ಸಿಲಿಕಾನ್ ಸಿಟಿಯಲ್ಲಿ ಈಗಾಗಲೇ ಬಿಸಿಲಿಗೆ ಜನರು ತತ್ತಿರಿಸಿ ಹೋಗುತ್ತಿದ್ದಾರೆ. ಬಿಸಿಲಿನ ಬೇಗೆಗೆ ತಂಪುಪಾನೀಯಗಳು ಮತ್ತು ಏಲನೀರಿನ ಮೊರೆ ಹೋಗಿದ್ದಾರೆ. ಆದರೆ ರಣಬಿಸಿಲು ಜನರನ್ನು ಮಾತ್ರ ಸುಡುತ್ತಲ್ಲೇ ಇದೆ.
ಮೊದಲ ಬಾರಿಗೆ ಬೆಂಗಳೂರಿನಲ್ಲಿ ದಾಖಲೆಯ ಪ್ರಮಾಣದ ಉಷ್ಣಾಂಶ ದಾಖಲಾಗಿದೆ. ನಗರದಲ್ಲಿ 41.3 ಡಿಗ್ರಿ ಸೆ. ಉಷ್ಣಾಂಶ ದಾಖಲಾಗಿದ್ದು, ಎಂದಿಗಿಂತ ಈ ಬಾರಿ 7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಏರಿಕೆಯಾಗಿದ್ದು, ಜನರು ರಣಬಿಸಿಲಿಗೆ ಬೆಂದು ಹೋಗುತ್ತಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ಪೆನ್‌ಡ್ರೈವ್ ಕೇಸ್; ಕೇಳಿದಂತೆ ಸಮಯ ಕೊಡಲು ಆಗುವುದಿಲ್ಲ: ಜಿ ಪರಮೇಶ್ವರ್

ಇನ್ನು ರಾಜ್ಯ ಹಲವಾರು ಜೆಲ್ಲೆಗಳಲಲ್ಲಿ 45 ಡಿಗ್ರಿ ಗಡಿ ದಾಟಿದೆ. ರಾಯಚೂರು ಹಾಗೂ ಕಲಬುರಗಿಯಲ್ಲಿ 46.7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ನಿನ್ನೆ ಕಲಬುರಗಿ,ರಾಯಚೂರು, ಯಾದಗಿರಿ, ವಿಜಯಪುರ, ಕೊಪ್ಪಳ ಸೇರಿದಂತೆ ಹಲವು ಜಿಲ್ಲೆಗಳಲ್ಲಿ 45 ಡಿಗ್ರಿ ಗಡಿ ಉಷ್ಣಾಂಶ ದಾಟಿದೆ. ಇದನ್ನೂ ಓದಿ: ಹಾಸ್ಟೆಲ್‌ನಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ

ಈ ಉರಿ ಬಿಸಿಲಿನಲ್ಲಿ ಅದಷ್ಟು ಹೊರಗೆ ಹೊಗುವುದು ಕಡಿಮೆ ಮಾಡಬೇಕು, ಸರಿಯಾದ ಕ್ರೀಮ್‌ಗಳನ್ನು ಬಳಸುವುದು, ಹಾಗೂ ಹೆಚ್ಚಿನ ಪ್ರಮಾಣದಲ್ಲಿ ನೀರು ಮತ್ತು ತಂಪು ಪಾನಿಯಗಳನ್ನು ಕುಡಿಯುವದರಿಂದ ರಣಬಿಸಿಲಿನಿಂದ ಕಾಪಾಡಿಕೊಳ್ಳಬಹುದು. ಇದನ್ನೂ ಓದಿ: ತಮಿಳು ಹಿರಿಯ ಗಾಯಕಿ ಉಮಾ ರಮಣನ್ ನಿಧನ