ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ಮತ್ತು ಖಲಿಸ್ತಾನ್ (Khalistan) ಪರ ಘೋಷಣೆಗಳನ್ನು ಬರೆದಿರುವುದು ದೆಹಲಿಯ ಮೆಟ್ರೋ ಪಿಲ್ಲರ್ಗಳಲ್ಲಿ (Delhi Metro Pillars) ಭಾನುವಾರ ಪತ್ತೆಯಾಗಿದೆ.
ಮಾಹಿತಿ ಪ್ರಕಾರ ಯುನೈಟೆಡ್ ಸ್ಟೇಟ್ಸ್ ಮೂಲದ ನಿಷೇಧಿತ ಸಿಖ್ ಪ್ರತ್ಯೇಕತಾವಾದಿ ಗುಂಪು ಸಿಖ್ಸ್ ಫಾರ್ ಜಸ್ಟಿಸ್ ಬೆಂಬಲಿಗರು ಕರೋಲ್ ಬಾಗ್ ಮತ್ತು ಝಾಂಡೇವಾಲನ್ ಮೆಟ್ರೋ ನಿಲ್ದಾಣಗಳಲ್ಲಿ ಈ ಘೋಷಣೆಗಳನ್ನು ಬರೆದಿದ್ದಾರೆ.
ಇನ್ನೂ ಈ ಕುರಿತು ಈಗಾಗಲೇ ದೆಹಲಿ ಪೊಲೀಸರು ದೆಹಲಿ ಮೆಟ್ರೋ ಅಧಿಕಾರಿಗಳಿಂದ ಸಿಸಿಟಿವಿ ದೃಶ್ಯಗಳನ್ನು ಪಡೆದುಕೊಂಡಿದ್ದು, ಎಫ್ಐಆರ್ ದಾಖಲಿಸಿಕೊಂಡು ಈ ಸಂಬಂಧ ತನಿಖೆ ನಡೆಸಲು ತಂಡಗಳನ್ನು ಈಗಾಗಲೇ ರಚಿಸಲಾಗಿದೆ. ಆರೋಪಿಗಳ ಪತ್ತೆಗೆ ಮೆಟ್ರೋ ನಿಲ್ದಾಣಗಳಲ್ಲಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಗೀಚುಬರಹ ಮತ್ತು ಘೋಷಣೆಗಳನ್ನು ಅಳಿಸಲಾಗಿದೆ. ಐಪಿಸಿಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣವನ್ನು ಕೂಡ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಮತವನ್ನು ನಮ್ಮ ಪ್ರಜಾಪ್ರಭುತ್ವವ ಬಲಪಡಿಸಲು ಚಲಾಯಿಸಿ: ಮೋದಿ ಕರೆ
ಭದ್ರತಾ ಸಿಬ್ಬಂದಿಯೊಬ್ಬರು ಭಾನುವಾರ ಬೆಳಗ್ಗೆ ಕರ್ತವ್ಯಕ್ಕೆ ಬಂದಾಗ ಮೆಟ್ರೊ ನಿಲ್ದಾಣದ ಪಿಲ್ಲರ್ಗಳ ಮೇಲೆ ಕಪ್ಪು ಬಣ್ಣದಲ್ಲಿ ಬರೆದಿರುವ ಘೋಷಣೆಗಳನ್ನು ಗಮನಿಸಿದ್ದಾರೆ. ಹೀಗಾಗಿ ಅವರು ಪ್ರತಿಕ್ರಿಯಿಸಿ, ನಾನು ಬೆಳಗ್ಗೆ 8 ಗಂಟೆಗೆ ಡ್ಯೂಟಿಗೆ ಬಂದಿದ್ದೇನೆ. ಈ ವೇಳೆ ಮೆಟ್ರೋ ನಿಲ್ದಾಣದ ಪಿಲ್ಲರ್ಗಳ ಮೇಲೆ ಕಪ್ಪು ಬಣ್ಣದಲ್ಲಿ ಏನೋ ಬರೆದಿರುವುದನ್ನು ಗಮನಿಸಿದ್ದೇನೆ. ಈ ವೇಳೆ ಅಲ್ಲಿ ಸಾಕಷ್ಟು ಜನ ಸೇರಿದ್ದು, ಗೋಡೆ ಬರಹಗಳನ್ನು ಓದುತ್ತಿದ್ದರು ಎಂದು ತಿಳಿಸಿದರು. ಇದನ್ನೂ ಓದಿ: ದೂದ್ಗಂಗಾ ನದಿಯಲ್ಲಿ ಹೆಚ್ಚಿದ ಮೊಸಳೆ ಕಾಟ: ಸ್ನಾನಕ್ಕೆ ತೆರಳಿದ ರೈತ ಮೊಸಳೆ ಬಾಯಿಗೆ ಸಿಕ್ಕಿ ಸಾವು
ರಾತ್ರಿ ಹೊತ್ತು ಈ ಘೋಷಣೆಗಳನ್ನು ಬರೆಯಲಾಗಿದೆ. ಯಾಕೆಂದರೆ ಆ ಸಮಯದಲ್ಲಿ ಯಾರೂ ಇರುವುದಿಲ್ಲ. ಈ ಘೋಷಣೆಗಳನ್ನು ಯಾರು ಬರೆದಿದ್ದಾರೆ ಎಂಬುದು ತಿಳಿದಿಲ್ಲ ಎಂದು ಅವರು ಹೇಳಿದರು. ಇದನ್ನೂ ಓದಿ: Kidnap Case ಗೆ ಟ್ವಿಸ್ಟ್; ಯಾರೂ ಬಲವಂತವಾಗಿ ಕರೆದೊಯ್ದಿಲ್ಲ, ಕಿಡ್ನ್ಯಾಪ್ ಮಾಡಿಲ್ಲ: ಸಂತ್ರಸ್ತೆ ಸ್ಪೋಟಕ ಹೇಳಿಕೆ