ಮಂಡ್ಯ, ಏ.15: Narendra Modi ಅವರು ವಿಕಸಿತ ಭಾರತ ನಿರ್ಮಾಣಕ್ಕೆ ಯುವಜನತೆಗೆ ಒಂಬತ್ತು ಮಹತ್ವದ ಸೂತ್ರಗಳನ್ನು ನೀಡಿದರು. ಮಂಡ್ಯ ಜಿಲ್ಲೆಯ Adichunchanagiri Muttಗೆ ಭೇಟಿ ನೀಡಿ ನೂತನ ಭೈರವೈಕ್ಯ ಮಂದಿರ ಉದ್ಘಾಟನೆ ಬಳಿಕ ಮಾತನಾಡಿದ ಪ್ರಧಾನಿ, ಈ ಸಂಕಲ್ಪಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ವಿಕಸಿತ ಕರ್ನಾಟಕ ಮತ್ತು ವಿಕಸಿತ ಭಾರತದತ್ತ ಸಾಗಲು ಸಾಧ್ಯವೆಂದರು.
ಪ್ರಧಾನಿ ತಮ್ಮ ಭಾಷಣವನ್ನು ಅಚ್ಚಕನ್ನಡದಲ್ಲಿ ಆರಂಭಿಸಿ, ಬಳಿಕ ಹಿಂದಿಯಲ್ಲಿ ಮುಂದುವರಿಸಿದರು. ಪೂಜ್ಯ Balagangadharanatha Swamiji ಅವರು ಬದುಕಿದ ಒಂಬತ್ತು ಆದರ್ಶಗಳನ್ನು ಉಲ್ಲೇಖಿಸಿ—ಅನ್ನ, ಅಕ್ಷರ, ಆರೋಗ್ಯ, ಅಧ್ಯಾತ್ಮ, ಆಶ್ರಯ, ಅರಣ್ಯ, ಅನುಕಂಪ, ಆಕಳು ಮತ್ತು ಸ್ವಚ್ಛತೆ—ಇವುಗಳ ಆಧಾರದ ಮೇಲೆ ಜನರು ಜೀವನ ರೂಪಿಸಬೇಕು ಎಂದು ಸಲಹೆ ನೀಡಿದರು.
ಪ್ರಧಾನಿ ನೀಡಿದ ಒಂಬತ್ತು ಸಂಕಲ್ಪಗಳಲ್ಲಿ ಜಲಸಂರಕ್ಷಣೆ, ಪರಿಸರ ರಕ್ಷಣೆಗಾಗಿ ಗಿಡ ನೆಡುವುದು, ಸ್ವಚ್ಛತೆ ಕಾಪಾಡುವುದು, ಸ್ವದೇಶಿ ಉತ್ಪನ್ನಗಳ ಬಳಕೆ, ದೇಶೀಯ ಪ್ರವಾಸೋದ್ಯಮ ಉತ್ತೇಜನ, ರಾಸಾಯನಿಕ ಮುಕ್ತ ಕೃಷಿ, ಆರೋಗ್ಯಕರ ಆಹಾರ ಪದ್ಧತಿ, ಯೋಗ ಮತ್ತು ಫಿಟ್ನೆಸ್ ಹಾಗೂ ಸೇವಾಭಾವನೆ ಒಳಗೊಂಡಿವೆ. ವಿಶೇಷವಾಗಿ Ragi Muddeಯ ಮಹತ್ವವನ್ನು ನೆನೆದು, ಇದು ಆರೋಗ್ಯದ ಪ್ರತೀಕ ಎಂದು ಪ್ರಶಂಸಿಸಿದರು.
ಮಂಡ್ಯ ಹಾಗೂ Kaveri Riverನೊಂದಿಗೆ ಜನರ ಬದುಕಿನ ಸಂಬಂಧವನ್ನು ಪ್ರಸ್ತಾಪಿಸಿದ ಪ್ರಧಾನಿ, ನೀರಿನ ಮೌಲ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಆದಿಚುಂಚನಗಿರಿ ಮಠವು ಆಧ್ಯಾತ್ಮಿಕ ಮಾರ್ಗದರ್ಶನದ ಜೊತೆಗೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ನೀಡುತ್ತಿರುವ ಸೇವೆಯನ್ನು ಅವರು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ Nirmalanandanatha Swamiji ಅವರು ಪ್ರಧಾನಿಯನ್ನು ಗೌರವಿಸಿದರು. ಇದೇ ವೇಳೆ ರಾಜ್ಯಪಾಲ Thawar Chand Gehlot, ಕೇಂದ್ರ ಸಚಿವರಾದ H. D. Kumaraswamy ಮತ್ತು Shobha Karandlaje ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.
ಪ್ರಧಾನಿ ನೀಡಿದ ಸೂತ್ರಗಳು :
- ಜಲಸಂರಕ್ಷಣೆ:
ನೀರು ಜೀವದ ಆಧಾರ. ಪ್ರತಿಯೊಬ್ಬರೂ ನೀರನ್ನು ಮಿತವಾಗಿ ಬಳಸಬೇಕು, ಮಳೆನೀರನ್ನು ಸಂಗ್ರಹಿಸುವ ಕ್ರಮಗಳನ್ನು ಅನುಸರಿಸಬೇಕು. - ಪರಿಸರ:
ಪ್ರತಿಯೊಬ್ಬರೂ ತಮ್ಮ ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡುವುದರಿಂದ ಪರಿಸರ ರಕ್ಷಣೆಗೂ, ಭವಿಷ್ಯ ಪೀಳಿಗೆಗೂ ಸಹಾಯವಾಗುತ್ತದೆ. - ಸ್ವಚ್ಛತೆ:
ಮನೆ ಮಾತ್ರವಲ್ಲದೆ ರಸ್ತೆ, ಸಾರ್ವಜನಿಕ ಸ್ಥಳಗಳು ಎಲ್ಲೆಡೆ ಸ್ವಚ್ಛತೆ ಕಾಪಾಡುವುದು ಆರೋಗ್ಯಕರ ಸಮಾಜಕ್ಕೆ ಅಗತ್ಯ. - ಸ್ವದೇಶಿ (Vocal for Local):
ದೇಶೀಯ ಉತ್ಪನ್ನಗಳನ್ನು ಬಳಸುವುದರಿಂದ ಸ್ಥಳೀಯ ಉದ್ಯಮಗಳು ಬೆಳೆಯುತ್ತವೆ ಮತ್ತು ಆತ್ಮನಿರ್ಭರ ಭಾರತ ನಿರ್ಮಾಣವಾಗುತ್ತದೆ. - ದೇಶ ಪ್ರವಾಸ:
ದೇಶದೊಳಗಿನ ಪ್ರವಾಸವನ್ನು ಉತ್ತೇಜಿಸುವುದರಿಂದ ಸ್ಥಳೀಯ ಆರ್ಥಿಕತೆಗೆ ಬೆಂಬಲ ಸಿಗುತ್ತದೆ ಮತ್ತು ಭಾರತದ ವೈವಿಧ್ಯತೆ ಪರಿಚಯವಾಗುತ್ತದೆ. - ಕೆಮಿಕಲ್ ಮುಕ್ತ ಕೃಷಿ:
ರಾಸಾಯನಿಕ ರಹಿತ ಕೃಷಿಯಿಂದ ಆರೋಗ್ಯಕರ ಆಹಾರ ದೊರೆಯುತ್ತದೆ ಮತ್ತು ಪರಿಸರದ ಮೇಲೆ ಹಾನಿ ಕಡಿಮೆಯಾಗುತ್ತದೆ. - ಆರೋಗ್ಯಕರ ಆಹಾರ:
ಹಳೆಯ ಕಾಲದ ಪೌಷ್ಟಿಕ ಆಹಾರ ಪದ್ಧತಿಗಳನ್ನು ಅನುಸರಿಸುವುದು ಉತ್ತಮ. ರಾಗಿ ಮುದ್ದೆಂತಹ ಆಹಾರಗಳು ಆರೋಗ್ಯದ ಸಂಕೇತ. - ಯೋಗ, ಆಟ, ಫಿಟ್‌ನೆಸ್:
ಪ್ರತಿದಿನ ವ್ಯಾಯಾಮ, ಯೋಗ ಮತ್ತು ಕ್ರೀಡೆಗಳಲ್ಲಿ ತೊಡಗಿಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸುತ್ತದೆ. - ಸೇವಾಭಾವನೆ:
ಸಮಾಜದ ಒಳಿತಿಗಾಗಿ ಸೇವೆ ಮಾಡುವ ಮನೋಭಾವ ಬೆಳೆಸುವುದು ಒಳ್ಳೆಯ ನಾಗರಿಕನ ಲಕ್ಷಣ.

