ವಾಷಿಂಗ್ಟನ್ : ಇಂದು ಅಮೇರಿಕಾದ ಶ್ವೇತ ಭವನದಲ್ಲಿ ಅನಿವಾಸಿ ಭಾರತೀಯರ ಜೊತೆ ಅಮೇರಿಕಾದ ಅಧ್ಯಕ್ಷ ಜೋ ಬೈಡನ್ ದೀಪಾವಳಿ ಆಚರಿಸಿದ್ದಾರೆ. ಕೇವಲ ಭಾರತದಲ್ಲಿ ಮಾತ್ರವಲ್ಲದೆ ಅಮೇರಿಕಾದಲ್ಲಿರುವ ಅನಿವಾಸಿ ಭಾರತೀಯರು ಕೂಡ ಅತ್ಯಂತ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ.
ಹಿಂದಿನ ವರ್ಷಗಳ ಸಂಪ್ರದಾಯದಂತೆ ಅಧ್ಯಕ್ಷರು ಭಾಷಣಕ್ಕೂ ಮುನ್ನಾ ಬ್ಲೂ ರೂಮ್‌ನಲ್ಲಿ ದೀಪವನ್ನು ಬೆಳಗಿಸಿದರು. ಬಳಿಕ ಅವರು ಅನಿವಾಸಿ ಭಾರತೀಯರನ್ನುದ್ದೇಶಿಸಿ ಭಾಷಣ ಮಾಡಿದರು.
ಅಧ್ಯಕ್ಷರ ಭಾಷಣದ ವೇಳೆ ನಾಸಾ ಗಗನಯಾತ್ರಿ ಮತ್ತು ನಿವೃತ್ತ ನೌಕಾಪಡೆಯ ಕ್ಯಾಪ್ಟನ್ ಸುನಿತಾ ವಿಲಿಯಮ್ಸ್ ಅವರ ವೀಡಿಯೊ ಸಂದೇಶ ನೀಡಿದ್ದಾರೆ.
ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ವೀಡಿಯೊ ಶುಭಾಶಯವನ್ನು ರೆಕಾರ್ಡ್ ಮಾಡಿ ಕಳುಹಿಸಿದ್ದಾರೆ.

