ಮಂಡ್ಯ : ರೆಬಲ್ ಲೇಡಿ ಸುಮಲತಾ ಅಂಬರೀಷ್ ಅವರು ಮತ್ತೆ ಮಂಡ್ಯಕ್ಕೆ ಮರಳಿದ್ದಾರೆ. ಕಳೆದ ಲೋಕಸಭಾ ಚುನಾವಣೆ ನಂತ್ರ ಮಂಡ್ಯ ರಾಜಕಾರಣದಿಂದ ಅಂತರ ಕಾಯ್ದುಕೊಂಡಿದ್ದರು ಸುಮಲತಾ. ಜನವರಿ ನಂತರ ಮಂಡ್ಯ ರಾಜಕಾರಣದಲ್ಲಿ ಸಕ್ರಿಯೆಗೊಳ್ಳುವ ಬಗ್ಗೆ ಕಳೆದ ನವಂಬರ್ ನಲ್ಲಿ ಹೇಳಿಕೆ ನೀಡಿದ್ದರು.ಅದರಂತೆ ಮಂಡ್ಯ ನಗರದ ಬಂದಿಗೌಡ ಬಡಾವಣೆಯಲ್ಲಿ ಹೊಸ ಮನೆ ಬಾಡಿಗೆ ಪಡೆದಿದ್ದಾರೆ ಸುಮಲತಾ. ಕೆಲ ದಿನಗಳ ಹಿಂದೆಯೇ ನೂತನ ಬಾಡಿಗೆ ಮನೆಯಲ್ಲಿ ಹಾಲು ಉಕ್ಕಿಸುವ ಕಾರ್ಯ ನೆರವೇರಿದೆ. ಹೇಳಿಕೆಯಂತೆ ಹೊಸ ವರ್ಷದಲ್ಲಿ ಹೊಸ ಮನೆ ಪ್ರವೇಶ ಮಾಡಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಸುಮಲತಾ ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ . ಮಂಡ್ಯ ಕ್ಷೇತ್ರದ ಮೇಲೆ ಸುಮಲತಾ ಮತ್ತೆ ಕಣ್ಣೀಟ್ಟಿದ್ದಾರಾ? ಎಂಬ ಕುತೂಹಲ ಕೂಡ ಇದೆ. ಸುಮಲತಾ ರಾಜಕೀಯ ನಡೆ ಸದ್ಯಕ್ಕೆ ಕುತೂಹಲ ಮೂಡಿಸುವಂತಿದೆ.