ಬೆಂಗಳೂರು : ಭಾರತದಿಂದ 2019ರಲ್ಲಿ ಪಲಾಯನಗೈದು ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ ಎಂಬ ಸಾರ್ವಭೌಮ ರಾಷ್ಟ್ರ ಸ್ಥಾಪಿಸಿರುವುದಾಗಿ ಘೋಷಿಸಿಕೊಂಡಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ನಿಧನ ಹೊಂದಿದ್ದಾನೆ ಎನ್ನುವ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಕೈಲಾಸ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸ್ಪಷ್ಟನೆ ನೀಡಿದೆ.
ನಿತ್ಯಾನಂದನ ಅಧಿಕೃತ ಕೈಲಾಶ ಪೇಜ್ ಮೂಲಕ, ನಿತ್ಯಾನಂದ ಸ್ವಾಮಿ ಆರೋಗ್ಯವಾಗಿದ್ದಾರೆ. ಇಷ್ಟೇ ಅಲ್ಲ ಸಕ್ರೀಯವಾಗಿ ಯುಗಾದಿ ಹಬ್ಬದಲ್ಲೂ ಪಾಲ್ಗೊಂಡಿದ್ದಾರೆ. ಸುಳ್ಳು ಸುದ್ದಿಗಳ ಮೂಲಕ ಹಿಂದೂ ಸರ್ವೋಚ್ಚ ಪೀಠಾಧಿಪತಿಗೆ ಅವಮಾನ ಮಾಡಲಾಗುತ್ತಿದೆ. ಇದನ್ನು ಸಹಿಸಲ್ಲ ಎಂದು ಸ್ಪಷ್ಟನೆ ನೀಡಿದೆ.
ಮಾರ್ಚ್ 30 ರಂದು ನಿತ್ಯಾನಂದ ಸ್ವಾಮಿ ಬರೋಬ್ಬರಿ 2 ಮಿಲಿಯನ್ ಹಿಂದೂ ಭಕ್ತರಿಗೆ ದರ್ಶನ ನೀಡಿ ಆಶೀರ್ವಾದ ಮಾಡಿದ್ದಾರೆ. ಈ ಕುರಿತು ಯೂಟ್ಯೂಬ್ ವಿಡಿಯೋ ಒಂದನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ನಿತ್ಯಾನಂದ ಭಕ್ತರಿಗೆ ಆಶೀರ್ವಚನ ನೀಡುತ್ತಿರುವ ದೃಶ್ಯವಿದೆ.
ಈ ಸ್ಪಷ್ಟನೆ ವೇಳೆ ಬಳಸಿರುವ ಫೋಟೋ 15 ವರ್ಷ ಹಳೆಯ ಪೋಟೋ ಆಗಿದೆ. ನಿತ್ಯಾನಂದ ಆರೋಗ್ಯವಾಗಿದ್ದಾರೆ ಎಂದು ಸ್ಪಷ್ಟನೆ ನೀಡುವಾಗ ಇತ್ತೀಚಿನ ಫೋಟೋ ಬಳಸಬೇಕಿತ್ತು. ಆದರೆ 15 ವರ್ಷ ಹಳೇ ಫೋಟೋವನ್ನು ಬಳಸಿದ್ದು ಯಾಕೆ ಅನ್ನೋ ಅನುಮಾನ ಶುರುವಾಗಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಹಲವು ಪ್ರಶ್ನೆ ಎದ್ದಿವೆ.