ಅರಣ್ಯಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ನಾವು ಅರಣ್ಯಗಳನ್ನು ರಚಿಸಬೇಕು ಮತ್ತು ಅವುಗಳನ್ನು ಮುಂದಿನ ಪೀಳಿಗೆಗೆ ಉಳಿಸಬೇಕು, ಆದರೆ ಅರಣ್ಯ ನಾಶ ಮಾಡಿ ಹಣ ಪೀಕುತ್ತಿರುವ ಅಧಿಕಾರಿಗಳು ಸರ್ಕಾರದ ಅನ್ನ ತಿಂದು ಸರ್ಕಾರಕ್ಕೆ ಕನ್ನ ಹಾಕುತ್ತಿರುವ ನಾಲಾಯಕ್ ಅಧಿಕಾರಿಗಳು
ಕುಣಿಗಲ್ : ತಾಲೂಕಿನ ಹುಲಿಯೂರುದುರ್ಗ ಹೋಬಳಿ ಹಳೆ ಊರು ಗ್ರಾಮ ಪಂಚಾಯಿತಿ ಮೀಸಲು ಅರಣ್ಯ ಪ್ರದೇಶ ಸೊನ್ನನಾಯಕನಹಳ್ಳಿ ಕಾಮರಾಯನ ಕಟ್ಟೆ ಅಭಿವೃದ್ಧಿ ಉಲ್ಲಾಳೆ ಬೆಟ್ಟದ ತಪ್ಪಲಿನಲ್ಲಿ ಅಕ್ರಮವಾಗಿ 2024- 25 ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಅರಣ್ಯ ಪ್ರದೇಶದಲ್ಲಿ ಅಕ್ರಮ ನೀರಿನ ಹೊಂಡ ನಿರ್ಮಾಣ ಮಾಡಿರುವ ಹಳೇ ಊರು ಗ್ರಾಮ ಪಂಚಾಯಿತಿ ಸದಸ್ಯರಾದ “ಚೈತ್ರ ಸುರೇಶ್”, ಹಾಗೂ “ಮಹಾಲಕ್ಷ್ಮಿ ಗಿರೀಶ್”, ಎಂಬುವರು ಫಾರೆಸ್ಟ್ ಜಾಗವನ್ನು ಅತಿಕ್ರಮ ಪ್ರವೇಶ ಮಾಡಿ ದಂದೆ ಮಾಡುತ್ತಿರುವವರು ಎನ್ನಲಾಗಿದೆ,
ಅರಣ್ಯ ವಲಯ ಅಧಿಕಾರಿ( RFO )ಹಣದಾಸೆಗೆ ಸಂಪೂರ್ಣ ಶಾಮೀಲಾಗಿ ಸರ್ಕಾರಕ್ಕೆ ಮೋಸ ಮಾಡುವ ನಿಟ್ಟಿನಲ್ಲಿ ಅನಧಿಕೃತವಾಗಿ ನೀರಿನ ಹೊಂಡ ನಿರ್ಮಿಸಿ ಸರ್ಕಾರದಿಂದ ಬಿಲ್ ಪಡೆದಿದ್ದಾರೆ ,ಎನ್ನಲಾಗಿದೆ ಆದರೆ ಅರಣ್ಯ ಪ್ರದೇಶ ಕಾಪಾಡುವ ಅರಣ್ಯ ಇಲಾಖೆ ಅಧಿಕಾರಿಗಳು ಎಂಜಲು ಕಾಸಿಗೆ ಆಸೆಪಟ್ಟು ಸರ್ಕಾರಕ್ಕೆ ಕನ್ನ ಹಾಕಲು ಹೊರಟಿರುವುದು ಬೇಸರದ ಸಂಗತಿಯಾಗಿದೆ, ಅರಣ್ಯ ಇಲಾಖೆಯವರು ಅರಣ್ಯ ಪ್ರದೇಶವನ್ನು ರಕ್ಷಣೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದ್ದಾರೆ ಎಂದು ಎನ್ನಲಾಗಿದೆ,,
ಹಲವು ದಿನಗಳಿಂದ ಈ ಕಾಮಗಾರಿ ಅಭಿವೃದ್ಧಿ ನಡೆಯುತ್ತಿದ್ದು ಸರ್ಕಾರದಿಂದ ಬಿಲ್ ಸಹ ಬಿಡುಗಡೆಯಾಗಿದ್ದು, ಅಧಿಕಾರಿಗಳಿಗೆ ಇದರ ಬಗ್ಗೆ ಎಲ್ಲ ವಿಚಾರ ಗೊತ್ತಿದ್ದರೂ ಮುಖ ಪ್ರೇಕ್ಷಕರಾಗಿದ್ದಾರೆ,ಅರಣ್ಯ ಇಲಾಖೆಯವರು ಹಳೇ ಊರು ಗ್ರಾಮ ಪಂಚಾಯತಿ ಅಧಿಕಾರಿಗಳು,ಮತ್ತು ನರೇಗಾ ಎಂಜಿನಿಯರ್ ಕಣ್ಮುಚ್ಚಿ ಕುಳಿತಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ, ಹಣದಾಸೆಗಾಗಿ ಸರ್ಕಾರಕ್ಕೆ ಮೋಸ ಮಾಡುವ ನಿಟ್ಟಿನಲ್ಲಿ ಅನಧಿಕೃತವಾಗಿ ನೀರಿನ ಹೊಂಡ ನಿರ್ಮಿಸಿ ಸರ್ಕಾರದಿಂದ ಬಿಲ್ ಪಡೆದು ಅರಣ್ಯ ಪ್ರದೇಶ ನಾಶ ಮಾಡಿ ಸರ್ಕಾರಕ್ಕೆ ಮೋಸ ಮಾಡುತ್ತಿರುವ ಕಳ್ಳ ಅಧಿಕಾರಿಗಳು,,
2024,25 ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಿರ್ಮಿಸಿರುವ ಕಟ್ಟೆ ಅಭಿವೃದ್ಧಿ ಕಾಮಗಾರಿಯು ಅರ್ಧಕ್ಕೆ ನಿಂತಿರುವುದು ನಾಗರಿಕರಲ್ಲಿ ಅನುಮಾನ ಮೂಡಿಸಿದೆ, ಹಳೆ ಊರು ಗ್ರಾಮ ಪಂಚಾಯಿತಿ ಪಿಡಿಒ ನಾಗರಾಜು ನನಗೆ ಇದರ ಬಗ್ಗೆ ಮಾಹಿತಿ ಇಲ್ಲ ನಾನು ಸಂಪೂರ್ಣವಾಗಿ ಪರಿಶೀಲಿಸಿ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದ್ದಾರೆ,ಅರಣ್ಯ ಇಲಾಖೆ ಅಧಿಕಾರಿಗೆ RFO ಮಾಹಿತಿ ತಿಳಿಸಿದರೆ ಇದರ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ, ಇದು ನನ್ನ ವ್ಯಾಪ್ತಿಗೆ ಒಳಪಡುವುದಿಲ್ಲ, ಈ ಅರಣ್ಯ ಪ್ರದೇಶದ ಕಾಮಗಾರಿ ಅಭಿವೃದ್ಧಿಗೂ ನನಗೆ ಯಾವುದೇ ಸಂಬಂಧವಿಲ್ಲ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ, ಎಲ್ಲ ಗೊತ್ತಿದ್ದರೂ ಸಹ ಏನು ಗೊತ್ತಿಲ್ಲದ ಹಾಗೆ ನಾಟಕ ಮಾಡುತ್ತಿರುವ ಹುಲಿಯೂರುದುರ್ಗ ವಲಯ ಅರಣ್ಯ ಅಧಿಕಾರಿ ಎಂದು ತಿಳಿದು ಬಂದಿದೆ, ನರೇಗಾ ಇಂಜಿನಿಯರ್ ಸಹ ಈ ಕಾಮಗಾರಿ ವಿಚಾರದಲ್ಲಿ ಶಾಮಿಲಾಗಿರುವುದು ಹಲವರಲ್ಲಿ ಅನುಮಾನ ಹುಟ್ಟಿಸಿದೆ,ಇನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಅರಣ್ಯ ಪ್ರದೇಶದಲ್ಲಿ ನಿರ್ಮಿಸಿರುವ ಬೋರ್ಡ್ ಮೇಲೆ ಪ್ರತಿ ದಿನದ ಕೂಲಿ 349 ಎಂದು ಬರೆಯಲಾಗಿದೆ, ಇದರ ಬಗ್ಗೆಯೂ ಸಹ ಸಂಪೂರ್ಣ ಮಾಹಿತಿ ಹೊರಬರಬೇಕಿದೆ,,
ಇನ್ನು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮೇಲಾಧಿಕಾರಿಗಳು ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಕಾಮಗಾರಿಯ ಬಗ್ಗೆ ಎಚ್ಚೆತ್ತುಕೊಂಡು ತಡೆಹಿಡಿಯುತ್ತಾರೋ, ಇಲ್ಲವೇ ಮುಂದುವರಿಸುತ್ತಾರೋ ಎಂದು ಕಾದು ನೋಡಬೇಕಿದೆ,,

