ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಕೊಲೆ ಕೇಸ್‍ನಲ್ಲಿ ಜೈಲು ಸೇರಿರುವ ಮಾಸ್ಟರ್ ಮೈಂಡ್ ಪವಿತ್ರಾಗೌಡ (Pavitra Gowda) ಆರ್‍ಆರ್ ನಗರ ಶೆಡ್ ನಲ್ಲಿ ಹೊಡೆದಿದ್ದರ ಬಗ್ಗೆ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕೊಲೆಯಾಗಿರುವ ರೇಣುಕಾಸ್ವಾಮಿಯ ಮೇಲೆ ಹಲ್ಲೆ ಮಾಡಿದ್ದಾಗಿ ಪವಿತ್ರಾಗೌಡ ಹೇಳಿಕೆ ನೀಡಿದ್ದಾರೆ. ಪೊಲೀಸರು ತನಿಖೆ ವೇಳೆ ಕೊಲೆ ಆರೋಪಿಯಾಗಿರುವ ನಟ ದರ್ಶನ್ ವಿರುದ್ಧವಾಗಿಯೇ ಹೇಳಿಕೆಯನ್ನ ನೀಡಿದ್ದಾರಂತೆ. ಇದನ್ನೂ ಓದಿ: ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿಮಾತನಾಡಿದ ಸಿಎಂ
ನಾನು ಚಪ್ಪಲಿಯಲ್ಲಿ ಒಮ್ಮೆ ಹೊಡೆದು ಸುಮ್ಮನೆ ನಿಂತಿರುವಾಗ ದರ್ಶನ್, ರೇಣುಕಾಸ್ವಾಮಿಯ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾಗಿ ತನಿಖೆಯ ವೇಳೆ ಪವಿತ್ರಾಗೌಡ ಹೇಳಿದ್ದಾರೆ ಎನ್ನಲಾಗಿದೆ.

ನಾನು ಶೆಡ್‍ಗೆ ಹೋಗುವುದಕ್ಕೂ ಮುಂಚನೇ ದರ್ಶನ್ ಶೆಡ್‍ನಲ್ಲಿದ್ದರು ಎಂಬುದಾಗಿ ಪವಿತ್ರಾ ಗೌಡ (Pavithra Gowda) ಅವರು ಪೊಲೀಸ್ ಕಸ್ಟಡಿಯಲ್ಲಿದ್ದಾಗ ಪೊಲೀಸರ ಮುಂದೆ ಹೇಳಿದ್ದಾರೆ ಅಂತಾ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಆದರೆ ಪವಿತ್ರಾ ಗೌಡ ಈ ಹೇಳಿಕೆಯನ್ನು ನಟ ದರ್ಶನ್ ಕೂಡ ನಿರೀಕ್ಷೆ ಮಾಡಿರಲಿಕ್ಕಿಲ್ಲ. ಇದನ್ನೂ ಓದಿ: ಕನ್ನಡ ಚಲಚಿತ್ರ ನಿರ್ಮಾಪಕ ಸಂಘದ ನೂತನ ಕಟ್ಟಡ ಉದ್ಘಾಟನೆಯಲ್ಲಿ ಶಿವರಾಜ್‌ಕುಮಾರ್ ಮತ್ತು ಜಗ್ಗೇಶ್ ಅವರ ಒಡನಾಟದ ಕ್ಷಣಗಳು
ಹತ್ಯೆಯಲ್ಲಿ ನಟ ದರ್ಶನ್ ಎಂಟ್ರಿಯಾಗಿದ್ದೆ ಎ1 ಆರೋಪಿಯಾಗಿರುವ ಪವಿತ್ರಾಗೌಡರಿಗಾಗಿ. ಅದೇ ಪವಿತ್ರಾಗೌಡ ದರ್ಶನ್ ಹಲ್ಲೆ ಬಗ್ಗೆ ಪೊಲೀಸರ ಮುಂದೆ ಹೇಳಿರೋದು ದರ್ಶನ್ ಗೆ ಒಂದು ರೀತಿಯಲ್ಲಿ ಅರಗಿಸಿಕೊಳ್ಳಲಾಗಂತಹ ವಿಷಯವಾಗಿರುತ್ತೆ. ಇದನ್ನೂ ಓದಿ: ನೀವು ಶವರ್ಮ ಪ್ರೀಯರೇ ಹಾಗಾದರೇ ನೋಡಲೇಬೇಕಾದ ಸುದ್ದಿ

