ಹುಬ್ಬಳ್ಳಿ: ಹುಬ್ಬಳ್ಳಿ (Hubbali) ಎಂಸಿಎ ವಿದ್ಯಾರ್ಥಿನಿ ಕೊಲೆ ವಿಚಾರವಾಗಿ ವೈಯಕ್ತಿಕ ಕಾರಣಕ್ಕೆ ಕೊಲೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ನೇಹಾ ಅವರ ತಂದೆ ವಿರೋಧ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯರಾಗಿರುವ ನಿರಂಜನ್ ಹಿರೇಮಠ ಅವರು ಮಗಳ ಕೊಲೆ ವೈಯಕ್ತಿಕ ಕಾರಣಕ್ಕೆ ಆಗಿರುವ ಕೊಲೆ ಅಲ್ಲ. ನಾನು ಕಾರ್ಪೋರೇಟರ್, ನನಗೆ ಹೀಗಾದರೆ ಬೇರೆಉಯವರ ಕಥೆ ಏನು? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿ ನೇಹಾ ಕೊಲೆಗೆ ಕಾರಣ ತಿಳಿಸಿದ ಪರಮೇಶ್ವರ್
ಸಿಎಂ ಸಿದ್ದರಾಮಯ್ಯ ಯಾಕೆ ಹೀಗೆ ಹೇಳಿಕೆ ನೀಡುತ್ತಿದ್ದಾರೆ. ನಮಗೂ ಅವರ ಕುಟುಂಬಕ್ಕೂ ಏನು ಸಂಬಂಧ? ತನಿಖೆ ದಿಕ್ಕು ತಪ್ಪಿಸಬೇಡಿ, ಇದು ವ್ಯಯಕ್ತಿಕ ಕಾರಣಕ್ಕೆ ಆದ ಹತ್ಯೆಯಲ್ಲಿ ಎಂದು ನೇಹಾ ತಂದೆ ನಿರಂಜನ್ ಹಿರೇಮಠ ಹೇಳಿದ್ದಾರೆ. ಇದನ್ನೂ ಓದಿ: ಪ್ರಚಾರದ ವೇಳೆ ಹಿಟ್ & ರನ್ – ಸ್ಥಳದಲ್ಲೇ ಬಿಜೆಪಿ ಕಾರ್ಯಕರ್ತ ಸಾವು

