ರಾಜ್‌ಕೋಟ್: ಇಲ್ಲಿನ ಟಿಆರ್ಪಿ ಗೇಮ್ ಝೋನ್ನ (Game Zone) ಮಾಲೀಕ ಪ್ರಕಾಶ್ ಹಿರಾನ್ (Prakash Iran) ಕೂಡ ನಡೆದ ಅಗ್ನಿ ದುರಂತ(Fire Accident)ದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಆಟದ ವಲಯದಲ್ಲಿ ಪತ್ತೆಯಾದ ಅವಶೇಷಗಳಿಂದ ತೆಗೆದ ಡಿಎನ್ಎ(DNA) ಮಾದರಿಯು ಪ್ರಕಾಶ್ ಅವರ ತಾಯಿಯ (Mother) ಡಿಎನ್ಎ ಜತೆ ಹೊಂದಿಕೆಯಾಗಿದ್ದು, ಅವರು ಸಾವನ್ನಪ್ಪಿದ್ದಾರೆ ಎಂದು ದೃಢಪಟ್ಟಿದೆ. ಇದನ್ನೂ ಓದಿ: ಸರ್ಕಾರದಿಂದ ರಾಜ್ಯದ ಅನ್ನದಾತರಿಗೆ ಭಾರೀ ಶಾಕ್- ರೈತರ ಆಕ್ರೋಶ
ಬೆಂಕಿ ಅವಘಡ ಸಂಭವಿಸಿದ ಸಂರ್ಧಬದಲ್ಲಿ ಪ್ರಕಾಶ್ ಹಿರನ್ ಅವರು ಸಿಸಿಟಿವಿಯಲ್ಲಿ ಸೆರೆಯಾಗಿದ್ದಾರೆ. ಬೆಂಕಿ ಅವಘಡದ ನಂತರ ಪ್ರಕಾಶ್ ಹಾಗೂ ತಮ್ಮ ಕುಟುಂಬಕ್ಕೆ ಯಾವುದೇ ಸಂಪರ್ಕವಿರಲಿಲ್ಲ, ಎಲ್ಲಾ ಫೋನ್ ಸ್ವಿಚ್ಡ್ ಆಫ್ ಬರುತ್ತಿದೆ, ಘಟನೆ ನಡೆದ ಸ್ಥಳದಲ್ಲಿ ಪ್ರಕಾಶ್ ಅವರ ಕಾರು ಕೂಡ ಇದೆ ಎಂದು ಅವರ ಸಹೋದರ ಜಿತೇಂದ್ರ ಪೊಲೀಸರಿಗೆ ಮನವಿ ಮಾಡಿದ್ದರು.

ಸಹೋದರ ಜಿತೇಂದ್ರ ಮನವಿ ಮೇರೆಗೆ ಕುಟುಂಬದಿಂದ ಡಿಎನ್ಎ ಮಾದರಿಯನ್ನು ತೆಗೆದುಕೊಳ್ಳಲಾಗಿತ್ತು. ಮೃತದೇಹ ಪ್ರಕಾಶ್ ಅವರದ್ದೇ ಎಂದು ಡಿಎನ್ಎ ಪರೀಕ್ಷೆ ಮೂಲಕ ತಿಳಿದುಬಂದಿದೆ. ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿ ಮಾಡಿದ ಮುಖ್ಯಶಿಕ್ಷಕ
ಪ್ರಕರಣವೇನು?
ಕಳೆದ ಶನಿವಾರ ರಾಜ್ಕೋಟ್ನ ಟಿಆರ್ಪಿ ಗೇಮ್ ಝೋನ್ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಈ ಘಟನೆಯಲ್ಲಿ 28 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ 12 ಜನ ಮಕ್ಕಳು ಸಹ ಮೃತಪಟ್ಟಿದ್ದಾರೆ. ಮೃತದೇಹಗಳೆಲ್ಲಾ ಸುಟ್ಟು ಕರಕಲಾಗಿದ್ದು, ಗುರುತು ಪತ್ತೆ ಹೆಚ್ಚುವುದು ಕೂಡ ಕಷ್ಟಕರವಾಗಿತ್ತು. ಹೀಗಿರುವಾಗ ಗೇಮ್ ಝೋನ್ ಮಾಲೀಕರೊಬ್ಬರು ಸುಟ್ಟು ಕರಕಲಾಗಿದ್ದಾರೆ. ದ್ರ ಸಚಿವ ಮತ್ತು ಬಿಜೆಪಿ ರಾಜ್‌ಕೋಟ್ ಲೋಕಸಭಾ ಅಭ್ಯರ್ಥಿ ಪರಶೋತ್ತಮ್ ರೂಪಾಲಾ ಅವರು ಮಂಗಳವಾರ ಮಧ್ಯಾಹ್ನ ರಾಜ್‌ಕೋಟ್ ಸಿವಿಲ್ ಆಸ್ಪತ್ರೆಗೆ ರಾಜ್ಯಸಭಾ ಸಂಸದ ರಂಭಾಯ್ ಮೊಕರಿಯಾ ಅವರೊಂದಿಗೆ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದರು. ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ರೆಮಲ್ ಚಂಡಮಾರುತ ಆರ್ಭಟ; ಸಾವಿನ ಸಂಖ್ಯೆ 37 ಕ್ಕೆ ಏರಿಕೆ


