ಬೆಳಗಾವಿ : ಖಾನಾಪೂರ ಪಟ್ಟಣದಲ್ಲಿ ಕೆ ಎಸ್ ಆರ್ ಟಿ ಸಿ ಯಿಂದ ಸಾರ್ವಜನಿಕರಿಗೆ ಸಾಕಷ್ಟು ಕಿರಿಕಿರಿ ಆಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಯುವ ರಕ್ಷಣಾ ವೇದಿಕೆ ಯಿಂದ ಪ್ರತಿಭಟನೆ ಮಾಡಲಾಯಿತು.
ಶಕ್ತಿ ಯೋಜನೆಯ ನೆಪ ಹೇಳಿ ಕೆಲವು ಸ್ಥಳಗಳಲ್ಲಿ ನಿಲುಗಡೆ ಆದೇಶವಿದ್ದರೂ ಚಾಲಕರು ಬಸ್ಸ ನಿಲ್ಲಿಸುತ್ತಿಲ್ಲ ಮತ್ತು ಮಹಿಳೆಯರಿಗೆ ನಿರ್ವಾಹಕರು ಅಸಭ್ಯವಾಗಿ ವರ್ತಿಸುತ್ತಿದ್ದಾರೆ
ಖಾನಾಪೂರ ಡಿಪೋದಲ್ಲಿ ಬಸ್ಸುಗಳ ಸಂಖ್ಯೆ ಕಡಿಮೆ ಇದ್ದು ಸುಮಾರು 15 ವರ್ಷಗಳ ಹಳೆಯ ಬಸ್ಸುಗಳನ್ನ ಓಡಿಸುತ್ತಿರುವದರಿಂದ ಎಲ್ಲಿ ಬೇಕೆಂದರಲ್ಲಿ ಕೇಟ್ಟು ನಿಲ್ಲುತ್ತಿವೆ ಮೊದಲೆ ಕಾಡು ಪ್ರದೇಶ ಇರುವುದರಿಂದ ಸಾರ್ವಜನಿಕರು ಪರದಾಡುವಂತಾಗುತ್ತಿದೆ
ರಾತ್ರಿ ಸಮಯದಲ್ಲಿ ಬೆಳಗಾವಿಯಿಂದ ಗೋವಾ ತೇರಳುವ ಬಸ್ಸುಗಳು ಬಸ್ಸು ನಿಲ್ದಾಣಕ್ಕೆ ಬಾರದೆ ಬಾಯಪಾಸ ಹೋಗುತ್ತಿದ್ದಾರೆ ಮತ್ತು ಪಟ್ಟಣದ ಶಿವಾಜಿ ಸರ್ಕಲ್ ಹತ್ತಿರ ಮೊದಲಿನಿಂದಲೂ ಅಧಿಕೃತ ನಿಲುಗಡೆ ಇದೆ ಈ ನಿಲುಗಡೆಯಿಂದ ಸಾರ್ವಜನಿಕರಗೆ ತಹಸೀಲ್ದಾರ್ ಕವೇರಿ ರೈಲ್ವೆ ಸ್ಟೇಷನ್ ಆಸ್ಪತ್ರೆ ಮಾರ್ಕೇಟ ಬ್ಯಾಂಕಗಳು ಹತ್ತಿರವಾಗುತ್ತಿದೆ ಆದರೆ ಈಗ ಅಟೊದವರ ಹೋಟ್ಟೆ ತುಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ
ಇನ್ನಿತರ ಹಲವಾರು ಸಮಸ್ಯೆಗಳನ್ನಿಟ್ಟುಕೊಂಡು ಡಿಫೋ ಮ್ಯಾನೇಜರ್ ಅವರಿಗೆ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದರು ಮನವಿ ಸ್ವೀಕರಿಸಿದ ಅದಿಕಾರಿಗಳು ಆದಷ್ಟು ಬೇಗ ಕ್ರಮ ಕೈಗೊಳ್ಳುವ ಬರವಸೆ ನೀಡಿದರು ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ತಾಲೂಕಾ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು
ವರದಿ. ದಯಾನಂದ ಎಂ.

