ಬೆಂಗಳೂರು: ರೇವ್ ಪಾರ್ಟಿ (Rave Party) ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ (CCB) ನೀಡಿದ ನೋಟಿಸ್‌ಗೆ ನಟಿ ಹೇಮಾ (Hema) ವಿಚಾರಣೆಗೆಂದು ಬೆಂಗಳೂರಿನ ಸಿಸಿಬಿ ಕಚೇರಿಗೆ ಹಾಜರಾಗಿದ್ದಾರೆ.
ಈ ಹಿಂದೆ ಸಹ ಸಿಸಿಬಿ ವಿಚಾರಣೆಗೆ ಹಾಜರಾಗುವಂತೆ ನೋಡಿಸ್ ನೀಡಲಾಗಿತ್ತು. ಆದರೆ ಅವರು ಅಂದು ಹಾಜರಾಗದೇ ಸಮಯಾವಕಾಶ ಕೇಳಿದ್ದರು.
ಹೇಮಾ ಹಾಜರಾಗದ ಹಿನ್ನೆಲೆಯಲ್ಲಿ 2ನೇ ನೋಟಿಸ್ ಕೂಡ ನೀಡಿದ್ದರು ಸಿಸಿಬಿ ಅಧಿಕಾರಿಗಳು. ಇಂದು ಸಂಜೆ 4 ಗಂಟೆಗೆ ಬೆಂಗಳೂರಿಗೆ ಆಗಮಿಸಿರುವ ಹೇಮಾ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ. ಹೇಮಾ ಅವರ ವಿಚಾರಣೆಯನ್ನು ಅಧಿಕಾರಿಗಳು ಸಿಸಿಬಿ ಕಚೇರಿಯಲ್ಲಿ ಮಾಡುತ್ತಿದ್ದಾರೆ. ಇದನ್ನೂ ಓದಿ: ಬೌರಿಂಗ್ ಆಸ್ಪತ್ರೆಯಲ್ಲಿ ಪ್ರಜ್ವಲ್‍ಗೆ ಮೆಡಿಕಲ್ ಟೆಸ್ಟ್
ಮೊನ್ನೆಯಷ್ಟೇ ಡ್ರಗ್ಸ್ ಸೇವನೆಗೆ ಸಂಬಂಧಿಸಿದಂತೆ ಹೇಮಾ ರಿಪೋರ್ಟ್ ಪಾಸಿಟೀವ್ ಬಂದಿತ್ತು. ಆನಂತರ ಮೊದಲ ನೋಟಿಸ್ ನೀಡಲಾಗಿತ್ತು. ಅನಾರೋಗ್ಯದ ಕಾರಣಕೊಟ್ಟು ಕಾಲಾವಕಾಶ ಕೇಳಿದ್ದರು ನಟಿ ಹೇಮಾ. ಆನಂತರ 2ನೇ ನೋಟಿಸ್ ನೀಡಲಾಗಿತ್ತು. ಎರಡನೇ ನೋಟಿಸ್ ಗೆ ಸಿಸಿಬಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಇದನ್ನೂ ಓದಿ: ನಾವು 15 ರಿಂದ 20 ಸ್ಥಾನ ಗೆದ್ದೇ ಗೆಲ್ತೇವೆ- ಸಿದ್ದರಾಮಯ್ಯ

