ಬೆಂಗಳೂರು : ರಜೆ ದಿನ ಆಫೀಸ್ ಗಳನ್ನ ಟಾರ್ಗೆಟ್ ಮಾಡಿ ಲ್ಯಾಪ್ ಟಾಪ್ ಕದಿಯುತ್ತಿದ್ದ ಆರೋಪಿಗಳ ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಅಜಯ್ @ ಕೋಣೆ, ಅರುಣ್ @ ಮಾಡು, ಪ್ರತಾಪ್ @ ಮಂಡೆಮುಖ, ಅಪ್ಪು @ ಸಾಯಿ ಬಂಧಿತರು.
ಫಿಂಗರ್ ಫ್ರಿಂಟ್ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿದ್ದು ಈ ಹಿಂದೆ ಹಲಸೂರು ಹಾಗೂ ಹೆಬ್ಬಾಳ ದಲ್ಲಿ ಕಳ್ಳತನ ಮಾಡಿದ ಸಿಕ್ಕಿಬಿದ್ದಿದ್ದ ಆರೋಪಿಗಳು
ಈ ಪ್ರಕರಣದಲ್ಲಿ ಆರೋಪಿಗಳ ಫಿಂಗರ್ ಪ್ರಿಂಟ್ ಶೇಖರಿಸಲಾಗಿತ್ತು.ಈ ಫಿಂಗರ್ ಪ್ರಿಂಟ್ ಗಳಿಗೆ ಕಾಡುಗೋಡಿಯಲ್ಲಾದ ಪ್ರಕರಣದ ಫಿಂಗರ್ ಪ್ರಿಂಟ್ ಮ್ಯಾಚ್ ಆಗಿತ್ತು.
ಫಿಂಗರ್ ಪ್ರಿಂಟ್ ಆದರಿಸಿ ಆರೋಪಿಗಳನ್ನ ಪತ್ತೆ ಮಾಡಿದ ಕಾಡುಗೋಡಿ ಪೊಲೀಸರು. ಬಂಧಿತರಿಂದ 4 ಲಕ್ಷ ಮೌಲ್ಯದ 11 ಲ್ಯಾಪ್ ಟಾಪ್ 24 ಗ್ರಾಂ ಚಿನ್ನಾಭರಣ ವಶಕ್ಕೆ

