ನಗರದ ಎಲೆಕ್ಟ್ರಾನಿಕ್ ಸಿಟಿಯ (Electronic City) ಫಾರ್ಮ್‍ಹೌಸ್‍ನಲ್ಲಿ ನಡೆದ ರೇವ್ ಪಾರ್ಟಿ (Rave Party) ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಹೇಮಾಗೆ (Hema) ಸಿಸಿಬಿ (CCB) ನೋಟಿಸ್ ನೀಡಿದ್ದಾರೆ.
ರೇವ್ ಪಾರ್ಟಿ ಪ್ರಕರಣ ಹೊರಗೆ ಬರುತ್ತಿದ್ಧಂತೆ ನಾನು ಹೈದರಾಬಾದ್‍ನಲ್ಲಿ ಇದ್ದೇನೆ ಎಂದು ವೀಡಿಯೋ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಹೇಮಾ ಹೈಡ್ರಾಮ ಸೃಷ್ಟಿಸಿದ್ದರು. ಇದೀಗ ಅವರಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ. ಇತ್ತ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರು ಹೇಮಾ ಅವರು ಡ್ರಗ್ಸ್ ಪಾರ್ಟಿಯಲ್ಲಿ ಇದ್ದರು ಎಂಬುದಾಗಿ ಸ್ಪಷ್ಟನೆ ನೀಡಿದ್ದರು.ಇದನ್ನೂ ಓದಿ: ವರ್ಷದ ಹಿಂದೆ ಮೈಸೂರಲ್ಲಿ ಮೋದಿ ತಂಗಿದ್ದ ಹೋಟೆಲ್ ಬಿಲ್ 80 ಲಕ್ಷ ಬಾಕಿ!
73 ಮಂದಿ ಪುರುಷರಲ್ಲಿ 59 ಮಂದಿ ಹಾಗೂ 30 ಮಂದಿ ಯುವತಿಯರ ಪೈಕಿ 27 ಮಂದಿಯ ಬ್ಲಡ್ ರಿಪೋರ್ಟ್ ಪಾಸಿಟಿವ್ ಎಂದು ಬಂದಿತ್ತು. ಈ ಮೂಲಕ ಪಾರ್ಟಿಯಲ್ಲಿ ಸೇರಿದ್ದ ಬಹುತೇಕ ಮಂದಿ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿತ್ತು. ಇದರಲ್ಲಿ ಹೇಮಾ ಅವರ ರಕ್ತದ ಮಾದರಿ ಸಹ ತೆಗೆದು ಮೆಡಿಕಲ್ ಟೆಸ್ಟ್ ಮಾಡಲಾಗಿತ್ತು. ಬಳಿಕ ಸ್ಟೇಷನ್ ಬೇಲ್ ಮೇಲೆ ಹೇಮಾರನ್ನು ಬಿಡುಗಡೆ ಮಾಡಲಾಗಿದೆ ಎಂದು ದಯಾನಂದ್ ಹೇಳಿದ್ದರು. ಅಲ್ಲದೇ ಪಾರ್ಟಿಯಲ್ಲಿ ಭಾಗವಹಿಸಿದ್ದ 103 ಮಂದಿಯ ಪೈಕಿ 86 ಮಂದಿಯ ಬ್ಲಡ್ ರಿಪೋರ್ಟ್ ಪಾಸಿಟಿವ್ ಬಂದಿತ್ತು. ಇದನ್ನೂ ಓದಿ: ಯತೀಂದ್ರ ಸಿದ್ದರಾಮಯ್ಯಗೆ ಪರಿಷತ್ ಸ್ಥಾನಕ್ಕಾಗಿ ಒಪ್ಪಂದ ಆಗಿತ್ತು: ಸತೀಶ್ ಜಾರಕಿಹೊಳಿ