ಬೆಳಗಾವಿ : ಬೆಳಗಾವಿಯಲ್ಲಿ ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳಕ್ಕೆ ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ನಗರದಲ್ಲಿರುವ ವನಿತಾ ವಿದ್ಯಾಲಯ ಶಾಲೆ.
ಶಾಲಾ ಆಡಳಿತ ಮಂಡಳಿಯಿಂದ ಏಕಾಏಕಿ ಶುಲ್ಕ ಹೆಚ್ಚಳ.ಮೂರು ವರ್ಷಕ್ಕೊಮ್ಮೆ ಎರಡು ಸಾವಿರ ಹೆಚ್ಚಳ ಮಾಡಬೇಕಿದ್ದ ಆಡಳಿತ ಮಂಡಳಿ.ವಿದ್ಯಾರ್ಥಿಗಳ ಪೋಷಕರ ಗಮನಕ್ಕೆ ತರದೆ ಐದರಿಂದ ಆರು ಸಾವಿರಕ್ಕೆ ಹೆಚ್ಚಳ ಹಿನ್ನಲೆ ಪೋಷಕರ ಆಕ್ರೋಶ.
ಕೋವಿಡ್ ಸಮಯದಲ್ಲಿ ಎರಡು ಸಾವಿರ ಹೆಚ್ಚಳ ಮಾಡಿದ್ದ ವನಿತಾ ವಿದ್ಯಾಲಯ ಆಡಳಿತ ಮಂಡಳಿ.ಶಾಲೆ ಪ್ರಿನ್ಸಿಪಾಲ್ ಜೋಷ್ಪಿನ್ ಗುಂಟಿ ಅವರ ಮುಂದೆ ಆಕ್ರೋಶ ಹೊರಹಾಕಿದ ಪೋಷಕರು.
14000 ಇದ್ದ ಶುಲ್ಕವನ್ನ 20000 ಸಾವಿರ ಹೆಚ್ಚಿಸಿದ ಆಡಳಿತ ಮಂಡಳಿ.ನೀವೇನೆ ಮಾಡಿದರೂ ಕಡಿಮೆ ಮಾಡಲಿಕೆ ಆಗಲ್ಲಾ ಎಂದ ಪ್ರಿನ್ಸಿಪಾಲ್ ಜೋಷ್ಪಿನ್ ಗುಂಟಿ ವಿರುದ್ದ ಪೋಷಕರ ಆಕ್ರೋಶ.
ಶುಲ್ಕ ಕಡಿಮೆ ಮಾಡದೇ ಹೋದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಮಾಡಲಾಗುವುದು ಎಂದು ಶಾಲಾ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದ ಪೋಷಕರು.
ವರದಿ: ದಯಾನಂದ

