Obscene Video : ರಸ್ತೆಯಲ್ಲೇ ಮದ್ಯ ಪ್ರದೇಶ ದ ಮಂಡೌರ್ ಜಿಲ್ಲೆಯ ಬಿಜೆಪಿ ನಾಯಕ ಮನೋಹರ್ ಲಾಲ್ ಧಾಕರ್ ಎಂಬಾತ ಹೆದ್ದಾರಿಯಲ್ಲಿ ಮಹಿಳೆಯೊಂದಿಗೆ ಸೆಕ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಡೌರ್ ಜಿಲ್ಲೆಯ ಬನಿ ಗ್ರಾಮದ ನಿವಾಸಿಯಾಗಿರುವ ಮನೋಹರ್ ಲಾಲ್ ಧಾಕಡ್, ಹೊಸದಾಗಿ ನಿರ್ಮಿಸಿದ 8 ಪಥದ ಹೆದ್ದಾರಿಯಲ್ಲಿ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದು, ಸುಮಾರು ಮೂರೂವರೆ ನಿಮಿಷಗಳ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಬಿಜೆಪಿ ನಾಯಕ ಮನೋಹರ್ ಲಾಲ್ ಧಕಾಡ್ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸರು ಬಂಧಿತ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸದಿದ್ದರೂ, ವೀಡಿಯೊದಲ್ಲಿ ಕಾಣುವ ವ್ಯಕ್ತಿಯನ್ನು ಮಧ್ಯಪ್ರದೇಶದ ಮಂದ್ಸೌರ್ ಜಿಲ್ಲೆಯ ಮನೋಹರ್‌ಲಾಲ್ ಧಕಾಡ್ ಎಂದು ಗುರುತಿಸಲಾಗಿದೆ. ಮೇ 13 ರಂದು ದಾಖಲಾಗಿರುವ ಈ ದೃಶ್ಯಾವಳಿಯಲ್ಲಿ ಕಾಣುವ ಕಾರು ಸಾರಿಗೆ ಇಲಾಖೆಯ ದಾಖಲೆಗಳ ಪ್ರಕಾರ ಧಕಾಡ್ ಹೆಸರಿನಲ್ಲಿ ನೋಂದಾಯಿಸಲಾಗಿದೆ.
“ಮೇ 13 ರಂದು ವಿಡಿಯೋ ವೈರಲ್ ಆಗಿದ್ದು, ಥಾಣಾ ಭನಪುರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇಂದು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದ್ದು, ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಮಂದಸೂರ್ ಎಸ್‌ಪಿ ಅಭಿಷೇಕ್ ಆನಂದ್ ಪಿಟಿಐಗೆ ತಿಳಿಸಿದ್ದಾರೆ.
ವೀಡಿಯೊ ಪ್ರಸಾರವಾದ ನಂತರ, ಉಜ್ಜಯಿನಿಯಲ್ಲಿ ನೋಂದಾಯಿಸಲಾದ ಢಕಾಡ್ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನದಿಂದ ಢಕಾಡ್ ಅವರನ್ನು ತೆಗೆದುಹಾಕಲಾಯಿತು.

