ಚಿಕ್ಕೋಡಿ : ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕೊನೆನೆ ಇಲ್ವಾ..? ಅಬಕಾರಿ ಇಲಾಖೆ ಅಕ್ಷರ:ಷ ಕಣ್ಣುಮುಚ್ಚಿ ಕುಳಿತ್ತಂತೆ ಕಾಣುತ್ತಿದೆ.ಗ್ರಾಮೀಣ ಪ್ರದೇಶ ಸೇರಿದಂತೆ ನಗರದ ಕೆಲವು ಪ್ರಮುಖ ಸ್ಥಳಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಿ ಸಾರ್ವಜನಿಕರ ಜೀವದ ಜೊತೆ ಆಟ ಆಡ್ತಿದ್ದಾರೆ,
ಇನ್ನೂ ಇಂತಹ ಅವ್ಯವಸ್ಥೆ ಕುರಿತು ಕೆಲ ಪತ್ರಕರ್ತರು ಹೋರಾಟ ಮಾಡುತ್ತಿರುವಾಗಲೇ ರಕ್ಷಣೆ ನೀಡುವ ಇಲಾಖೆಯೇ ರಕ್ಕಸವಾಗಿ ಹೊರಹೋಮ್ಮಿದ ಘಟನೆ ನಡೆದಿದೆ.
ಅರೆ… ಏನ್ ಇದು ಕಥೆ ಅಂತೀರಾ ಈ ಸ್ಟೋರಿ ನೋಡಿ
ಇದು ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪೂರ ಅನ್ನೋ ಗ್ರಾಮಕ್ಕೆ ರಾಜ್ಯ ಹೆದ್ದಾರಿ ಹಾಗೂ ಜತ್ ಜಂಬೂಟಿ ರಸ್ತೆಗೆ ಹೊಂದಿಕೊಂಡಿರುವ ಗ್ರಾಮವಾಗಿದ್ದು ಇಲ್ಲಿ ಬಹುತೇಕ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ರಜಾ ರೋಷವಾಗಿ ನಡೀತಾ ಇದೆ.
ಕೊಂಡ್ರಿಂಕ್ಸ್ ಹಾಗೂ ಪಾನ್ ಅಂಗಡಿಗಲ್ಲಿಯೂ ಕೂಡ ಕೆಲವು ಡಾಬಾಗಳಲ್ಲಿ ದುಪ್ಪಟ್ಟು ಬೆಲೆಗೆ ಸಾರಾಯಿ ಮಾರಾಟವಾಗುತ್ತಿದೆ.ಇದನ್ನು ಪ್ರಶ್ನೆಸಿದ ಪತ್ರಕರ್ತರೋಬ್ಬರಿಗೆ ಪೊಲೀಸ್ ಇಲಾಖೆಯ ಅಧಿಕಾರಿಯಿಂದಲೇ ಜೀವ ಬೆದರಿಕೆ ಬಂದಿದ್ದು ಸದ್ಯ ಸಂಪೂರ್ಣ ವಾಹಿನಿಯ ಮೊರೆ ಹೋಗಿದ್ದಾರೆ.
ಪತ್ರಕರ್ತ ಮಲ್ಲಪ್ಪ ಹೆಬ್ಬಳ್ಳಿ ಅವರಿಗೆ ಪೊಲೀಸ್ ಅಧಿಕಾರಿಯಿಂದ ಜೀವ ಬೆದರಿಕೆ ಕರೆ ಬಂದಿರೋ ಆಡಿಯೋ ತುಣುಕು ನಮ್ಮ ವಾಹಿನಿಗೆ ಲಭ್ಯವಾಗಿದೆ. ರಕ್ಷಣೆ ನೀಡುವ ಆರಕ್ಷರೆ ಬಕ್ಷಕರಾದರೆ ಹೇಗೆ..?
ಅದೇನೇ ಆಗಲಿ ಜೀವಬೆದರಿಕೆ ಹಾಕಿದ ಪೊಲೀಸ್ ಅಧಿಕಾರಿಗೆ ಯಾವ ರೀತಿ ಕಾನೂನು ಕ್ರಮ ಕೈಗೊಂಡು ಸಮಾಜದ ಸ್ವಾಸ್ತ್ಯ ಕಾಪಾಡುತ್ತಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ
ಎಂ. ಕೆ. ಸಪ್ತಸಾಗರ.

