By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಮೈಸೂರು ಸಿಲ್ಕ್ ಮುಚ್ಚುವ ಪ್ರಯತ್ನ ಏಕೆ..? : ‘ಸೇವ್ ಮೈಸೂರು ಸಿಲ್ಕ್’ ಅಭಿಯಾನಕ್ಕೆ ಆರ್.ಅಶೋಕ್ ಎಚ್ಚರಿಕೆ
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ರಾಜ್ಯ-Karnataka - ಮೈಸೂರು ಸಿಲ್ಕ್ ಮುಚ್ಚುವ ಪ್ರಯತ್ನ ಏಕೆ..? : ‘ಸೇವ್ ಮೈಸೂರು ಸಿಲ್ಕ್’ ಅಭಿಯಾನಕ್ಕೆ ಆರ್.ಅಶೋಕ್ ಎಚ್ಚರಿಕೆ

ರಾಜ್ಯ-KarnatakaLatest

ಮೈಸೂರು ಸಿಲ್ಕ್ ಮುಚ್ಚುವ ಪ್ರಯತ್ನ ಏಕೆ..? : ‘ಸೇವ್ ಮೈಸೂರು ಸಿಲ್ಕ್’ ಅಭಿಯಾನಕ್ಕೆ ಆರ್.ಅಶೋಕ್ ಎಚ್ಚರಿಕೆ

R. Ashok warns against ‘Save Mysore Silk’ campaign

Published February 27, 2026
Share
3 Min Read
R Ashok
SHARE

ಮೈಸೂರು: ಬೇಡಿಕೆಯೂ ಇದೆ, ಸಂಸ್ಥೆಯೂ ಇದೆ, ಲಾಭವೂ ಇದೆ. ಅಂತಹ ಸ್ಥಿತಿಯಲ್ಲಿ ಸಂಸ್ಥೆ ಮುಚ್ಚುವ ಪ್ರಯತ್ನ ಏಕೆ? ನಾವು ‘ಸೇವ್ ಮೈಸೂರು ಸಿಲ್ಕ್’ ಅಭಿಯಾನ ಆರಂಭಿಸುತ್ತೇವೆ ಎಂದು ವಿಪಕ್ಷ ನಾಯಕ R. Ashoka ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಮೈಸೂರಿನಲ್ಲಿ ಮಾತನಾಡಿದ ಅವರು, ಸಿಲ್ಕ್ ಹಾಗೂ ಮಿಲ್ಕ್ ಎರಡೂ ರಾಜ್ಯದ ಹೆಮ್ಮೆ ಮತ್ತು ಬ್ರ್ಯಾಂಡ್. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯಿಂದ 112 ವರ್ಷಗಳ ಹಿಂದೆ ವಿದೇಶದಿಂದ ಯಂತ್ರೋಪಕರಣ ತಂದು ಸ್ಥಾಪಿಸಿದ ಸಂಸ್ಥೆಯಿದು. ರೈತರಿಗೆ ಅನುಕೂಲ ಮತ್ತು ಉದ್ಯೋಗ ಸೃಷ್ಟಿ ಉದ್ದೇಶದಿಂದ ಈ ಕಾರ್ಖಾನೆ ಆರಂಭಿಸಲಾಯಿತು ಎಂದು ಹೇಳಿದರು.

ಚನ್ನಪಟ್ಟಣದಲ್ಲಿ ನಾಲ್ಕು ನೂರು ಜನ ಕೆಲಸ ಮಾಡುತ್ತಿದ್ದಾರೆ. ತಿ.ನರಸೀಪುರದಲ್ಲಿ 13 ಎಕರೆ ಭೂಮಿ ಇದ್ದು, ಅದರಲ್ಲೂ 6 ಎಕರೆ ಕ್ರೀಡಾಂಗಣಕ್ಕೆ ಪರಭಾರೆ ಮಾಡಲಾಗಿದೆ. ಚನ್ನಪಟ್ಟಣದಲ್ಲಿ ಪ್ರತಿದಿನ 1200–1400 ಸೀರೆಗಳು ತಯಾರಾಗುತ್ತಿದ್ದು, ಅವು ಒಂದೇ ದಿನದಲ್ಲಿ ಮಾರಾಟವಾಗುತ್ತವೆ. ಚಾಮುಂಡಿ ತಾಯಿಗೆ ಇದೇ ಸೀರೆಯನ್ನು ಉಡುಗೆಯಾಗಿ ತೊಡುವ ಸಂಪ್ರದಾಯವಿದೆ. ಮದುವೆ ಹಾಗೂ ಆರತಕ್ಷತೆಗಳಿಗೆ ಪವಿತ್ರತೆಯಿಂದ ಈ ಸೀರೆ ಬಳಸಲಾಗುತ್ತದೆ. ರೇಷ್ಮೆ ಸೀರೆಯಿಂದಲೇ 96 ಕೋಟಿ ರೂ. ಲಾಭ ಬಂದಿದೆ ಎಂದು ಅವರು ತಿಳಿಸಿದರು.

ಸೀರೆಯ ಮೌಲ್ಯ ಹೆಚ್ಚಿಸಲು ವಿದೇಶಕ್ಕೆ ತೆರಳಿ 1.40 ಕೋಟಿ ರೂ. ಖರ್ಚು ಮಾಡಿ ಅಧ್ಯಯನ ನಡೆಸಿದ್ದಾರೆ. ಬೇಡಿಕೆ, ಲಾಭ, ಉದ್ಯೋಗ—ಎಲ್ಲವೂ ಇದ್ದಾಗ ಸಂಸ್ಥೆ ಮುಚ್ಚುವ ಯತ್ನ ಏಕೆ ಎಂದು ಪ್ರಶ್ನಿಸಿದರು. 2000ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುವ ಈ ಸಂಸ್ಥೆಯ ಜಾಗದಲ್ಲೇ ಕ್ರೀಡಾಂಗಣ ಮಾಡಬೇಕು ಎನ್ನುವುದು ಏಕೆ? ದೇವರು ಇದೇ ಜಾಗದಲ್ಲಿ ಮಾಡಬೇಕು ಎಂದು ಹೇಳಿದ್ದಾನಾ? ಎಂದು ಕಟುವಾಗಿ ಪ್ರಶ್ನಿಸಿದರು.

ಕಾರ್ಖಾನೆಯಿಂದ ಉಂಟಾಗುವ ವಾಸನೆ ನಿವಾರಣೆಗೆ ಸಾವಿರಾರು ಮರಗಳನ್ನು ನೆಟ್ಟಿದ್ದಾರೆ. ಒಂದೆಡೆ ಮರಗಳನ್ನು ಕಡಿದು, ಮತ್ತೊಂದೆಡೆ ಕಾರ್ಖಾನೆ ಮುಚ್ಚುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಗುತ್ತಿಗೆದಾರನಿಗೆ 12 ಕೋಟಿ ರೂ. ಮಂಜೂರಾಗಿದೆ. ಅವನ ಒತ್ತಡದಿಂದಲೇ ಈ ಕೆಲಸ ನಡೆಯುತ್ತಿದೆ. 60% ಕಮಿಷನ್ ಉದ್ದೇಶದಿಂದ ಒತ್ತಡ ತರುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಕ್ರೀಡಾಂಗಣಕ್ಕೆ 10ರಿಂದ 12 ಎಕರೆ ಭೂಮಿ ಅಗತ್ಯವಿದ್ದು, ಪಾರ್ಕಿಂಗ್‌ಗೆ ಇನ್ನಷ್ಟು ಜಾಗ ಬೇಕು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕನ ಮಿಲ್‌ಗೆ ಸಪ್ಲೈ ಮಾಡಲು ಈ ಕಾರ್ಖಾನೆಯನ್ನು ಮುಳುಗಿಸುವ ಪ್ಲಾನ್ ರೂಪಿಸಿದ್ದಾರೆ ಎಂದು ಆರೋಪಿಸಿದರು.

ಮೈಸೂರು ಸ್ಯಾಂಡಲ್ ಸೋಪ್‌ಗೆ ನಟಿ Tamannaah Bhatia ಅವರನ್ನು ರಾಯಭಾರಿಯಾಗಿ ನೇಮಿಸಿರುವುದರ ಬಗ್ಗೆ ಪ್ರತಿಕ್ರಿಯಿಸಿ, ಅವರಿಗೆ ಎರಡು ಕೋಟಿ ರೂ. ನೀಡಲಾಗಿದೆ. ಕನ್ನಡದವರಲ್ಲಿ ಯಾರೂ ಸಿಗಲಿಲ್ಲವೇ? ಎಂದು ಪ್ರಶ್ನಿಸಿದರು. Rashmika Mandanna ಹೆಚ್ಚು ಫೇಮಸ್. Yash ಅವರ ಪತ್ನಿ, ಮಕ್ಕಳಿಗೆ ಐದು ಕೋಟಿ ನೀಡಿದ್ದರೆ ಅವರು ನಮ್ಮ ಹೆಮ್ಮೆ ಎಂದು ಮಾಡುತ್ತಿದ್ದರು. ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಬೇಡಿ ಎಂದು ಹರಿಹಾಯ್ದರು.

ಮೈಸೂರಿನ ಮಹಾರಾಜರ ಕುರಿತು ಹೇಳಿಕೆಗಳಿಗೂ ಪ್ರತಿಕ್ರಿಯಿಸಿದ ಅವರು, ಕೆಆರ್‌ಎಸ್ ಡ್ಯಾಂ ನಿರ್ಮಾಣ ಮೈಸೂರು ಮಹಾರಾಜರ ಸಾಧನೆ. ಆದರೆ ಅದನ್ನು ಟಿಪ್ಪು ಸುಲ್ತಾನ್‌ಗೆ ಸಂಬಂಧಿಸಿದಂತೆ ಹೇಳಲಾಗುತ್ತಿದೆ ಎಂದು ಟೀಕಿಸಿದರು. ಎಲ್ಲದರಲ್ಲೂ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.

ಆರನೇ ತಾರೀಖು ಸದನ ನಡೆಯಲಿದ್ದು, ಧಾರವಾಡದಂತೆ ಇದಕ್ಕೂ ತೀರ್ಮಾನ ಕೈಗೊಳ್ಳಿ. ಇಲ್ಲವಾದರೆ ಒಳಗೂ ಹೊರಗೂ ಹೋರಾಟ ಮುಂದುವರಿಸುತ್ತೇವೆ ಎಂದು ಎಚ್ಚರಿಸಿದರು.

ನಮ್ಮ ಹೋರಾಟ 50 ಸಾವಿರ ಉದ್ಯೋಗಕ್ಕಲ್ಲ, 2.84 ಲಕ್ಷ ಉದ್ಯೋಗಗಳಿಗಾಗಿ. ಗೆಜೆಟ್ ಅಧಿಸೂಚನೆ ಹೊರಡಿಸಿ. ಬಾಯಿ ಮಾತಿಗೆ ಹೇಳಬೇಡಿ. ಯಾವಾಗ ಆದೇಶ ಹೊರಡಿಸುತ್ತೀರಿ ಎಂದು ಪ್ರಶ್ನಿಸಿದರು. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪಾದಯಾತ್ರೆ ನಿರ್ಧರಿಸಲಾಗಿತ್ತು. 50 ಸಾವಿರ ಹುದ್ದೆಗಳ ಭರ್ತಿಗೆ ಘೋಷಣೆ ಮಾಡಿರುವುದರಿಂದ ತಾತ್ಕಾಲಿಕವಾಗಿ ಕೈಬಿಟ್ಟಿದ್ದೇವೆ ಎಂದು ಆರ್.ಅಶೋಕ್ ತಿಳಿಸಿದ್ದಾರೆ.

You Might Also Like

Virat Kohli : ಬೆಂಗಳೂರಲ್ಲಿರುವ ವಿರಾಟ್​​ ಕೊಹ್ಲಿ ಮಾಲೀಕತ್ವದ ಪಬ್​​ ವಿರುದ್ಧ ಕೇಸ್​​

ಸಾರಿಗೆ ನೌಕರರ ಮುಖಂಡ ಅನಂತ್ ಸುಬ್ಬರಾವ್ ನಿಧನ

ರಾಜ್ಯದಲ್ಲಿ ಗ್ಯಾಸ್ ಸಿಲಿಂಡರ್ ಸಮಸ್ಯೆಗೆ ಕೇಂದ್ರ ಸರ್ಕಾರವೇ ಕಾರಣ : ಪ್ರದೀಪ್ ಈಶ್ವರ್

Iran-Israel War : ಪರಮಾಣು ಕೇಂದ್ರಗಳ ದಾಳಿ ನಡೆಸುವ ಮೂಲಕ ಇಸ್ರೇಲ್-ಇರಾನ್ ಯುದ್ಧಕ್ಕೆ ಅಮೇರಿಕ ಎಂಟ್ರಿ

ಸತತ 10ನೇ ಬಾರಿಗೆ ಯಥಾಸ್ಥಿತಿಯಲ್ಲೇ ಮುಂದುವರೆದ ರೆಪೋ ದರ

TAGGED:Save Mysore Silk
Share This Article
Facebook Copy Link Print
Previous Article arvind kejriwal ಮದ್ಯ ನೀತಿ ಹಗರಣ : ಕೇಜ್ರಿವಾಲ್, ಸಿಸೋಡಿಯಾ ಸೇರಿ 23 ಆರೋಪಿಗಳ ಖುಲಾಸೆ
Next Article Subba Reddy ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿಗೆ ತಾತ್ಕಾಲಿಕ ರಿಲೀಫ್: ಹೈಕೋರ್ಟ್ ತೀರ್ಪಿಗೆ ಸುಪ್ರೀಂ ತಡೆ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

Bus Bus Bus
ಪೆಟ್ರೋಲ್ ಬಂಕ್‌ಗೆ ಬಸ್ ನುಗ್ಗಿಸಿ ಆವಾಜ್ ಹಾಕಿದ ಚಾಲಕ
ಬೆಳಗಾವಿ-Belagavi
April 17, 2026
Parameshwar Parameshwar Parameshwar
ಸಿಎಂ ಸಿದ್ದರಾಮಯ್ಯನವರನ್ನು ಕೊಂಡಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ
ಬೆಳಗಾವಿ-Belagavi
April 17, 2026
Bid Bid Bid
ಬೀದರ್: ಮಹಾನಗರ ಪಾಲಿಕೆ ಬಜೆಟ್ ವಿಚಾರಕ್ಕೆ ಜಗಳ, ಸಭೆಯಲ್ಲಿ ಹೈಡ್ರಾಮಾ
ಬೀದರ್​-Bidar
April 17, 2026
Vinay Kulkarni Yogesh Gow Vinay Kulkarni Yogesh Gow Vinay Kulkarni Yogesh Gow
ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ
ರಾಜ್ಯ-Karnataka
April 17, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up