ಬೆಂಗಳೂರು: ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ವಿರುದ್ಧ ಮಹಿಳೆ ಅಪಹರಣ ಪ್ರಕರಣದಲ್ಲಿ ಈಗ ಎಸ್‍ಐಟಿ (SIT) ಅಧಿಕಾರಿಗಳಿಗೆ ತಲೆನೋವು ಶುರುವಾಗಿದೆ. ಒಂದೆಡೆ ಭವಾನಿ ರೇವಣ್ಣಗೆ (Bhavani Revanna) ನೋಟಿಸ್ ಕೊಟ್ಟರೂ ವಿಚಾರಣೆಗೆ ಬಂದಿಲ್ಲ. ಇನ್ನೊಂದೆಡೆ ಭವಾನಿ ಕಾರು ಚಾಲಕ ಕೂಡ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣದಲ್ಲಿ ಭವಾನಿ ಅವರ ಪಾತ್ರದ ಬಗ್ಗೆ ತಿಳಿದುಕೊಳ್ಳೋದಕ್ಕಾಗಿ ಎಸ್‍ಐಟಿ ವಿಚಾರಣೆಗೆ ಕರೆದಿದೆ. ಈಗಾಗಲೇ 2 ನೋಟಿಸ್ ನೀಡಿದರು ಕೂಡ ಭವಾನಿ ರೇವಣ್ಣ ವಿಚಾರಣೆಗೆ ಬರೋದಿರಲ್ಲಿ ಸಂಪರ್ಕಕ್ಕೂ ಸಿಕ್ಕಿಲ್ಲ. ಇದೂವರೆಗೂ ಅನಾರೋಗ್ಯದ ನೆಪದಿಂದ ವಿಚಾರಣೆಗೆ ಹಾಜರಾಗಿಯೇ ಇಲ್ಲ. ಆದರೆಭವಾನಿ ಯಾವಾಗ ವಿಚಾರಣೆಗೆ ಬರ್ತಾರೆ, ಭವಾನಿ ಎಲ್ಲಿದ್ದಾರೆ…? ಅಂತ ಕಾದುಕುಳಿತುಕೊಳ್ಳುವ ರೀತಿ ಆಗಿದ್ದು, ನೋಟಿಸ್ ಕೊಟ್ರೂ ನೋ ಯೂಸ್ ಎಂಬಂತಾಗಿದೆ. ಇದನ್ನೂ ಓದಿ: General Elections 2024: ಕಣದಲ್ಲಿರೋ ಅಭ್ಯರ್ಥಿಗಳಿಗಿದೆ ಕ್ರಿಮಿನಲ್ ಹಿನ್ನೆಲೆ- ವರದಿ- ಎಷ್ಟು ಅಭ್ಯರ್ಥಿಗಳಿಗಿದೆ?
ಎಸ್‌ಐಟಿಗೆ ಒಂದೆಡೆ ಭವಾನಿ ತಲೆನೋವಾದಾರೆ ಇನ್ನೊಂದೆಡೆ ಭವಾನಿ ರೇವಣ್ಣ ಡ್ರೈವರ್ ನಾಪತ್ತೆಯಾಗಿದ್ದಾನೆ. ಭವಾನಿ ರೇವಣ್ಣ ಡ್ರೈವರ್ ಅಜಿತ್ (Driver Ajit) ನಾಪತ್ತೆಯಾಗಿದ್ದು, ಎಸ್‍ಐಟಿ ಮೂರು ನೋಟಿಸ್ ಕೊಟ್ಟರು ಕೂಡ ವಿಚಾರಣೆಗೆ ಬಂದಿಲ್ಲ. ಇದೀಗ ಎಸ್‍ಐಟಿ ಪೊಲೀಸರು ಹೊಳೆನರಸೀಪುರ ಚಾಲಕ ಅಜಿತ್ ನಿವಾಸಕ್ಕೆ ತೆರಳಿ ಸಮನ್ಸ್ ಜಾರಿ ಮಾಡಿದ್ದಾರೆ. ಕೆ.ಆರ್ ನಗರದ ಸಂತ್ರಸ್ತ ಮಹಿಳೆಯನ್ನು ತನ್ನದೇ ಕಾರಿನಲ್ಲಿ ಕರೆದುಕೊಂಡು ಹೋಗಿದ್ದ ಅನ್ನೋ ಮಾಹಿತಿಯ ಜೊತೆಗೆ ರೇವಣ್ಣ ನಿರೀಕ್ಷಣಾ ಜಾಮೀನು ವಿಚಾರಣೆ ದಿನ ಸಂತ್ರಸ್ತ ಮಹಿಳೆಯ ವೀಡಿಯೋ ಚಿತ್ರೀಕರಣ ಮಾಡಿದ್ದು ಇದೇ ಅಜಿತ್ ಅನ್ನೋ ಮಾಹಿತಿ ಇದೆ. ಹೀಗಾಗಿಯೇ ಅಜಿತ್ ನನ್ನು ಎಸ್‍ಐಟಿಯವರು ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದತಿಗೆ ಪ್ರಧಾನಿಗೆ, ಸಿಎಂ 2ನೇ ಪತ್ರ

