ನವದೆಹಲಿ: ಲೋಕಸಭಾ ಚುನಾವಣಾ ಫಲಿತಾಂಶ(Lok Sabha Election Results) ಹಿನ್ನೆಲೆಯಲ್ಲಿ ಇಂದು ಎನ್‍ಡಿಎ ಸಭೆಯನ್ನು ಹಮ್ಮಿಕೊಂಡಿದ್ದು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್(Nitish Kumar) ಕೂಡ ಪಾಲ್ಗೊಳ್ಳಲಿದ್ದಾರೆ. ನಿತೀಶ್ ಕುಮಾರ್ ಹಾಗೂ ತೇಜಸ್ವಿ ಯಾದವ್ (Tejasvi Ydav) ಪಾಟ್ನಾದಿಂದ ಒಂದೇ ವಿಮಾನದಲ್ಲಿ ಆಗಮಿಸುತ್ತಿರುವುದು ವಿಶೇಷವಾಗಿದೆ.
ಇಬ್ಬರು ವಿಸ್ತಾರಾ ಯುಕೆ-718ನಲ್ಲಿ ದೆಹಲಿಗೆ ಹೊರಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ 40ರಲ್ಲಿ 30 ಸ್ಥಾನಗಳನ್ನು ಎನ್‍ಡಿಎ ಗೆದ್ದಿದೆ, ಆದರೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪಕ್ಷ 12 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇದನ್ನೂ ಓದಿ: ದೆಹಲಿಯತ್ತ ಹೆಚ್.ಡಿ. ಕುಮಾರಸ್ವಾಮಿ
ಇಂಡಿ ಮೈತ್ರಿಕೂಟದ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳುವ ಮೊದಲು ತೇಜಸ್ವಿ ಯಾದವ್ ಬಿಹಾರದಲ್ಲಿ ರಾಷ್ಟ್ರೀಯ ಜನತಾ ದಳವು ಗರಿಷ್ಠ ಮತಗಳನ್ನು ಗಳಿಸಿದೆ ಮತ್ತು ನಮ್ಮಲ್ಲಿ ಹೆಚ್ಚಿನ ಮತದಾನದ ಶೇಕಡಾವಾರು ಪ್ರಮಾಣವಿದೆ, ಮತದಾನವೂ ಹೆಚ್ಚಾಗಿದೆ ಎಂದರು. ಒಂದೆಡೆ ನಿತೀಶ್ ಕುಮಾರ್ ಐಎನ್ಡಿಐಎ ಒಕ್ಕೂಟ ಸೇರಿದರೆ ಎನ್ನುವ ಅನುಮಾನ ಕಾಡುತ್ತಿರುವಾಗಲೇ ಈ ಚಿತ್ರ ಎಲ್ಲೆಡೆ ವೈರಲ್ ಆಗಿದೆ. ಇದನ್ನೂ ಓದಿ: ಕಾಂಗ್ರೆಸ್ ಸಂಭ್ರಮಾಚರಣೆಯಲ್ಲಿ ಪಾಕಿಸ್ತಾನ ಪರ ಜೈಕಾರ – ಆರೋಪಿ ಬಂಧನ