War 2 : Ram Gopal Varma deletes ‘vulgar’ post on Kiara Advani’s bikini look : ‘ವಾರ್ 2’ ಚಿತ್ರದ ಟೀಸರ್ ನಲ್ಲಿ ನಟಿ ಕಿಯಾರಾ ಅಡ್ವಾಣಿ ಹಾಟ್ ಆಗಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದು, ಆ ಟೀಸರ್ ನೋಡಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಪೋಸ್ಟ್ ಮಾಡಿದ್ದಾರೆ. ಅವರ ಪೋಸ್ಟ್ ನೋಡಿ ನೆಟ್ಟಿಗರು ಛೀಮಾರಿ ಹಾಕಿದ್ದಾರೆ.
‘ಆಕೆಯ ಹಿಂಬದಿಯನ್ನು (ಬ್ಯಾಕ್) ಪಡೆಯಲು ದೇಶಗಳ ಬದಲಿಗೆ ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್ಟಿಆರ್ ನಡುವೆ ಯುದ್ಧ ನಡೆದರೆ ಇದು ಬ್ಯಾಕ್ಬಸ್ಟರ್ ಆಗುತ್ತದೆ’ ಎಂದು ರಾಮ್ ಗೋಪಾಲ್ ವರ್ಮಾ ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದರು. ಅದನ್ನು ನೋಡಿದ ಜನರು ತೀವ್ರ ಖಂಡನೆ ವ್ಯಕ್ತಪಡಿಸಿದರು. ಜನರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಮ್ ಗೋಪಾಲ್ ವರ್ಮಾ ಅವರು ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದರು.

ಕಮೆಂಟ್ಗಳ ಮೂಲಕ ರಾಮ್ ಗೋಪಾಲ್ ವರ್ಮಾ ಅವರನ್ನು ಜನರು ಟ್ರೋಲ್ ಮಾಡಿದ್ದಾರೆ. ‘ಈ ವ್ಯಕ್ತಿ ತನ್ನ ಬುದ್ಧಿ ಕಳೆದುಕೊಂಡು ಬಹಳ ವರ್ಷಗಳೇ ಆಗಿವೆ’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ‘ಸಾರ್ವಜನಿಕವಾಗಿ ಇಷ್ಟ ಕೆಟ್ಟದಾಗಿ ಮಾತನಾಡುವ ವ್ಯಕ್ತಿ ಇನ್ನು ಖಾಸಗಿಯಾಗಿ ಎಷ್ಟು ಕೆಟ್ಟವನಿರಬಹುದು’ ಎಂಬ ಕಮೆಂಟ್ ಕೂಡ ಬಂದಿದೆ.
ನಟಿ ಕಿಯಾರಾ ಅಡ್ವಾಣಿ ಅವರು ‘ವಾರ್ 2’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್ಟಿಆರ್ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟೀಸರ್ ಬಿಡುಗಡೆ ಆಯಿತು. ಇದೇ ಮೊದಲ ಬಾರಿಗೆ ಕಿಯಾರಾ ಅಡ್ವಾಣಿ ಅವರು ಬಿಕಿನಿ ಧರಿಸಿ ಕಾಣಿಸಿಕೊಂಡಿದ್ದಾರೆ.

