ಬೆಂಗಳೂರು: ಐಷಾರಾಮಿ ಜೀವನ ನಡೆಸಿದ ನಟಿ ಪವಿತ್ರಾಗೌಡ (Pavithra Gowda) ಅವರೀಗ ಪರಪ್ಪನ ಅಗ್ರಹಾರದಲ್ಲಿ (Parappana Agrahara) ವಿಚಾರಣಾಧೀನ ಕೈದಿಯಾಗಿ ದಿನ ಕಳೆಯುತ್ತಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy Case) ಬಂಧನಕ್ಕೆ ಒಳಗಾಗಿರುವ ಎ-1 ಆರೋಪಿ ಪವಿತ್ರಾಗೌಡ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಪರಪ್ಪನ ಅಗ್ರಹಾರದ ಜೈಲಿಗೆ ಅವರನ್ನು ಶಿಫ್ಟ್ ಮಾಡಲಾಗಿದೆ. ಪವಿತ್ರಾಗೌಡ ಸೇರಿ ಉಳಿದ ಆರೋಪಿಗಳು ಜುಲೈ 10ರ ವರೆಗೆ ಪರಪ್ಪನ ಅಗ್ರಹಾರ ಸೆರೆವಾಸ ಅನುಭವಿಸುತ್ತಿದ್ದಾರೆ. ಇದನ್ನೂ ಓದಿ: ದರ್ಶನ್ ಕೊಲೆ ಮಾಡೋ ವ್ಯಕ್ತಿ ಅಲ್ಲ : ಮದ್ದೂರು ಎಂಎಲ್‌ಎ
ಸದ್ಯ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿ ಪವಿತ್ರಾಗೌಡ ಅವರ ಜೈಲಿನ ಜೀವನ ಹೇಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬ್ಯಾರಕ್ ನಲ್ಲಿರುವ ಪವಿತ್ರಾಗೌಡ ದಿನಚರಿ ಮುಗಿಸಿ ಫುಲ್ ಸೈಲೆಂಟ್ ಆಗಿದ್ದಾರೆ. ಅವರಿಗೆ 6024 ಕೈದಿ ಸಂಖ್ಯೆ ನೀಡಲಾಗಿದೆ. ಉಳಿದ 9 ಆರೋಪಿಗಳು ಕ್ವಾರಂಟೈನ್ ಸೆಲ್‌ನಲ್ಲಿ ಒಂದೇ ಕಡೆಯಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ತಪ್ಪು ಮಾಡಿದ್ರೆ ನಟ ದರ್ಶನ್ ಶಿಕ್ಷೆ ಅನುಭವಿಸ್ತಾರೆ: ಶಿವರಾಜ್ ತಂಗಡಗಿ
ಪವಿತ್ರಾ ಗೌಡ ಅವರು ಇರುವ `ಡಿ’ ಬ್ಯಾರಕ್‌ನಲ್ಲಿ ಒಟ್ಟು 8 ಮಹಿಳಾ ಕೈದಿಗಳಿದ್ದಾರೆ. ಬೆಳಗ್ಗೆ ಸಹ ಕೈದಿಗಳೊಂದಿಗೆ ತಿಂಡಿ ತಿಂದು, ಕಾಲ ಕಳೆಯುತ್ತಿದ್ದಾರೆ. ಯಾವುದೇ ರೀತಿಯ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿಲ್ಲ. ಗುರುವಾರ ರಾತ್ರಿಯೇ ಪವಿತ್ರಾಗೌಡಗೆ ಆರೋಗ್ಯ ತಪಾಸಣೆ ಮಾಡಿಸಲಾಗಿದ್ದು, ಅವರು ಸಂಪೂರ್ಣ ಆರೋಗ್ಯವಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸ್ಪಿರಿಟ್ ಲಾರಿಯ ಟೈಯರ್ ಬ್ಲಾಸ್ಟ್ – ತಪ್ಪಿದ ಭಾರೀ ಅನಾಹುತ