ನವದೆಹಲಿ: ಯುದ್ಧ ಪೀಡಿತ ಪ್ಯಾಲೆಸ್ಟೀನ್‌ಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ, ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸೋಮವಾರ ಸಂಸತ್‌ನೊಳಗೆ ‘ಪ್ಯಾಲೆಸ್ಟೀನ್’ ಎಂಬ ಬರಹವಿರುವ ಬ್ಯಾಗ್ ಧರಿಸಿಕೊಂಡು ಬಂದಿದ್ದು, ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ. ಇದೇ ಮೊದಲ ಬಾರಿ ಸಂಸತ್ ಪ್ರವೇಶಿಸಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಭಾರೀ ಚರ್ಚೆಗೆ ಗ್ರಾಸವಾಗುವಂತಹ ಕೆಲಸವೊಂದನ್ನು ಮಾಡಿದ್ದಾರೆ. ವಯನಾಡ್‌ನ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಪ್ಯಾಲೆಸ್ತೀನ್‌ಗೆ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದಾರೆ.
ಇತ್ತೀಚೆಗಷ್ಟೇ ಸಂಸತ್ತಿಗೆ ಕಾಲಿಟ್ಟ ಪ್ರಿಯಾಂಕಾ ಗಾಂಧಿ ವಾದ್ರಾ ಈಗ ಹೊಸ ವಿವಾದ ಮೈಲೇಲೆ ಎಳೆದುಕೊಂಡಿದ್ದಾರೆ. ಪ್ಯಾಲೆಸ್ತೀನ್ ಎಂದು ಬರೆದಿರುವ ಬ್ಯಾಗ್ ಹಿಡಿದು ಸಂಸತ್ ಆಗಮಿಸಿದ ಪ್ರಿಯಾಂಕಾ ಫೋಟೋ ವೈರಲ್ ಆಗಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಪ್ಯಾಲೆಸ್ತೀನ್ ಮೇಲಿನ ಪ್ರಿಯಾಂಕಾ ಪ್ರೀತಿಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗಳು ಕೇಳಿಬರುತ್ತಿವೆ,.
ಸಂಸದೆ ಪ್ರಿಯಾಂಕಾ ಗಾಂಧಿ ಪ್ಯಾಲೆಸ್ತೀನ್ ಜನರಿಗೆ ಬೆಂಬಲ ಮತ್ತು ಒಗ್ಗಟ್ಟನ್ನು ಪ್ರದರ್ಶಿಸುತ್ತಿದ್ದಾರೆ ಎನ್ನಲಾಗಿದೆ. ಇನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ವಯನಾಡ್ ಸಂಸದೆಯಾಗಿರುವ ಪ್ರಿಯಾಂಕಾ ಗಾಜಾದ ಮೇಲೆ ಇಸ್ರೇಲ್ ದಾಳಿಯನ್ನು ಖಂಡಿಸುತ್ತಲೇ ಇದ್ದರು. ಅದೇ ರೀತಿ ಇದೀಗ ಮತ್ತೆ ತಮ್ಮ ನಿಲುವನ್ನು ಪ್ರದರ್ಶಿಸಿದ್ದಾರೆ.‘
ಮುಸ್ಲಿಂ ರಾಷ್ಟ್ರ ಪ್ಯಾಲೆಸ್ತೇನ್ ಗೆ ಬೆಂಬಲ ವ್ಯಕ್ತಪಡಿಸುತ್ತಿರುವ ಪ್ರಿಯಾಂಕ ವಾದ್ರ, ಆಗಾಗ್ಗೆ ಇಸ್ರೇಲ್‌ನಲ್ಲಿ ನೆತನ್ಯಾಹು ಸರ್ಕಾರವನ್ನು ದೂಷಿಸುತ್ತಿರುತ್ತಾರೆ.