ಬೆಂಗಳೂರು: ಪೊಲೀಸ್ ಕಾನ್ಸ್ಟೇಬಲ್ (police constable) ಶವ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಜ್ಞಾನಭಾರತಿ ವಿಶ್ವವಿದ್ಯಾಲಯದ (Jhanabharati University) ಆವರಣದಲ್ಲಿ ನಡೆದಿದ್ದು, ಕೌಟುಂಬಿಕ ಕಲಹ ಹಿನ್ನಲೆ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ಮಡಿವಾಳ ಠಾಣೆಯ ಕಾನ್ಸ್ಟೇಬಲ್ ಶಿವರಾಜ್(29) ಮೃತ ವ್ಯಕ್ತಿ. ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಮೃತ ಕಾನ್ಸ್ಟೇಬಲ್ ಶಿವರಾಜ್ ಜೂ.26ರಂದು ಮನೆಯಿಂದ ನಾಪತ್ತೆಯಾಗಿದ್ದರು. ಇದನ್ನೂ ಓದಿ: ಮೊದಲ ಬಾರಿಗೆ ಪುತ್ರ ಪ್ರಜ್ವಲ್ ನೋಡಲು ಜೈಲಿಗೆ ಬಂದ ಭವಾನಿ ರೇವಣ್ಣ
3 ತಿಂಗಳ ಹಿಂದೆ ದಾವಣಗೆರೆ ಮೂಲದ ಯುವತಿಯನ್ನ ಶಿವರಾಜ್ ವಿವಾಹವಾಗಿದ್ದರು. ಮದುವೆ ನಂತರ ಕೌಟುಂಬಿಕ ಕಲಹ ಹಿನ್ನೆಲೆ ದಂಪತಿ ದೂರವಾಗಿದ್ದರು. ಶಿವರಾಜ್ ಮತ್ತು ಕುಟುಂಬದ ವಿರುದ್ಧ ದಾವಣಗೆರೆಯಲ್ಲಿ ವರದಕ್ಷಿಣೆ ಕಿರುಕುಳ ಬಗ್ಗೆ ವಾಣಿ ದೂರು ನೀಡಿದ್ದರು.
ಈ ಕುರಿತಾಗಿ ದಾವಣಗೆರೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಮೃತದೇವನ್ನ ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. . ಇದನ್ನೂ ಓದಿ: ಭರ್ಜರಿ ವರದಕ್ಷಿಣೆ ಕೊಟ್ಟರೂ ಮಗಳ ಹತ್ಯೆ -ಪೋಷಕರ ಆರೋಪ

