವರುಅಭಿಮಾನ್ ರಾಯ್ ಅವರ ಸ್ಫೂರ್ತಿಯನ್ನ ಹೆಚ್ಚಿಸುವಂತೆ ಹೇಳಿದ ಮಾತುಗಳೆಂದರೆ.. ʼಈ ಹಾಡು ಎಲ್ಲಾ ಭಾಷೆಯಲ್ಲೂ ಕೇಳುವಂತಿದೆ.. ಅಷ್ಟೇಯಲ್ಲ ಇಂಪಾಗಿದೆ.. ಸಾಹಿತ್ಯವೂ ಅಷ್ಟೇ ಸೊಗಸಾಗಿದೆ.. ಯಾಕೆ ನೀವು ಎಲ್ಲಾ ಭಾಷೆಗಳಲ್ಲೂ ತರಬಾರದು ಎಂದಾಗ.. ಅಭಿಮಾನ್ ರಾಯ್ ತಡಮಾಡದೇ 34 ಭಾಷೆಗಳಲ್ಲಿ ಹಾಡನ್ನ ಹೊರ ತಂದಿದ್ದಾರೆ. ಚಿತ್ರರಂಗದಲ್ಲಿ ಬಹುಶಃ ಈ ರೀತಿಯ ಚಿಂತನೆ ಯಾರೂ ಮಾಡಿರಲಿಕ್ಕಿಲ್ಲ ಎಂಬುದು ಬಲ್ಲವರ ಕೆಲವರ ಮಾತು. ಇದು ನಿಜವೂ ಕೂಡ ಹೌದು.
ಕನ್ನಡದಲ್ಲೇ 9 ರೀತಿಯಲ್ಲಿ ಡ್ಯುಯೆಟ್ ಸಾಂಗ್ಸ್ ಅನ್ನ ಹೊರತಂದಿರುವ ಜನನಿ ಸಿನಿಮಾ ಸ್ಟುಡಿಯೋಸ್, ಹಿಂದಿ, ತಮಿಳು, ಇಂಗ್ಲೀಷ್, ಪರ್ಶಿಯನ್ ಹೀಗೆ 34 ಗ್ಲೋಬಲ್ ಭಾಷೆಗಳಲ್ಲಿ ಹಾಡನ್ನ ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗೆ ಬೇರೆ ಬೇರೆ ಭಾಷೆಗಳಲ್ಲಿ ಸಾಹಿತ್ಯ ಬರೆಸುವುದು ಇವರಿಗೆ ಸವಾಲಾಗಿತ್ತು. ನುರಿತವರಿಂದಲೇ ಸಾಹಿತ್ಯ ಬರೆಸಿದರು.. ಸಂಗೀತ ಹೇಳಿಸಿದರು.
34 ಭಾಷೆಗಳಲ್ಲಿ ತಯಾರಾದ ಹಾಡನ್ನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 34 ಸಾಧಕರು ಒಂದೇ ವೇದಿಕೆಯಲ್ಲಿ ಬಿಡುಗಡೆ ಮಾಡಿದ್ರು. ಡಾ. ಅಂಬರೀಶ್ ಆಡಿಟೋರಿಯಂನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ನಟ ಬಾಲಾಜಿ, ಸಂಪೂರ್ಣ ನ್ಯೂಸ್ ಪ್ರಧಾನ ಸಂಪಾದಕರಾದ ಅರವಿಂದ್ ಸಾಗರ್ ಸೇರಿದಂತೆ ವಿವಿಧ ಸಾಧಕರು ಭಾಗಿಯಾಗಿದ್ರು.
ಕನ್ನಡ ಚಲನಚಿತ್ರಗಳಲ್ಲಿ ಇಂಥಹ ಹೊಸ ಪ್ರಯತ್ನ ಮಾಡಿರುವುದು ನಿಜಕ್ಕೂ ಒಂದು ರೀತಿಯ ಅತ್ಯುತ್ತಮ ಬೆಳವಣಿಗೆ ಎನ್ನಬಹುದು.. ಇಂಥಹ ಒಂದು ದೊಡ್ಡ ಪ್ರಯತ್ನಕ್ಕೆ ಯಾರೇ ಕೈ ಹಾಕಿದರೂ ಅಂಥವರಿಗೆ ಕನ್ನಡಿಗರು ಕೈ ಬಿಡಬಾರದು. ವಿಶೇಷವಾಗಿ ಜೊತೆಗಿರುವವರು ಇಂಥವರನ್ನು ಹುರಿದುಂಬಿಸಬೇಕು. ಒಂದೊಮ್ಮೆ ಏನು ಮಾಡಲಾಗದಿದ್ದರೂ ಸುಮ್ಮನಿದ್ದರೂ ಲೇಸು.

