ಚನ್ನಪಟ್ಟಣ : ತಾಲ್ಲೂಕಿನ ಗುಡ್ಡೆ ತಿಮ್ಮಸಂದ್ರ ಗ್ರಾಮದಲ್ಲಿ ಎನ್ ಡಿ ಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಎತ್ತಿನ ಗಾಡಿಯಲ್ಲಿ ಗ್ರಾಮದ ಪ್ರಮುಖ ಬೀದಿಗಳಿಗೆ ತೆರಳಿ ಮತಯಾಚನೆ ಮಾಡಿದರು.
ಗುಡ್ಡೆ ತಿಮ್ಮಸಂದ್ರ ಗ್ರಾಮದಲ್ಲಿ ಹಳ್ಳಿಯ ಸೊಗಡಿನ ಮೂಲಕ ಲ್ ಎತ್ತಿನ ಗಾಡಿ ಓಡಿಸಿ ಗ್ರಾಮದಲ್ಲಿ ಪ್ರಚಾರ ಮಾಡಿದರು. ಗ್ರಾಮದ ಮಹಿಳೆಯರು ನಿಖಿಲ್ ಅವರಿಗೆ ಅರತಿ ಬೆಳಗಿ ಬರಮಾಡಿಕೊಂಡರು ಎತ್ತಿನಗಾಡಿಯಲ್ಲಿ ನಿಂತು ಜನರಿಗೆ ಎರಡೂ ಕೈ ಜೋಡಿಸುತ್ತಾ ಒಬ್ಬ ಯುವಕನಿಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು. ರಸ್ತೆ ಪಕ್ಕದಲ್ಲಿ ನಿಂತಿದ್ದ ಗ್ರಾಮಸ್ಥರತ್ತ ಕೈಬೀಸಿ ಹರ್ಷ ವ್ಯಕ್ತಪಡಿಸಿದರು.

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಮೂರನೇ ದಿನದ ಪ್ರಚಾರವನ್ನು ಪ್ರಾರಂಭಿಸಿದ್ದಾರೆ. ರಾಂಪುರ ಗ್ರಾಮ ಪಂಚಾಯತಿನಿಂದ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.

