By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ವಾಜಪೇಯಿ ಜನ್ಮದಿನದಂದು ದೇಶದ ಮೊದಲ ನದಿ ಜೋಡಣೆ ಯೋಜನೆಗೆ ಮೋದಿ ಶಿಲಾನ್ಯಾಸ
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - Blog - ವಾಜಪೇಯಿ ಜನ್ಮದಿನದಂದು ದೇಶದ ಮೊದಲ ನದಿ ಜೋಡಣೆ ಯೋಜನೆಗೆ ಮೋದಿ ಶಿಲಾನ್ಯಾಸ

BlogLatestTop Storiesರಾಷ್ಟ್ರೀಯ-National

ವಾಜಪೇಯಿ ಜನ್ಮದಿನದಂದು ದೇಶದ ಮೊದಲ ನದಿ ಜೋಡಣೆ ಯೋಜನೆಗೆ ಮೋದಿ ಶಿಲಾನ್ಯಾಸ

PM Narendra Modi Lays Foundation Stone Of Ken-Betwa River Link Project In Madhya Pradesh's Khajuraho

Published December 25, 2024
Share
2 Min Read
River Link Project
SHARE

ಭೋಪಾಲ್: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಬಹದೊಡ್ಡ ಕನಸಾಗಿದ್ದ ನದಿಗಳ ಜೋಡಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ವಾಜಪೇಯಿ ಅವರ 100ನೇ ಜನ್ಮದಿನದಂದೇ ದೇಶದ ಮೊದಲ ನದಿಗಳ ಜೋಡಣೆ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಮಧ್ಯಪ್ರದೇಶದ ಖಜ್ರಾಹೋದಲ್ಲಿ ಕೆನ್-ಬೆಟ್ವಾ ನದಿಗಳ ಜೋಡಣೆಗೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ಮಾಡಿದ್ದಾರೆ.

2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದಾಗ ವಾಜಪೇಯಿ ಅವರ ಕನಸು ನದಿಗಳ ಜೋಡಣೆ ಯೋಜನೆಯನ್ನೂ ಜಾರಿಗೆ ತರಲು ಬಯಸಿದ್ದರು. ಅದು ಸಾಧ್ಯವಾಗಿರಲಿಲ್ಲ. ಬಳಿಕ ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ.ಮೋಹನ್ ಯಾದವ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಒಟ್ಟಾಗಿ ಈ ಕಾರ್ಯದಲ್ಲಿ ಎದುರಾದ ಎಲ್ಲಾ ಅಡೆತಡೆಗಳನ್ನು ನಿವಾರಿಸಿದರು. ಈಗ ಕೇಂದ್ರದಿಂದ ಅನುದಾನ ಮಂಜೂರಾತಿಯೂ ಸಿಕ್ಕಿದೆ. ಈಗ ಪ್ರಧಾನಿ ನರೇಂದ್ರ ಮೋದಿ ಅದರ ಅಡಿಪಾಯ ಹಾಕುತ್ತಿದ್ದಾರೆ.

ಮಧ್ಯಪ್ರದೇಶದ ಛತ್ತರ್‌ಪುರ ಮತ್ತು ಪನ್ನಾ ಜಿಲ್ಲೆಗಳಲ್ಲಿ ಕೆನ್-ಬೆಟ್ವಾ ಲಿಂಕ್ ಯೋಜನೆಯನ್ನು ಆರಂಭಿಸಿದೆ. ಯೋಜನೆಯಡಿ ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೆನ್ ನದಿಯ ಮೇಲೆ 77 ಮೀಟರ್ ಎತ್ತರ ಮತ್ತು 2.13 ಕಿಲೋಮೀಟರ್ ಉದ್ದದ ದೌಧನ್ ಅಣೆಕಟ್ಟು ನಿರ್ಮಿಸಲಾಗುವುದು. ಇಲ್ಲಿ 2,853 ಮಿಲಿಯನ್ ಕ್ಯೂಬಿಕ್ ಮೀಟರ್ ನೀರು ಸಂಗ್ರಹವಾಗಲಿದೆ. ಅಣೆಕಟ್ಟಿನ ಮೇಲಿನ ಹಂತದಲ್ಲಿ 1.9 ಕಿ.ಮೀ ಮತ್ತು ಕೆಳಮಟ್ಟದಲ್ಲಿ 1.1 ಕಿ.ಮೀ ಸುರಂಗ ನಿರ್ಮಿಸಲಾಗುವುದು. ಈ ಸುರಂಗಗಳ ಮೂಲಕ, ಕೆನ್ ನದಿಯ ಉಳಿದ ನೀರನ್ನು 221 ಕಿಮೀ ಉದ್ದದ ಲಿಂಕ್ ಕಾಲುವೆಯ ಮೂಲಕ ಬೆಟ್ವಾ ನದಿಗೆ ಬಿಡುಗಡೆ ಮಾಡಲಾಗುತ್ತದೆ.

ಈ ಕಾಲುವೆ ಮಧ್ಯಪ್ರದೇಶದ ಛತ್ತರ್‌ಪುರ, ಟಿಕಮ್‌ಗಢ, ನಿವಾರಿ ಮೂಲಕ ಹಾದು ಉತ್ತರ ಪ್ರದೇಶದ ಝಾನ್ಸಿಯಲ್ಲಿ ಬೆಟ್ವಾ ನದಿಯನ್ನು ಸೇರುತ್ತದೆ. ಈ ಜಿಲ್ಲೆಗಳ ಗ್ರಾಮಗಳ ರೈತರಿಗೆ ನೀರಾವರಿಗಾಗಿ ಕಾಲುವೆಯಿಂದ ನೀರು ಲಭ್ಯವಾಗಲಿದೆ. ಅಲ್ಲದೆ, ಕುಡಿಯುವ ಉದ್ದೇಶಕ್ಕೂ ನೀರು ಲಭ್ಯವಾಗಲಿದೆ. ಇದಾದ ನಂತರ ಉಳಿದ ನೀರನ್ನು ಬೆಟ್ವಾ ನದಿಗೆ ಬಿಡಲಾಗುವುದು. ಇದಲ್ಲದೇ ಬೀನಾ ನದಿ ಮತ್ತು ಉರ್ ನದಿಗೆ ಅಣೆಕಟ್ಟುಗಳನ್ನು ನಿರ್ಮಿಸಲಾಗುವುದು.

ಕೆನ್ ಬೆಟ್ವಾ ಲಿಂಕ್ ಯೋಜನೆಯಿಂದ ಮಧ್ಯಪ್ರದೇಶದ 10 ಜಿಲ್ಲೆಗಳಲ್ಲಿ 8.11 ಲಕ್ಷ ಹೆಕ್ಟೇರ್ ಭೂಮಿಗೆ ಮತ್ತು ಉತ್ತರ ಪ್ರದೇಶದ 4 ಜಿಲ್ಲೆಗಳಲ್ಲಿ 2.51 ಲಕ್ಷ ಹೆಕ್ಟೇರ್ ಭೂಮಿಗೆ ನೀರುಣಿಸುತ್ತದೆ. ಅಲ್ಲದೆ 65 ಲಕ್ಷ ಜನರಿಗೆ ಕುಡಿಯುವ ನೀರು ಸಿಗಲಿದೆ ಎಂದು ಅಂದಾಜಿಸಿದೆ. ಮಧ್ಯಪ್ರದೇಶದ 10 ಜಿಲ್ಲೆಗಳು ಈ ಯೋಜನೆಯಿಂದ ಪ್ರಯೋಜನವಾಗಲಿದೆ. ಪನ್ನಾ, ದಾಮೋಹ್, ಛತ್ತರ್‌ಪುರ್, ಟಿಕಮ್‌ಗಢ್, ನಿವಾರಿ, ಸಾಗರ್, ರೈಸೆನ್, ವಿದಿಶಾ, ಶಿವಪುರಿ ಮತ್ತು ದಾತಿಯಾ ಸೇರಿವೆ. ರೈತರಿಗೆ ಕುಡಿಯಲು ಮತ್ತು ನೀರಾವರಿಗೆ ನೀರು ಸಿಗುತ್ತದೆ. ಎರಡನೇ ಹಂತದಲ್ಲಿ ಯೋಜನೆಯಡಿ ಉಪನದಿಗಳಲ್ಲಿ ಅಣೆಕಟ್ಟು ಹಾಗೂ ಇತರೆ ಕಾಮಗಾರಿ ಆರಂಭಿಸಲಾಗುವುದು ಎಂದು ಸರ್ಕಾರ ಹೇಳಿದೆ.

ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿ.ಡಿ.ಶರ್ಮಾ, ಉಪಮುಖ್ಯಮಂತ್ರಿ ರಾಜೇಂದ್ರ ಶುಕ್ಲಾ, ಸಚಿವ ಪ್ರಹ್ಲಾದ್ ಪಟೇಲ್, ಉಪಮುಖ್ಯಮಂತ್ರಿ ಜಗದೀಶ್ ದೇವ್ರಾ, ಸಚಿವ ರಾಕೇಶ್ ಸಿಂಗ್, ಜಲಸಂಪನ್ಮೂಲ ಸಚಿವೆ ತುಳಸಿ ಸಿಲಾವತ್, ಕೃಷಿ ಸಚಿವ ಇಂದಲ್ ಸಿಂಗ್ ಕಂಸಾನಾ, ಕೇಂದ್ರ ಕೇಂದ್ರ ಕೃಷಿ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

You Might Also Like

ಯತ್ನಾಳ್ ಮತ್ತೆ ಆಕ್ಟಿವ್, ವಿಜಯೇಂದ್ರ ವಿರುದ್ಧ ವಾಗ್ದಾಳಿ

ನೇಹಾ ಕೋಲೆ ಕೇಸ್ ಸಿಐಡಿ ತನಿಖೆಗೆ ವಹಿಸುತೇವೆ: ಸಿಎಂ

ಕೊನೆಗೂ ಕೇಂದ್ರದಿoದ ಕಾಂಗ್ರೆಸ್‌ಗೆ ಬಿಗ್ ರಿಲೀಫ್! ಚುನಾವಣೆ ಮುಗಿಯವರೆಗೂ ತೆರಿಗೆ ವಸೂಲಿ ಇಲ್ಲ

ಚಾರ್ಮಾಡಿಯಲ್ಲಿ ಪ್ರವಾಸಿಗರ ಹುಚ್ಚಾಟ –ಬಟ್ಟೆ ಹೊತ್ತೊಯ್ದ ಬುದ್ಧಿ ಕಲಿಸಿದ ಕಾಕಿ

2 ತಿಂಗಳೊಳಗೆ ಕೆಪಿಎಸ್‌ಸಿ ಮರುಪರೀಕ್ಷೆ ನಡೆಸುವಂತೆ ಸಿಎಂ ಸೂಚನೆ

TAGGED:narendra modiPM Narendra ModiRiver Link Project
Share This Article
Facebook Copy Link Print
Previous Article Maha Kumbh ಜ.13 ರಿಂದ ಆರಂಭವಾಗುವ ಮಹಾಕುಂಭಕ್ಕೆ ಪ್ರಯಾಗ್‌ರಾಜ್‌ನಲ್ಲಿ ಸಕಲ ಸಿದ್ಧತೆ
Next Article Haveri ಶಿಗ್ಗಾಂವಿ ಬಳಿ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ಕು ಮಂದಿ ದಾರುಣ ಸಾವು
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

sdggdgdgdg sdggdgdgdg sdggdgdgdg
ನಟಿ ಕೃತಿ ಗೌಡ ಜೊತೆ ದಾಂಪತ್ಯಕ್ಕೆ ಕಾಲಿಡಲು ಸಜ್ಜಾದ ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಪ್ರಶಾಂತ್ ಗೌಡ
Entertainment
April 21, 2026
Heatwave - Weather
ರಾಜ್ಯದಲ್ಲಿ ಈ ವಾರ ಭಾರಿ ಬಿಸಿಲು, ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆ
ರಾಜ್ಯ-Karnataka
April 21, 2026
John Ternus John Ternus John Ternus
ಸೆಪ್ಟೆಂಬರ್‌ನಲ್ಲಿ ಟಿಮ್ ಕುಕ್ ನಿವೃತ್ತಿ, ಆ್ಯಪಲ್ ಹೊಸ ಸಿಇಒ ಆಗಿ ಜಾನ್ ಟೆರ್ನಸ್ ನೇಮಕ
ವಿದೇಶ-International
April 21, 2026
census census census
ರಾಜ್ಯದಲ್ಲಿ ಇಂದಿನಿಂದ ಜನಗಣತಿ ಆರಂಭ
ರಾಜ್ಯ-Karnataka
April 19, 2026
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up