ಕುಣಿಗಲ್ : ಪಟ್ಟಣದ ಈದ್ಗ ಕಾಂಪ್ಲೆಕ್ಸ್ ಕೆನರಾ ಬ್ಯಾಂಕ್, ಹಿಂಭಾಗದಲ್ಲಿ ನೂತನವಾಗಿ ಪಿ ಡಿಎನ್ಎ ಭ್ರಷ್ಟಾಚಾರ ನಿಗ್ರಹದಳದ ಕಚೇರಿಯನ್ನು ಮೊದಲನೇ ಮಹಡಿಯಲ್ಲಿ ಉದ್ಘಾಟಿಸಿದರು,,
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ದಲಿತ ಮುಖಂಡರಾದ ವಿ ಶಿವಶಂಕರ್ ರವರು ಹಲವು ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ನಿರ್ಮೂಲನೆಯನ್ನು ತಡೆಗಟ್ಟಬೇಕು, ಅಧಿಕಾರಿಗಳು ಬಡವರ ಮೇಲೆ, ಹಾಗೂ ರೈತರ ಮೇಲೆ ಮಾಡುತ್ತಿರುವ ದೌರ್ಜನ್ಯವನ್ನು ನಾವುಗಳು ಊಹೆ ಮಾಡಲು ಸಾಧ್ಯವಿಲ್ಲ, ಒಳ್ಳೆಯ ಸಮಯದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಪಣತೊಟ್ಟಿದ್ದೀರಾ ನಿಮಗೆ ಅಭಿನಂದನೆಗಳು, ಸದಾ ನಿಮ್ಮ ಜೊತೆಯಲ್ಲಿ ನಾವುಗಳು ಭಾಗಿಯಾಗಿರುತ್ತೇವೆ, ಸಂಘಟನೆಯ ಪದಾಧಿಕಾರಿಗಳು ಶಿಸ್ತುಬದ್ಧವಾಗಿ ನಡೆದುಕೊಳ್ಳಬೇಕು ಎಂದು ಮಾತನಾಡಿದರು,,
ಸಾರ್ವಜನಿಕರು ಯಾವುದೇ ಸರ್ಕಾರಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಒಳಗೊಂಡಂತೆ ಅವರುಗಳ ವಿರುದ್ಧ ಯಾವುದೇ ತರಹದ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರುಗಳಿದ್ದಲ್ಲಿ ನೇರವಾಗಿ ನಮ್ಮ ಕಚೇರಿಗೆ ಬಂದು ದೂರುಗಳನ್ನು ನೀಡಬೇಕು ಎಂದು ತಿಳಿಸಿದರು, ಹಲೋ ಸಾಮಾಜಿಕ ಕೆಲಸಗಳನ್ನು ಮಾಡುವ ಮೂಲಕ ಹೆಸರು ಮಾಡಿರುವ ಭ್ರಷ್ಟಾಚಾರ ನಿಗ್ರಹದಳ ಈಗ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದೆ, ಸಮಾಜ ಸೇವೆ ನಮ್ಮ ಗುರಿ, ಭ್ರಷ್ಟ ಅಧಿಕಾರಿಗಳ ಮೇಲೆ ಸೂಕ್ತ ಗಮನವಿಟ್ಟು, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕರ್ತವ್ಯ ನಿರ್ವಹಿಸುತ್ತೇವೆ ಎಂದು ಪಿಡಿಎನ್ಎ ಭ್ರಷ್ಟಾಚಾರ ನಿಗ್ರಹದಳ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರು ನದೀಮ್ ಪಾಷಾ ಮಾತನಾಡಿದರು,,
ಈ ಸಂದರ್ಭದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರು ಅಯುಬ್ ಖಾನ್, ರಾಷ್ಟ್ರೀಯ ಕಾರ್ಯಧ್ಯಕ್ಷರಾದ ಬೆಳ್ಳೂರು ವೆಂಕಟೇಶ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ವಿ ಶಿವಶಂಕರ್, ಆಸ್ಕರ್ ಕೃಷ್ಣ, ದಲಿತ ಸೇನೆ ತಾಲೂಕು ಉಪಾಧ್ಯಕ್ಷರಾದ ಆರ್ ಎನ್ ಹಟ್ಟಿ ರಂಗಯ್ಯ,ರಾಷ್ಟ್ರೀಯ ಬೋರ್ಡ್ ಆಫ್ ಡೈರೆಕ್ಟರ್ ಜೀಯಾಉಲ್ಲ, ಅಮೀನ್ ಉಲ್ಲಾ, ನಾಸೀರ್, ಮುಬಾರಕ್, ಸೇರಿದಂತೆ ಹಲವು ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು,,,
ವರದಿ ನರಸಿಂಹರಾಜು

