ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna) ಹಾಗೂ ಹೆಚ್ಡಿ ರೇವಣ್ಣ(HD.Revanna) ವಿರುದ್ಧದ ಅಶ್ಲೀಲ ವಿಡಿಯೋ, ಲೈಂಗಿಕ ದೌರ್ಜನ್ಯ ಹಾಗೂ ಕಿಡ್ನಾಪ್ ಪ್ರಕರಣದ ತನಿಖೆಯನ್ನು ಎಸ್ಐಟಿ ಚುರುಕುಗೊಳಿಸಿದ್ದು, ಇದುವರೆಗೂ 9 ಮಂದಿ ಸಂತ್ರಸ್ತೆಯರನ್ನು ಗುರುತಿಸಿ ವಿಚಾರಣೆ ನಡೆಸಿದೆ. ಲೈಂಗಿಕ ದೌರ್ಜನ್ಯ ಯಾವಾಗೆಲೆಲ್ಲ ನಡೆದಿದೆ ಎಂಬ ಮಾಹಿತಿಯನ್ನೂ ಎಸ್ಐಟಿ (SIT) ಕಲೆ ಹಾಕಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಹರಿದಾಡಿದ ವಿಡಿಯೋಗಳನ್ನು ಆಧರಿಸಿ ಅಧಿಕಾರಿಗಳು ಸಂತ್ರಸ್ತೆಯರ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ. ಸದ್ಯ 9 ಸಂತ್ರಸ್ತೆಯರನ್ನು ಪತ್ತೆ ಹಚ್ಚಿ ಅವರಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಈ 9 ಸಂತ್ರಸ್ತೆಯರ ಪೈಕಿ ಇಬ್ಬರು ಸರ್ಕಾರಿ ಅಧಿಕಾರಿಗಳು ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಇದನ್ನೂ ಓದಿ:ಪ್ರೀತಿಸುವಂತೆ ಬೆನ್ನು ಬಿದ್ದಿದ್ದ ಯುವಕ – ಕೊಲೆಗಾರನಾದ ಯುವತಿ ತಂದೆ
ವಿಚಾರಣೆ ವೇಳೆ ಎಸ್ಐಟಿ ಅಧಿಕಾರಿಗಳು, ಸಂತ್ರಸ್ತೆಯರಿಂದ ಹೇಳಿಕೆಗಳನ್ನು ಮಾತ್ರ ದಾಖಲಿಸಿಕೊಂಡಿದ್ದಾರೆ. ಅವರ ಹೇಳಿಕೆ ಸಂಬಂಧ ಯಾವುದೇ ಮರು ಪ್ರಶ್ನೆ ಮಾಡಿಲ್ಲ. ಅದರಂತೆ ಲೈಂಗಿಕ ದೌರ್ಜನ್ಯ 3 ವರ್ಷಗಳ ಅವಧಿಯಲ್ಲಿ ನಡೆದಿದೆ ಎಂಬ ಮಾಹಿತಿ ಸಿಕ್ಕಿದೆ. ಇದರಲ್ಲಿ ಇಬ್ಬರು ಸರ್ಕಾರಿ ಅಧಿಕಾರಿಗಳು ವರ್ಗಾವಣೆ ಬೇಕು ಎಂದು ಪ್ರಜ್ವಲ್ರನ್ನ ಭೇಟಿ ಮಾಡಿದ್ದರು. ಅವರ ಮೇಲೆ 2019 ರಿಂದ 2021ರ ತನಕ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನುವ ಮಾಹಿತಿ ಇದೆ. ಅಂದರೆ, ಪ್ರಜ್ವಲ್ ರೇವಣ್ಣ ಸಂಸದ ಆದಮೇಲೆ ಸಂತ್ರಸ್ತೆಯರು ಭೇಟಿ ಮಾಡಿರುವ ಬಗ್ಗೆ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.ಇದನ್ನೂ ಓದಿ: ಈಜು ಕಲಿಯಲು ಹೋಗಿ ಬಾಲಕ ಸಾವು

ಇನ್ನು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆದ್ದ ಕೆಲ ಮಹಿಳಾ ಜನಪ್ರತಿನಿಧಿಗಳು ತಮಗೆ ಬೇಕಾದ ಅನುದಾನಗಳ ಬಗ್ಗೆ ಮಾತನಾಡಲು ಭೇಟಿ ಮಾಡಿದ್ದರು ಎಂಬ ಮಾಹಿತಿ ಇದೆ. ಕೆಲ ಕಾರ್ಯಕರ್ತರು ತಮ್ಮ ತಮ್ಮ ಕೆಲಸಗಳು ಆಗಬೇಕು ಎಂದು ಪ್ರಜ್ವಲ್ರನ್ನ ಭೇಟಿ ಮಾಡಿದ್ದರು ಎಂದು ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಾಗೇಯೇ, ಕೆಲ ಗುತ್ತಿಗೆ ಕೆಲಸಗಳನ್ನು ಕೊಡಿಸುವ ಆಮಿಷ ಒಡ್ಡಿದ್ದ ಬಗ್ಗೆಯೂ ಮಾಹಿತಿ ಇದೆ.ಇದನ್ನೂ ಓದಿ: ನನ್ನ ಮೇಲೆ ಆರೋಪ ಮಾಡದಿದ್ದರೆ ಮಾರ್ಕೆಟ್ನಲ್ಲಿ ಸುದ್ದಿ ಓಡಲ್ಲ: ಡಿಕೆಶಿ ತೀರುಗೇಟು
ಈ ಮಧ್ಯೆ ಎಸ್ಐಟಿ ಮುಂದೆ ಹಾಜರಾಗಲು ಪ್ರಜ್ವಲ್ ರೇವಣ್ಣಗೆ ನೀಡಿದ ಕಾಲಾವಕಾಶ ಇಂದಿಗೆ ಮುಗಿಯಲಿದೆ. ಹೀಗಾಗಿ ಪ್ರಜ್ವಲ್ ಯಾವಾಗ ವಿಚಾರಣೆಗೆ ಹಾಜರಾಗ್ತಾರೆ ಅನ್ನೋ ಪ್ರಶ್ನೆ ಇದೆ. ಈ ಮಧ್ಯೆ 196 ರಾಷ್ಟ್ರಗಳಲ್ಲಿ ಪ್ರಜ್ವಲ್ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಗಿದೆ. ಹೀಗಾಗಿ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಇದನ್ನೂ ಓದಿ: ಬಿಯರ್ ಮಾರಾಟದಲ್ಲಿ ಇತಿಹಾಸ ಸೃಷ್ಟಿಸಿದ ಅಬಕಾರಿ ಇಲಾಖೆ