ಬೆಂಗಳೂರು: ಸಾಮಾನ್ಯವಾಗಿ 2ರಿಂದ 3 ತಿಂಗಳ ಕಾಲ ಶಾಲೆ ಮಕ್ಕಳಿಗೆ ಬೇಸಿಗೆ ರಜೆ (Summer Holidays) ಸಿಗುತ್ತದೆ, ಆದರೆ ಸಿಲಿಕಾನ್ ಸಿಟಿಯಲ್ಲಿ (Silicon City) ಕೆಲವು ಖಾಸಗಿ ಶಾಲೆಗಳು ನಿಗದಿತ ಅವಧಿಗಿಂತ ಬೇಗ ಶಾಲೆ ಆರಂಭಿಸುತ್ತವೆ. ಅಂತಹ ಖಾಸಗಿ ಶಾಲೆಗಳಿಗೆ (Private Schools) ಬೀಗ ಜಡಿಯಲು ಪ್ಲಾನ್ ಮಡಲಾಗಿದೆ.
ಮಕ್ಕಳ ಬೇಸಿಗೆ ರಜೆಗೆ ಕತ್ತರಿ ಹಾಕಿ ನಿಗಧಿತ ಅವಧಿಗಿಂತ ಬೇಗನೇ ಕೆಲವು ಖಾಸಗಿ ಶಾಲೆಗಳು ಆರಂಭವಗುತ್ತವೆ. ಶಿಕ್ಷಣ ಇಲಾಖೆಗಳ ಸುತ್ತೊಲೆಯನ್ನು ಗಾಳಿಗೆ ತೊರಿಸಿದ ಶಾಲೆಗಳ ವಿರುದ್ಧ ಪೋಷಕರ ಸಮನ್ವಯ ಸಮಿತಿಯಿಂದ ಮಕ್ಕಳ ಆಯೋಗಕ್ಕೆ ದೂರು ನೀಡಲಾಗಿತ್ತು.ಇದನ್ನೂ ಓದಿ: ಸಂತ್ರಸ್ತೆ ಸಮ್ಮುಖದಲ್ಲಿ ಸ್ಥಳ ಮಹಜರು ಮಾಡಿದ SIT ತಂಡ
ದೂರಿನಲ್ಲಿ ಏನಿದೆ?ಮಕ್ಕಳ ಬೇಸಿಗೆ ರಜದ ಸ್ವಾತಂತ್ರ‍್ಯ ಕಿತ್ತುಕೊಂಡ ಶಾಲೆಗಳ ವಿರುದ್ಧ ಕ್ರಮತೆಗೆದುಕೊಳ್ಳುವಂತೆ ಮಕ್ಕಳ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದು ದೂರು ನೀಡಲಾಗಿದೆ. ಆಯೋಗದಿಂದಲೂ ಅಂತಹ ಶಾಲೆಗಳ ಮೇಲೆ ಕ್ರಮ ತೆಗೆದುಕೊಳ್ಳಲು ತಯಾರಿ ನಡೆಸಬೆಕೆಂದು ಶಿಕ್ಷಣ ಇಲಾಖೆಗೆ ಪತ್ರ ಬರೆದು ಕ್ರಮ ತೆಗೆದುಕೊಳುವಂತೆ ಆಯೋಗ ಒತ್ತಾಯಿಸಿದೆ. ಇದನ್ನೂ ಓದಿ: ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ: ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ರಾಹುಲ್ ಗಾಂಧಿ
ಶಾಲೆಗಳು ಬೇಗ ಆರಂಭವಾಗುತ್ತಿರೋದು ಏಕೆ….?ಶೈಕ್ಷಣಿಕ ವರ್ಷ ಆರಂಭವಾಹುತ್ತಿದಂತೆ ವಿದ್ಯಾರ್ಥಿಗಳು ಬೇರೆ ಶಾಲೆಗೆ ವರ್ಗಾವಣೆ ಆಗುತ್ತಾರೆ ಎಂಬ ಆತಂಕದಲ್ಲಿ ವರ್ಗಾವಣೆಗೆ ಆಸ್ಪಾದ ನೀಡದಂತೆ ಖಾಸಗಿ ಶಾಲೆಗಳು ಮಾಸ್ಟರ್ ಪ್ಲಾನ್ ಮಾಡಿಶೈಕ್ಷಣಿಕ ವರ್ಷದ ಫೀಸ್ ಕಟ್ಟಿಸಿಕೊಂಡು ಶಾಲೆಗಳು ಆರಂಭಮಾಡಿವೆ. ಅಂತಹ ಶಾಲೆಗಳ ವಿರುದ್ಧ ಕ್ರಮಕೈಗೊಳ್ಳಲು ಶಿಕ್ಷಣ ಇಲಖೆ ಮುಂದಗಿದೆ. ಇದನ್ನೂ ಓದಿ: ಹೆಚ್.ಡಿ. ರೇವಣ್ಣನ ಮನೆ ತಲುಪಿದ ಮನೆ ದೇವರು ಈಶ್ವರನ ಪ್ರಸಾದ

