ಡಾ. ರಾಜ್‌ಕುಮಾರ್ (Dr. Rajkumar) ಅವರ 95 ನೇ ಹುಟ್ಟುಹಬ್ಬಕ್ಕೆ ಕಂಠೀರವ ಸ್ಟುಡಿಯೋಗೆ ಕುಟುಂಬದವರು ಭೇಟಿ ನೀಡಿ ಪುಜೆ ಸಲ್ಲಿಸಿದ್ದಾರೆ.
ಕಂಠೀರವ ಸ್ಟುಡಿಯೋದಲ್ಲಿರುವ (Kanteerava Studio) ಡಾ.ರಾಜ್‌ಕುಮಾರ್ ಸ್ಮಾರಕದ ಬಳಿ ರಾಘವೇಂದ್ರ ರಾಜ್‌ಕುಮಾರ್, ಪತ್ನಿ ಮಂಗಳ, ರಾಜ್‌ಕುಮಾರ್ ಅವರ ಪುತ್ರಿ ಲಕ್ಷ್ಮಿ ದಂಪತಿ, ಅಶ್ವಿನಿ ಪುನೀತ್‌ರಾಜ್‌ಕುಮಾರ್ (Puneeth Rajkumar) , ಪುತ್ರಿ ವಂದಿತಾ ಆಗಮಿಸಿ ಡಾ.ರಾಜ್‌ಕುಮಾರ್ ಸ್ಮಾರಕಕ್ಕೆ ಪುಜೆ ಸಲ್ಲಿಸಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಅಭಿಮಾನಿಗಳು ಸೇರಿದ್ದಾರೆ.

ಈ ಬಾರಿ ಹೊನ್ನವಳ್ಳಿ ಕೃಣ್ಣ ಭಾಗಿಯಾಗಿ ಸ್ಮಾರಕ್ಕೆ ಪೂಜೆ ಸಲ್ಲಿಸಿದ್ದರು. ಎಂದಿನಂತೆ ಈ ಬಾರಿಯೂ ಕರ್ನಾಟಕ ಸರ್ಕಾರ ಮತ್ತು ಡಾ.ರಾಜ್‌ಕುಮಾರ್ ಸ್ಮಾರಕ ಟ್ರಸ್ಟ್ ಪ್ರತಿ ವರ್ಷದಂತೆ ಈ ವರ್ಷವೂ ನಾನಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಇಂದು ರಾಜ್ಯದ್ಯಂತ ಅಭಿಮಾನಿಗಳು ಅನಾಥಾಶ್ರಮ ವೃದ್ದಾಶ್ರಮಗಳಿಗೆ ಅನ್ನ ಸಂತರ್ಪನೆ, ರಕ್ತದಾನ ಶಿಬಿರಗಲನ್ನು ಏರ್ಪಡಿಸಿದ್ದಾರೆ. ಡಾ. ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಇಂದು ಸಂಜೆ ಸಂಗೀತ ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯಲಿವೆ.

ಪ್ರತಿ ವರ್ಷದಂತೆ ಈ ಸಲವೂ ಡಾ.ರಾಜ್ ಪೂಣ್ಯಭೂಮಿ ಸ್ಥಳದಲ್ಲಿ ಅಭಿಮಾನಿಗಳು ರಕ್ತದಾನ ಶಿಬಿರ, ಕಣ್ಣುದಾನ ಶಿಬಿರ, ಅನ್ನ ಸಂತರ್ಪಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಳ್ಳುತ್ತಿದಾರೆ. ಬೆಳಗ್ಗೆಯಿಂದಲೇ ಈ ಎಲ್ಲ ಕೆಲಸಗಳು ಕಂಠೀರವ ಸ್ಟುಡಿಯೋದ ಆವರಣದಲ್ಲೇ ಶುರುವಾಗಲಿದೆ.

